ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಅವರ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಈ ಅತಿಥಿ ಬಂದಿರುವುದುರಿಂದ ನಿಜಕ್ಕೂ ಆಲ್‌ರೌಂಡರ್ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಹಾರ್ದಿಕ್ ಪಾಂಡ್ಯ ಅವರ ಕಾರುಗಳ ಮೇಲೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಇವರು ತಮ್ಮ ಕಾರು ಸಂಗ್ರಹಕ್ಕೆ ಮತ್ತೊಂದು ಐಷಾರಾಮಿ ವಾಹನವನ್ನು ಸೇರಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಹಾರ್ದಿಕ್ ಪಾಂಡ್ಯ ರೇಂಜ್ ರೋವರ್ ಸ್ಪೋರ್ಟ್ ಡ್ರೈವ್ ಮಾಡುತ್ತಿರುವುದು ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಂಡಿದೆ. ಐಶಾರಾಮಿ ಕಾರ್‌ಗಳ ಕಲೆಕ್ಷನ್ ಸಾಲಿಗೆ ಮತ್ತೊಂದು ಕಾರ್ ಸೇರಿಕೊಂಡಿದೆ.

ಟೀಮ್ ಇಂಡಿಯಾದ ಆಲ್‌ರೌಂಡರ್ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಹೊಸ ಕಾರಿನ ಬೆಲೆ ಎಷ್ಟು ಎಂಬ ಲೆಕ್ಕಾಚಾರ ಆರಂಭವಾಗಿದೆ. ಈ ಹೊಸ ರೇಂಜ್ ರೋವರ್ ಸ್ಪೋರ್ಟ್ ಕಾರಿನ ಮೇಲೆ 1.69 ಕೋಟಿ ರೂಪಾಯಿಗಳಿಂದ ಆರಂಭವಾಗುತ್ತದೆ. ಹಾರ್ದಿಕ್ ಪಾಂಡ್ಯ ಅವರ ಕಾರು ಕಲೆಕ್ಷನ್‌ನಲ್ಲಿ ಈಗಾಗಲೇ ಮರ್ಸಿಡಿಸ್ ಜಿ-ವ್ಯಾಗನ್ ಕೂಡ ಇದೆ. ಈ ಕಾರಿನ ಬೆಲೆ ಭಾರತದಲ್ಲಿ ಸುಮಾರು 2.5 ಕೋಟಿ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ.
ತವರಿನಲ್ಲಿ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದರು. ಪರಿಣಾಮ ಇವರಿಗೆ ಸರಣಿಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಇವರು ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಟಿ20 ಸರಣಿಯಲ್ಲಿ ಅವರು ಈಗ ಆಡುವುದನ್ನು ಕಾಣಬಹುದು. ಅದಕ್ಕೂ ಮುನ್ನ ಇವರು ಐಶಾರಾಮಿ ಕಾರ್‌ನಲ್ಲಿ ಓಡಾಡುತ್ತಿರುವುದು ಸಖತ್ ವೈರಲ್ ಆಗುತ್ತಿದೆ.
ಟೀಮ್ ಇಂಡಿಯಾದ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ, ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ, ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಕೂಡ ಈ ಐಷಾರಾಮಿ ಕಾರನ್ನು ಹೊಂದಿದ್ದಾರೆ.
ಐಪಿಎಲ್ 2025ರಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಉಳಿಸಿಕೊಳ್ಳುತ್ತದಾ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮುಂದಿನ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡ ಅವರನ್ನು ರಿಲೀಸ್ ಮಾಡಬಹುದು ಎಂಬ ವದಂತಿಗಳು ಎದ್ದಿವೆ. ಇನ್ನು ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಗಳ ಪ್ರಕಾರ ಮುಂಬೈ ಇಂಡಿಯನ್ಸ್ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಬಹುದು ಎಂದು ವರದಿ ಮಾಡಿದೆ. ಹಾರ್ದಿಕ್ ಪಾಂಡ್ಯ, ಜಸ್ಪ್ರಿತ್ ಬುಮ್ರಾ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಅವರನ್ನು ರಿಟೇನ್ ಮಾಡಿಕೊಳ್ಳಬಹುದು ಎಂದು ವರದಿಗಳು ಹೊರ ಬರುತ್ತಿವೆ. ಆದರೆ ಮುಂಬೈ ಯಾರಿಗೆ ನಾಯಕರನ್ನಾಗಿ ಮಾಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಗುಜರಾತ್ ಟೈಟನ್ಸ್ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸಿದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು, ಐಪಿಎಲ್ 2024 ಹರಾಜಿಗೆ ಮುನ್ನ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಟ್ರೇಡ್ ಮಾಡಿತು. ಅಲ್ಲದೆ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವವನ್ನು ನೀಡಿತು. ರೋಹಿತ್ ಶರ್ಮಾ ಅವರನ್ನು ಕೆಳಗಿಸಿದ ಮುಂಬೈ ಮ್ಯಾನೇಜ್ಮೆಂಟ್ ಹಾರ್ದಿಕ್‌ರಿಗೆ ಪಟ್ಟವನ್ನು ಕಟ್ಟಿತು.