ವೀರೇಂದ್ರ ಸೆಹ್ವಾಗ್ ಆಧುನಿಕ ವಿವಿಯನ್ ರಿಚರ್ಡ್ಸ್ ಎಂದ ಹರ್ಭಜನ್ ಸಿಂಗ್

ನವದೆಹಲಿ, ಅಕ್ಟೋಬರ್ 20: ಅಕ್ಟೋಬರ್ 20ರ ಇಂದು ತನ್ನ 40ನೇ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿರುವ ಮಾಜಿ ಆರಂಭಿಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಅವರನ್ನು ಮಾಜಿ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಅವರು ಆಧುನಿಕ ವಿವಿಯನ್ ರಿಚರ್ಡ್ಸ್ ಗೆ ಎಂದು ಕರೆದಿದ್ದಾರೆ.
ವಿರೇಂದ್ರ ಸೆಹ್ವಾಗ್ ಅವರು ಭಾರತ ತಂಡದಲ್ಲಿದ್ದಾಗ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದುದನ್ನು ಕ್ರಿಕೆಟ್ ಗೊತ್ತಿರುವ ಯಾರಾದರೂ ನೆನಪಿಸಿಕೊಳ್ಳಬಲ್ಲರು. ಅತ್ತ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸುತ್ತಿದ್ದ ಆ್ಯಂಟಿಗುವಾ ಕ್ರಿಕೆಟರ್ ವಿವಿಯನ್ ಅಲೆಕ್ಸಾಂಡರ್ ರಿಚರ್ಡ್ಸ್ ಕೂಡ ಸರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ಆಟಗಾರ. ಹೀಗಾಗಿ ಸೆಹ್ವಾಗ್ ಅವರನ್ನು ವಿವ್ ರಿಚರ್ಡ್ಸ್ ಗೆ ಹೋಲಿಸಿ ಭಜ್ಜಿ ಪ್ರೀತಿಯ ಶುಭಾಶಯ ಕೋರಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ 104 ಪಂದ್ಯಗಳನ್ನಾಡಿರುವ ಸೆಹ್ವಾಗ್, 82.23ರ ಸ್ಟ್ರೈಕ್ ರೇಟ್ ನಲ್ಲಿ, 49.34ರ ಸರಾಸರಿಯಲ್ಲಿ 8586 ರನ್ ಸಾಧನೆ ಮಾಡಿದ್ದಾರೆ. ಏಕದಿನದಲ್ಲಿ 251 ಪಂದ್ಯಗಳಲ್ಲಿ 104.33 ಸ್ಟ್ರೈಕ್ ರೇಟ್ ನಲ್ಲಿ 8273 ರನ್ ಪೇರಿಸಿದ್ದರು. ಟಿ20ಯಲ್ಲಿ ಇನ್ನೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ವೀರೇಂದ್ರ ಸೆಹ್ವಾಗ್ 19 ಪಂದ್ಯಗಳಲ್ಲಿ 145.38ರ ಸ್ಟ್ರೈಕ್ ರೇಟ್ ನಲ್ಲಿ 394 ರನ್ ಗಳಿಸಿದ್ದರು.
ಸಂತೋಷದ ಕ್ಷಣಗಳಿರಲಿ
'ಆಧುನಿಕ ಪೀಳಿಗೆಯ ವಿವಿಯನ್ ರಿಚರ್ಡ್ಸ್ ಆದ ಗೆಳೆಯ ವೀರೇಂದ್ರ ಸೆಹ್ವಾಗ್ ಅವರಿಗೆ ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು. ವರ್ಷದುದ್ದಕ್ಕೂ ನಿಮಗೆ ಸಂತೋಷದ ಕ್ಷಣಗಳಿರಲಿ' ಎಂದು ಹರ್ಭಜನ್ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಐಸಿಸಿ ಶುಭಾಶಯ
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತ ಪರ ಮೊದಲ ತ್ರಿ ಶತಕ ಬಾರಿಸಿದ್ದನ್ನು ಸ್ಮರಿಸಿಕೊಂಡಿರುವ ಐಸಿಸಿ, ಹೆಮ್ಮೆಯ ಆಟಗಾರನಿಗೆ ಪ್ರೀತಿಯ ಶುಭಾಶಯ ಕೋರಿದೆ. ಈ ವೇಳೆ ಸೆಹ್ವಾಗ್ 17,253 ರನ್ ಸಾಧನೆಯನ್ನು ಐಸಿಸಿ ನೆನಪಿಸಿದೆ.
ನೀಬೊಬ್ಬರು ಚಾಂಪಿಯನ್
ಮಾಜಿ ಸ್ಪೋಟಕ ಬ್ಯಾಟ್ಸ್ಮನ್ ಗೆ ಶುಭಾಶಯ ಹೇಳಿರುವ ಬಿಸಿಸಿಐ ಮಾಜಿ ಅಧ್ಯಕ್ಷ, ಬಿಜೆಪಿ ಲೋಕಸಭಾ ಸದಸ್ಯ ಅನುರಾಗ್ ಠಾಕೂರ್, ಮೈದಾನದಲ್ಲಿ ನಿಜಕ್ಕೂ ನೀವೊಬ್ಬರು ಚಾಂಪಿಯನ್ ಆಗಿ ಕಾಣುತ್ತಿದ್ರಿ. ಸ್ಫೋಟಕ ಬ್ಯಾಟಿಂಗ್ ಜೊತೆ ತಮಾಷೆಯಾಗಿಯೂ ಕ್ರಿಕೆಟ್ ಅನ್ನು ಸಂಭ್ರಮಿಸುತ್ತಿದ್ದವರು ನೀವು' ಎಂದು ಟ್ವೀಟ್ ಮಾಡಿದ್ದಾರೆ.
ಕ್ರಿಕೆಟ್ ಸುಲ್ತಾನ್ ಗೆ ಶುಭಾಶಯ
ಸಾಮಾಜಿಕ ಜಾಲತಾಣಗಳಲ್ಲಿ ಸೆಹ್ವಾಗ್ ಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಕ್ರಿಕೆಟ್ ದಿಗ್ಗಜನಿಗೆ ಶುಭ ಹಾರೈಸಿರುವ ಏಷ್ಯನ್ ಗೇಮ್ಸ್ ರಸ್ಲಿಂಗ್ ನಲ್ಲಿ ಬಂಗಾರ ಗೆದ್ದಿದ್ದ ಬಜರಂಗ್ ಪೂನಿಯಾ, ವಿರೇಂದ್ರ ಅವರನ್ನು ಕ್ರಿಕೆಟ್ ಸುಲ್ತಾನ್ ಎಂದು ಕೊಂಡಾಡಿದ್ದಾರೆ.
ಕ್ಯಾಪ್ಶನ್ ನ ಹಂಗಿಲ್ಲದ ಕೆಲ ಸ್ವೀಟ್ ಟ್ವೀಟ್ ಗಳು ಕೆಳಗಿವೆ..
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications