Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮದುವೆಗೂ ಮೊದಲೇ ಅಪ್ಪನಾದ ಹಾರ್ದಿಕ್: ತಮಾಷೆಯ ಮೀಮ್ಸ್‌ ಇಲ್ಲಿವೆ

Hardik Pandya Announces Natasa Stankovics Pregnancy: Different memes are here

ಬೆಂಗಳೂರು: ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅಪ್ಪನಾಗುವ ಸಂಭ್ರಮದಲ್ಲಿದ್ದಾರೆ. ಹಾರ್ದಿಕ್ ಮತ್ತು ನತಾಶಾ ಸ್ಟ್ಯಾಂಕೋವಿಕ್ ಶೀಘ್ರದಲ್ಲೇ ಅಪ್ಪ-ಅಮ್ಮ ಅನ್ನಿಸಿಕೊಳ್ಳಲಿದ್ದಾರೆ. ಆದರೆ ಇಲ್ಲೊಂದು ಯಡವಟ್ಟಾಗಿದೆ. ಹಾರ್ದಿಕ್-ನತಾಶಾರ ನಿಶ್ಚಿತಾರ್ಥವಷ್ಟೇ ನಡೆದಿದೆ. ಮದುವೆ ಇನ್ನಷ್ಟೇ ನಡೆಯಬೇಕಿದೆ. ಅಷ್ಟರಲ್ಲೇ ಅರ್ಜೆಂಟು ಮಾಡಿಕೊಂಡಿರುವ ಹಾರ್ದಿಕ್, ತಾನು ಮತ್ತು ನತಾಶಾ ಮಗುವನ್ನು ಬರ ಮಾಡಿಕೊಳ್ಳಲಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾರಿ ಹೇಳಿಯಾಗಿದೆ.

ಮದುವೆಯಾಗುವ ಮೊದಲೇ ಭಾವೀ ಪತ್ನಿ ನತಾಶಾ ಗರ್ಭಿಣಿಯಾಗಿರುವ ವಿಚಾರ ಬಹಿರಂಗಪಡಿಸುವ ಮೂಲಕ ಹಾರ್ದಿಕ್ ದಿಟ್ಟತನವನ್ನೇನೋ ಮೆರೆದರು ಅಂದುಕೊಳ್ಳೋಣ; ಆದರೆ ನೆಟ್ಟಿಗರು ಸುಮ್ಮನೆ ಬಿಡುತ್ತಾರೆಯೇ?

ಹಾರ್ದಿಕ್ ಅಪ್ಪನಾಗುತ್ತಿರುವ ಸಂಗತಿಯನ್ನು ತಮಾಷೆಯಾಗಿ ತೆಗೆದುಕೊಂಡು ನೆಟ್ಟಿಗರು ತಯಾರಿಸಿರುವ ಮೀಮ್ಸ್ ಇಲ್ಲಿವೆ. ಸಣ್ ಸಣ್ ಮಾಹಿತಿಗಳ ಜೊತೆಗೆ ಮೀಮ್ಸ್ ನೋಡಿಕೊಂಡು ಬರೋಣ ಬನ್ನಿ..

ಮೀಮ್ಸ್ ಮೂಲಕ ಟ್ರೋಲ್

ಮೀಮ್ಸ್ ಮೂಲಕ ಟ್ರೋಲ್

(ಇಲ್ಲಿರುವ ಮೀಮ್ಸ್ ಕೆಳಗೆ ಜಸ್ಟ್ ಮಾಹಿತಿಗಳಿವೆಯಷ್ಟೇ. ಮೀಮ್ಸ್‌ ಅನ್ನು ಜಸ್ಟ್ ಕಣ್ಣಾಯಿಸಿಕೊಂಡು, ಹಾರ್ದಿಕ್-ನತಾಶಾಗೆ ಸಂಬಂಧಿಸಿದ ಮಾಹಿತಿಗಳನ್ನೂ ಓದಿಕೊಂಡು ಹೋಗಿ)

ವಿರಾಟ್ ಕೊಹ್ಲಿ ವಿಶ್

ವಿರಾಟ್ ಕೊಹ್ಲಿ ವಿಶ್

ವಿವಾಹಕ್ಕೂ ಮೊದಲೇ ಅಪ್ಪನಾಗುತ್ತಿರುವ ಸುದ್ದಿ ಬಹಿರಂಗಪಡಿಸಿರುವ ಹಾರ್ದಿಕ್ ಪಾಂಡ್ಯ-ನತಾಶಾರಿಗೆ ಕ್ರಿಕೆಟ್‌ ಆಟಗಾರರು, ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿ ಶಾಸ್ತ್ರಿ ಕೂಡ ವಿಶ್ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ

ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ

ಭಾನುವಾರ (ಮೇ 31) ಸಂಜೆಯಾಗುವಷ್ಟರಲ್ಲಿ ಹಾರ್ದಿಕ್ ಪಾಂಡ್ಯ ಸುದ್ದಿಯಲ್ಲಿದ್ದರು. ಯಾಕೆಂದರೆ ತಾನು ಅಪ್ಪನಾಗಲಿರುವ ಸಂಗತಿಯನ್ನು ಸ್ವತಃ ಹಾರ್ದಿಕ್ ಅವರೇ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದರು. ಹಾರ್ದಿಕ್-ನತಾಶಾಗೆ ಶುಭಾಶಯಗಳ ಮಹಾಪೂರವೇ ಹರಿದುಬರತೊಡಗಿತ್ತು.

ಜೀವಕ್ಕಾಗಿ ಕಾಯುತ್ತಿದ್ದೇವೆ

ಜೀವಕ್ಕಾಗಿ ಕಾಯುತ್ತಿದ್ದೇವೆ

'ಬದುಕಿನಲ್ಲಿ ನತಾಶಾ ಮತ್ತು ನಾನು ಜೊತೆಯಾಗಿ ಪಯಣಿಸಿದ್ದೇವೆ. ಈಗ ಇನ್ನೂ ಹತ್ತಿರವಾಗುತ್ತಿದ್ದೇವೆ. ಶಿಘ್ರದಲ್ಲಿ ನಮ್ಮ ಜೊತೆಗೆ ಮತ್ತೊಂದು ಜೀವವನ್ನು ಸ್ವಾಗತಿಸಲು ನಾವಿಬ್ಬರೂ ಕಾತರರಾಗಿದ್ದೇವೆ,' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಹಾರ್ದಿಕ್ ಬರೆದುಕೊಂಡಿದ್ದರು.

ಜನವರಿ 1ಕ್ಕೆ ನಿಶ್ಚಿತಾರ್ಥ

ಜನವರಿ 1ಕ್ಕೆ ನಿಶ್ಚಿತಾರ್ಥ

ಡೇಟಿಂಗ್‌ನಲ್ಲಿದ್ದ ಹಾರ್ದಿಕ್-ನತಾಶಾ ಮನೆಯವರ ಒಪ್ಪಿಗೆಯ ಮೇರೆಗೆ ಇದೇ ವರ್ಷ ಜನವರಿ 1ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸ್ಟ್ಯಾಂಕೋವಿಕ್ ಗರ್ಭಿಣಿಯಾಗಿರುವ ಸಂಗತಿಯನ್ನು ಈಗ ಹಾರ್ದಿಕ್ ಬಹಿರಂಗಪಡಿಸಿದ್ದಾರೆ.

ಯಾರೀ ನತಾಶಾ?

ಯಾರೀ ನತಾಶಾ?

ಬಾಲಿವುಡ್ ನಟಿ, ಮೂಲತಃ ಸರ್ಬಿಯಾದ ನತಾಶಾ ಸ್ಟ್ಯಾಂಕೋವಿಕ್ ಡ್ಯಾನ್ಸ್ ಟಿವಿ ಶೋ 'ನಾಚ್ ಬಲಿಯೆ' ಸೀಸನ್ 9ರ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದರು.

ಸ್ಟ್ಯಾಂಕೋವಿಕ್ ಜೊತೆ ಸಂಬಂಧ

ಸ್ಟ್ಯಾಂಕೋವಿಕ್ ಜೊತೆ ಸಂಬಂಧ

ಸ್ಟ್ಯಾಂಕೋವಿಕ್ ಜೊತೆ ಸಂಬಂಧವನ್ನಿರಿಸಿಕೊಂಡಿದ್ದ ಕ್ರಿಕೆಟರ್ ಹಾರ್ದಿಕ್, ಈ ವಿಚಾರವನ್ನು ತನ್ನ ಸಹೋದರ ಕೃನಾಲ್ ಪಾಂಡ್ಯ ಮತ್ತು ಕುಟುಂಬಸ್ಥರ ಗಮನಕ್ಕೆ ತಂದಿದ್ದರು, ತಾವಿಬ್ಬರೂ ಮದುವೆಯಾಗುವುದಾಗಿ ಮನೆಯವರನ್ನು ಒಪ್ಪಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಅನೇಕರಿಂದ ಶುಭಾಶಯ

ಅನೇಕರಿಂದ ಶುಭಾಶಯ

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪ್ರತಿನಿಧಿಸುವ ಹಾರ್ದಿಕ್ ಪಾಂಡ್ಯಗೆ ಕೊಹ್ಲಿ, ಶಾಸ್ತ್ರಿಯಲ್ಲದೆ ಮೊಹಮ್ಮದ್ ಶಮಿ, ಯುಜುವೇಂದ್ರ ಚಾಹಲ್ ಮತ್ತು ಮಯಾಂಕ್ ಅಗರ್ವಾಲ್ ಸೇರಿದಂತೆ ಅನೇಕ ಕ್ರಿಕೆಟಿಗರು ಶುಭ ಹಾರೈಸಿದ್ದಾರೆ.

Story first published: Monday, June 1, 2020, 17:13 [IST]
Other articles published on Jun 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+