ದೇಶೀಯ ಟೂರ್ನಿಯಲ್ಲಿ ಭಾರತೀಯ ಆಲ್‌ರೌಂಡರ್‌ಗಳ ಅಬ್ಬರದ ಶತಕ: ಎದುರಾಳಿಗಳಿಗೆ ನಡುಕ
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಸೀಮಿತ ಓವರ್‌ಗಳ ಪಂದ್ಯಗಳ ಸರಣಿ ಇನ್ನೇನು ಕೆಲವೇ ದಿನಗಳಲ್ಲಿ ನಡೆಯುತ್ತಿದೆ. ಇದಕ್ಕೂ ಮೊದಲು ಟೀಮ್ ಇಂಡಿಯಾದ ಆಟಗಾರರು ಸದ್ಯ ದೇಶೀಯ ಟೂರ್ನಿಯಲ್ಲಿ ಆಡುತ್ತಿದ್ದಾರೆ. ವಿಜಯ್ ಹಜಾರೆ ಟೂರ್ನಿಯಲ್ಲಿ ಸ್ಟಾರ್ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಎದುರಾಳಿಗಳಿಗೆ ನಡುಕ ಶುರುವಾಗಿದೆ. ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ದೇಶೀಯ ಟೂರ್ನಿಯಲ್ಲಿ ಅಬ್ಬರ ನಡೆಸಿದ್ದಾರೆ.
ಟಿ20 ವಿಶ್ವಕಪ್ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಪ್ರಕಟಿತ ತಂಡದಲ್ಲಿ ಉಪನಾಯಕ ಪಟ್ಟವನ್ನು ಕಟ್ಟಿರುವ ಅಕ್ಷರ್ ಪಟೇಲ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ವಿದರ್ಭ ವಿರುದ್ಧದ ಪಂದ್ಯದಲ್ಲಿ ಬರೋಡ ಮೊದಲು ಬ್ಯಾಟ್ ಮಾಡಿತು. ಈ ವೇಳೆ ಅಕ್ಷರ್ ಪಟೇಲ್ ಸಹ ತಂಡದ ಪರ ಕಣಕ್ಕೆ ಇಳಿದರು. ಬರೋಡಾ ತಂಡದ ಪರ ಯಾವೊಬ್ಬ ಭರವಸೆಯ ಬ್ಯಾಟರ್ ನೆಲಕಚ್ಚಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು.

ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಹಾರ್ದಿಕ್ ಪಾಂಡ್ಯ ಒತ್ತಡವನ್ನು ಮೆಟ್ಟಿನಿಂತುರು. ಸ್ಥಿರ ಬ್ಯಾಟ್ ಮಾಡಿದ ಹಾರ್ದಿಕ್ ಪಾಂಡ್ಯ ಅಬ್ಬರಿಸಿದರು. ಒಂದು ಕಡೆಯಲ್ಲಿ ವಿಕೆಟ್‌ಗಳು ಬೀಳುತ್ತಾ ಇದ್ದರೂ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ಹಾರ್ದಿಕ್ ಪಾಂಡ್ಯ ಶತಕ ಬಾರಿಸಿ ಮಿಂಚಿದರು. ಇವರು 92 ಎಸೆತಗಳಲ್ಲಿ 8 ಬೌಂಡರಿ, 11 ಸಿಕ್ಸರ್ ಸಹಾಯದಿಂದ 133 ರನ್ ಬಾರಿಸಿದರು. ಹಾರ್ದಿಕ್ ಪಾಂಡ್ಯ ಸ್ಥಿರ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ಬರೋಡಾ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 293 ರನ್ ಸೇರಿಸಿತು.
ಅಕ್ಷರ್ ಶತಕ
ಡಿ ಗುಂಪಿನ ಪಂದ್ಯದಲ್ಲಿ ಆಂಧ್ರ ವಿರುದ್ಧ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಅಕ್ಷರ್ ಪಟೇಲ್ ಅಬ್ಬರಿಸಿದರು. 99 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಅಕ್ಷರ್ ಪಟೇಲ್ ಹಾಗೂ ವಿಶಾಲ್ ಜೈಸ್ವಾಲ್ ಭರ್ಜರಿ ಜೊತೆಯಾಟ ನೀಡಿದರು. ಈ ಜೋಡಿ 6ನೇ ವಿಕೆಟ್‌ಗೆ 142 ರನ್ ಜೊತೆಯಾಟ ಕಾಣಿಕೆ ನೀಡಿದರು. ಈ ವೇಳೆ ವಿಶಾಲ್ ಜೈಸ್ವಾಲ್ 3 ಬೌಂಡರಿ, 5 ಸಿಕ್ಸರ್ ಸಹಾಯದಿಂದ 70 ರನ್ ಬಾರಿಸಿ ಔಟ್ ಆದರು. ಅಕ್ಷರ್ ಪಟೇಲ್ ಅಬ್ಬರಿಸಿದರು.
ಭರವಸೆಯ ಆಲ್‌ರೌಂಡರ್ ಅಕ್ಷರ್ ಪಟೇಲ್ 111 ಎಸೆತಗಳಲ್ಲಿ 130 ರನ್ ಸಿಡಿಸಿದರು. ಇವರ ಅಮೋಘ ಇನಿಂಗ್ಸ್‌ನಲ್ಲಿ 10 ಬೌಂಡರಿ, 5 ಸಿಕ್ಸರ್ ಬಾರಿಸಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications