IND vs ENG: ಮೈದಾನದಲ್ಲಿ ನಾಯಕ ರೋಹಿತ್ ಶರ್ಮಾಗೆ ಬೈದ ಹಾರ್ದಿಕ್ ಪಾಂಡ್ಯ? ವಿಡಿಯೋ ವೈರಲ್

ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯ ಹಾಗೂ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಡಿ ಮುಗಿಸಿದೆ. ಮೊದಲಿಗೆ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲನ್ನು ಕಂಡ ಟೀಮ್ ಇಂಡಿಯಾ ನಂತರ ನಡೆದ ಟಿ ಟ್ವೆಂಟಿ ಸರಣಿಯಲ್ಲಿನ ಮೊದಲೆರಡು ಪಂದ್ಯಗಳಲ್ಲಿ ಗೆದ್ದು 2-1 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡು ಟೆಸ್ಟ್ ಪಂದ್ಯದ ಸೋಲಿನ ಸೇಡನ್ನು ತೀರಿಸಿಕೊಂಡಿತು.
ಹೀಗೆ ಟಿ ಟ್ವೆಂಟಿ ಸರಣಿಯನ್ನು ಕೈವಶ ಮಾಡಿಕೊಂಡಿರುವ ಟೀಮ್ ಇಂಡಿಯಾ ಇದೀಗ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿಯೂ ಕೂಡಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿ ಸರಣಿ ಗೆಲ್ಲುವ ಯೋಜನೆಯಲ್ಲಿದೆ. ಇದೇ ಸಮಯದಲ್ಲಿ ಸದ್ಯ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟಿ ಟ್ವೆಂಟಿ ಪಂದ್ಯಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ತಂಡದ ನಾಯಕ ರೋಹಿತ್ ಶರ್ಮಾಗೆ ಬೈದಿದ್ದಾರೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ಹೌದು, ಈ ವಿಡಿಯೋದಲ್ಲಿ ಸ್ಟಂಪ್ ಮೈಕ್ ಮೂಲಕ ರೆಕಾರ್ಡ್ ಆಗಿರುವ ಹಾರ್ದಿಕ್ ಪಾಂಡ್ಯ ಅವರ ಧ್ವನಿ ಸ್ಪಷ್ಟವಾಗಿಲ್ಲದೆ ಇದ್ದು, ನೆಟ್ಟಿಗರು ಮಾತ್ರ ಹಾರ್ದಿಕ್ ಪಾಂಡ್ಯ ಖಚಿತವಾಗಿ ರೋಹಿತ್ ಶರ್ಮಾಗೆ ಬೈಯುತ್ತಿದ್ದಾರೆ ಎಂದು ಹಲವಾರು ಟ್ವೀಟ್ ಮಾಡಿದ್ದಾರೆ.
#HardikAbusedRohit : Just by winning one ipl trophy hardik pandya is abusing the man who is five times winner in ipl and playing for india since 2007 and by the way he has shown this before with his another senior shami . pic.twitter.com/0zRnYnINwA
— ishwar dutta (editor_Ishwar) July 10, 2022
ನಾನು ಹೇಳಿದ್ದು ಕೇಳು ಅವನು ಹೇಳಿದ್ದನ್ನಲ್ಲ
ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟಿ ಟ್ವೆಂಟಿ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಆಟಗಾರನೋರ್ವನಿಗೆ 'ನಾನು ಬೌಲಿಂಗ್ ಮಾಡುವಾಗ ನಾನು ಹೇಳಿದ್ದನ್ನು ಕೇಳು, ನಾನು ಹೇಳಿದ ಕಡೆ ನಿಲ್ಲು, ಅವನು ಹೇಳಿದ್ದನ್ನಲ್ಲ' ಎಂದು ಹೇಳಿದ್ದಾರೆ ಎಂದು ವಿಡಿಯೋ ಹಂಚಿಕೊಳ್ಳುತ್ತಿರುವ ನೆಟ್ಟಿಗರು ತಮ್ಮ ಪೋಸ್ಟ್‌ಗಳಲ್ಲಿ ಬರೆದುಕೊಂಡಿದ್ದಾರೆ. ಹಾಗೂ ನಾಯಕನ ಕುರಿತು ಈ ರೀತಿ ಮೈದಾನದಲ್ಲಿಯೇ ಏಕವಚನದಲ್ಲಿ ಮಾತನಾಡುವುದು ಅಗೌರವ ಸೂಚಿಸಿದಂತೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಟ್ರೆಂಡ್ ಪಟ್ಟಿ ಸೇರಿದ ವಿಷಯ
ಇನ್ನು ಹಾರ್ದಿಕ್ ಪಾಂಡ್ಯ ರೋಹಿತ್ ಶರ್ಮಾಗೆ ನಿಂದಿಸಿದ್ದಾರೆ ಎಂಬ ವಿಷಯ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ. ಹಾರ್ದಿಕ್ ಪಾಂಡ್ಯ ಅಬ್ಯೂಸ್ಡ್ ರೋಹಿತ್ ಶರ್ಮಾ ಎಂಬ ಹ್ಯಾಷ್ ಟ್ಯಾಗ್ ಟ್ವಿಟ್ಟರ್ ಟ್ರೆಂಡಿಂಗ್ ಪಟ್ಟಿಯಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದೆ.

ಪಂದ್ಯದಲ್ಲಿ ಪಾಂಡ್ಯ ಮತ್ತು ರೋಹಿತ್ ಪ್ರದರ್ಶನ
ಜುಲೈ 9ರ ಶನಿವಾರದಂದು ಎಡ್ಜ್ ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಟೀಮ್ ಇಂಡಿಯಾ 49 ರನ್‌ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿತು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 3 ಓವರ್ ಬೌಲಿಂಗ್ ಮಾಡಿದ 29 ರನ್ ನೀಡಿ ಕೇವಲ 1 ವಿಕೆಟ್ ಪಡೆದರೆ, ನಾಯಕ ರೋಹಿತ್ ಶರ್ಮಾ 20 ಎಸೆತಗಳಲ್ಲಿ 31 ರನ್ ಕಲೆ ಹಾಕಿದರು. ಹಾಗೂ ನಂತರ ನಡೆದ ತೃತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕಣಕ್ಕಿಳಿಯಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications