For Quick Alerts
ALLOW NOTIFICATIONS  
For Daily Alerts
 

Hardik Pandya: ಹಾರ್ದಿಕ್ ಪಾಂಡ್ಯರಲ್ಲಿನ ನಾಯಕತ್ವದ ಗುಣಗಳು ಕಾಣೆಯಾಗಿವೆಯಾ?

ಹಾರ್ದಿಕ್ ಪಾಂಡ್ಯ ಕ್ರಿಕೆಟ್‌ ಜಗತ್ತಿನಲ್ಲಿ ಆಲ್‌ರೌಂಡರ್‌ ಆಗಿ ಗುರುತಿಸಿಕೊಂಡ ಪ್ಲೇಯರ್‌. ತನ್ನ ಚಾಣಕ್ಯ ನಾಯಕತ್ವದಿಂದಲೇ ಗುಜರಾತ್‌ ತಂಡವನ್ನು ಎರಡು ಬಾರಿ ಫೈನಲ್‌ಗೆ ಕೊಂಡಯ್ಯದ ಆಟಗಾರ. ಆದರೆ ಪ್ರಸಕ್ತ ಐಪಿಎಲ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಹೊಳಪು ಕಾಣುತ್ತಿಲ್ಲ. ಇದರಿಂದ ಮುಂಬೈ ಇಂಡಿಯನ್ಸ್‌ ನಿರಾಸೆ ಗೊಂಡಿದೆ.

ಗುಜರಾತ್ ಟೈಟನ್ಸ್‌ ತಂಡವನ್ನು ಯಶಸ್ವಿ ದೋಣಿಯಲ್ಲಿ ಮುನ್ನಡೆಸಿದ ನಾವಿಕನನ್ನೇ ಮುಂಬೈ ಇಂಡಿಯನ್ಸ್‌ ಟ್ರೇಡ್ ಮಾಡುತ್ತದೆ. ಹಾರ್ದಿಕ್ ಪಾಂಡ್ಯ, ಗುಜರಾತ್ ಟೈಟನ್ಸ್ ತಂಡವನ್ನು ಬಿಟ್ಟು ಮುಂಬೈ ಸೇರುವ ಸುದ್ದಿ, ಕಾಲ್ಗಿಚ್ಚಿನಂತೆ ಹಬ್ಬಿತು. ಅಲ್ಲಿಂದ ಅವರಿಗೆ ಮುಂಬೈ ಇಂಡಿಯನ್ಸ್ ನಾಯಕತ್ವವನ್ನು ನೀಡಿ ಬರ ಮಾಡಿಕೊಂಡಿತು. ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿದ ಮುಂಬೈ ನಡೆಗೆ ಅಭಿಮಾನಿಗಳು ಆಕ್ರೋಶ ಗೊಂಡರು. ರೋಹಿತ್‌ ಬೇರೆ ತಂಡಗಳತ್ತ ಮುಖ ಮಾಡುತ್ತಾರೆ ಎಂದೇ ತೋರುತ್ತಿತ್ತು. ಆದರೆ ಹಾಗೇ ಇಲ್ಲ. ಮತ್ತೆ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ ಕ್ಯಾಂಪ್‌ ಸೇರಿ ಹುಮ್ಮಸ್ಸು ತುಂಬಿದರು.

Hardik Pandya Are leadership qualities missing in Hardik Pandya

ಗುಜರಾತ್‌ ಟೈಟನ್ಸ್ ಅವರಿಂದ ಟ್ರೇಡ್ ಮಾಡಿದಾಗ ಮುಂಬೈ ಇವರಲ್ಲಿನ ನಾಯಕತ್ವದ ಗುಣಗಳನ್ನು ಗುರತಿಸಿತ್ತು. ಅವರು ಹೊಸ ತಂಡವನ್ನು ಮೊದಲ ಬಾರಿಗೆ ಐಪಿಎಲ್‌ ಇಳಿದಾಗಲೇ ಚಾಂಪಿಯನ್ ಪಟ್ಟ ತೊಡಿಸಿದವರು. ಇನ್ನು ಎರಡನೇ ಬಾರಿ ಫೈನಲ್‌ಗೆ ತಂಡ ಪ್ರವೇಶಿಸಿದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಪ್ಲೇಯರ್‌ ಹಾರ್ದಿಕ್ ಪಾಂಡ್ಯ. ಇವರನ್ನು ಮುಂಬೈ ಇಂಡಿಯನ್ಸ್ ತಮ್ಮ ತಂಡಕ್ಕೆ ಬರ ಮಾಡಿಕೊಂಡಿತು.

ಕಾಣೆಯಾಗುತ್ತಿದೆ ನಾಯಕತ್ವದ ಗುಣ

ಐಪಿಎಲ್‌ 2024ರಲ್ಲಿ ಇಲ್ಲಿಯವರೆಗೆ ಮುಂಬೈ ಇಂಡಿಯನ್ಸ್‌ ಎರಡು ಪಂದ್ಯಗಳನ್ನು ಆಡಿದೆ. ಈ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಈ ಸೋಲಿನಲ್ಲಿ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಗುಣಗಳ ಕೊರತೆ ಎದ್ದುಕಾಣುತ್ತಿದೆ. ಹಾರ್ದಿಕ್ ಪಾಂಡ್ಯ ಮೊದಲ ಪಂದ್ಯದಲ್ಲಿ ತಾವೇ ಮೊದಲ ಓವರ್‌ ಬೌಲಿಂಗ್ ಮಾಡಿದರು. ತಂಡದಲ್ಲಿ ಸ್ಟಾರ್ ಬೌಲರ್‌ಗಳು ಇದ್ದಾಗಲೂ ಅವರು ಈ ಹೊಣೆಗಾರಿಕೆಯನ್ನು ತಮ್ಮ ಮೇಲೆ ಹೊತ್ತುಕೊಂಡರು. ಜಸ್ಪ್ರಿತ್‌ ಬುಮ್ರಾ ಈ ಪಂದ್ಯದಲ್ಲಿ ಗುಜರಾತ್ ವಿರುದ್ಧ ನಾಲ್ಕನೇ ಓವರ್ ಬೌಲಿಂಗ್ ಮಾಡಿದರು.

ಇನ್ನು 169 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಮುಂಬೈ ಇಂಡಿಯನ್ಸ್‌ ಗೆಲುವನ್ನು ಸಾಧಿಸುವ ಹಾದಿಯಲ್ಲೇ ಇತ್ತು. ಆಗ ಹಾರ್ದಿಕ್ ಪಾಂಡ್ಯ ನಾಲ್ಕನೇ ಕ್ರಮಾಂಕದಲ್ಲಿ ಅಥವಾ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳದೇ ಕೊನೆಯ ಎರಡು ಓವರ್‌ ಇದ್ದಾಗ ಕ್ರೀಸ್‌ಗೆ ಬಂದರು. ಇವರು ಕ್ರೀಸ್‌ಗೆ ಬಂದಾಗ 12 ಎಸೆತಗಳಲ್ಲಿ 27 ರನ್‌ ಅವಶ್ಯಕತೆ ಇತ್ತು. ಆಗಲೂ ದೊಡ್ಡ ಹೊಡೆತಗಳನ್ನು ಪ್ರಯೋಗಿಸದೆ ನಿರಾಸೆ ಕಂಡರು. ಅಲ್ಲದೆ ಪಂದ್ಯ ಸೋಲಿನಲ್ಲಿ ಪ್ರಮುಖ ಕಾರಣರಾದರು.

Hardik Pandya Are leadership qualities missing in Hardik Pandya

ಟಾಸ್‌ ಗೆದ್ದು ಬೌಲಿಂಗ್

ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಬಳಿಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವ ನಿರ್ಧಾರವನ್ನು ಕೈಗೊಂಡರು. ಈ ನಿರ್ಧಾರವನ್ನು ಸನ್‌ರೈಸರ್ಸ್‌ ಹೈದರಾಬಾದ್‌ ಬ್ಯಾಟರ್‌ಗಳು ತಪ್ಪು ಎಂದು ಸಾಬೀತು ಮಾಡಿದರು. ಮುತ್ತಿನ ನಗರಿಯಲ್ಲಿ ಸನ್‌ ತಂಡದ ಬ್ಯಾಟರ್‌ಗಳು ಸ್ಫೋಟಕ ಇನ್ನಿಂಗ್ಸ್ ಆಡಿ ಗಮನ ಸೆಳೆದರು. ಅಲ್ಲದೆ ಐಪಿಎಲ್‌ ಇತಿಹಾಸದಲ್ಲೇ ಗರಿಷ್ಠ ರನ್‌ ಕಲೆ ಹಾಕಿತು. ಈ ವೇಳೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿ 4 ಓವರ್‌ ಬೌಲಿಂಗ್‌ ಮಾಡಿ 11.50ರ ಸರಾಸರಿಯಲ್ಲಿ 46 ರನ್‌ ನೀಡಿ ಕೈ ಸುಟ್ಟುಕೊಂಡರು.

ಬ್ಯಾಟಿಂಗ್‌ ವೇಳೆ ಹಾರ್ದಿಕ್ ಪಾಂಡ್ಯ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕ್ರೀಸ್‌ಗೆ ಬಂದರು. ಅದಾಗಲೇ ಬೇಕಾಗಿದ್ದ ರನ್‌ ರೇಟ್‌ ಆಗಸಕ್ಕೆ ಮುಟ್ಟಿ ಆಗಿತ್ತು. ಹಾರ್ದಿಕ್ ಈ ಪಂದ್ಯದಲ್ಲಿ 20 ಎಸೆತಗಳಲ್ಲಿ 24 ರನ್‌ ಸೇರಿಸಿ ವೈಫಲ್ಯ ಅನುಭವಿಸಿದರು.

ಮುಂದಿನ ಪಂದ್ಯದಲ್ಲಾದರೂ ಹಾರ್ದಿಕ್ ಪಾಂಡ್ಯ ತಮ್ಮ ಹಳೆಯ ಖದರ್‌ನಲ್ಲಿ ನಾಯಕತ್ವದ ಗುಣಗಳೊಂದಿಗೆ ಅಂಗಳಕ್ಕೆ ಇಳಿಯುವ ಅವಶ್ಯಕತೆ ಇದೆ.

Story first published: Friday, March 29, 2024, 8:01 [IST]
Other articles published on Mar 29, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+