1985ರಲ್ಲಿ ರವಿಶಾಸ್ತ್ರಿ ಮಾಡಿದ್ದನ್ನು ಈ ಬಾರಿ ಹಾರ್ದಿಕ್ ಪಾಂಡ್ಯ ಮಾಡಲಿದ್ದಾರೆ: ಗವಾಸ್ಕರ್
ಅಕ್ಟೋಬರ್ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್‌ಗೆ ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರಮುಖ ಆಟಗಾರನಾಗಿ ಇನ್-ಫಾರ್ಮ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದು, ಅವರ ಪಾತ್ರ ನಿರ್ಣಾಯಕವಾಗಲಿದೆ ಎಂದು ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.
ಆಸ್ಟ್ರೇಲಿಯಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಹಾರ್ದಿಕ್ ಪಾಂಡ್ಯ 1985ರಲ್ಲಿ ಭಾರತ ತಂಡಕ್ಕಾಗಿ ರವಿಶಾಸ್ತ್ರಿ ಮಾಡಿದ್ದ ಮ್ಯಾಜಿಕ್ ಅನ್ನು ಮರುಸೃಷ್ಠಿಸಬಹುದು ಎಂದು ಹೇಳಿದ್ದಾರೆ. 1985ರಲ್ಲಿ ನಡೆದ ವಿಶ್ವ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಕಪ್ ಗೆಲ್ಲುವಲ್ಲಿ ರವಿಶಾಸ್ತ್ರಿ ಮುಖ್ಯ ಪಾತ್ರ ವಹಿಸಿದ್ದರು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಅತ್ಯತ್ತಮ ಆಲ್‌ರೌಂಡರ್ ಆಟದಿಂದ ಮಾತ್ರವಲ್ಲದೆ ಫೀಲ್ಡಿಂಗ್‌ನಲ್ಲೂ ಹಾರ್ದಿಕ್ ಪಾಂಡ್ಯ ಅತ್ಯುತ್ತಮವಾಗಿದ್ದಾರೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. 2022ರ ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಕ್ಷೇತ್ರ ರಕ್ಷಣೆಯಲ್ಲೂ ಮಿಂಚಿದ್ದರು. ಆಟದ ಫಲಿತಾಂಶವನ್ನೇ ಬದಲಿಸುವ ರನೌಟ್‌ಗಳು ಮತ್ತು ಕ್ಯಾಚ್‌ಗಳನ್ನು ಹಾರ್ದಿಕ್ ಪಾಂಡ್ಯ ತಪ್ಪಿಸುವುದಿಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ.

ರವಿಶಾಸ್ತ್ರಿ ಮಾಡಿದ್ದನ್ನು ಪಾಂಡ್ಯ ಮಾಡಬಲ್ಲರು
1985ರ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ರವಿಶಾಸ್ತ್ರಿ ನೀಡಿದ ಪ್ರದರ್ಶನವನ್ನು ನೆನಪಿಸಿಕೊಂಡ ಸುನಿಲ್ ಗವಾಸ್ಕರ್ 2022ರ ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದು ಹೇಳಿದ್ದಾರೆ.
"ಹೌದು, 1985 ರಲ್ಲಿ ರವಿಶಾಸ್ತ್ರಿ ಮಾಡಿದ್ದನ್ನು ಹಾರ್ದಿಕ್ ಪಾಂಡ್ಯ ಮಾಡಬಹುದೆಂದು ನಾನು ಭಾವಿಸುತ್ತೇನೆ, ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ರವಿಶಾಸ್ತ್ರಿ ಇಡೀ ಪಂದ್ಯಾವಳಿಯಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದರು. ಕೆಲವು ಉತ್ತಮ ಕ್ಯಾಚ್‌ಗಳನ್ನು ಹಿಡಿದು ಭಾರತದ ಗೆಲುವಿನಲ್ಲಿ ಸಹಕಾರಿಯಾಗಿದ್ದರು ಮತ್ತು ಹಾರ್ದಿಕ್ ಪಾಂಡ್ಯ ಅದನ್ನು ಮಾಡಬಹುದು." ಎಂದು ಅವರು ಹೇಳಿದ್ದಾರೆ.
ಈತನನ್ನು ಆರಂಭಿಕನಾಗಿ ಕಣಕ್ಕಿಳಿಸಿದರೆ ಅದು ಅದ್ಭುತ ನಿರ್ಧಾರವಾಗಲಿದೆ: ರೋಹನ್ ಗವಾಸ್ಕರ್

ಪಂದ್ಯದ ದಿಕ್ಕನ್ನು ಬದಲಿಸುವ ರನೌಟ್‌ಗಳು
ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸುನಿಲ್ ಗವಾಸ್ಕರ್ ರನ್-ಔಟ್‌ಗಳು ಪಂದ್ಯದ ದಿಕ್ಕನ್ನೇ ಬದಲಿಸಬಲ್ಲವು ಎಂದು ಹೇಳಿದ್ದಾರೆ.
"ಮಿಡ್-ಆಫ್‌ನಲ್ಲಿ ಕೆಲವು ಎಲೆಕ್ಟ್ರಿಫೈಯಿಂಗ್ ರನ್-ಔಟ್‌ಗಳನ್ನು ಮಾಡುವಲ್ಲಿ ಹಾರ್ದಿಕ್ ಪಾಂಡ್ಯ ಮುಖ್ಯ ಪಾತ್ರ ವಹಿಸುತ್ತಾರೆ ಎನ್ನುವುದನ್ನು ಮರೆಯಬೇಡಿ. ಬೌಲರ್‌ನ ತುದಿಯಿಂದ ನೇರವಾದ ಹೊಡೆತಗಳು, ಅತ್ಯುತ್ತಮ ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ ಮತ್ತು ಬ್ಯಾಟಿಂಗ್ ಅಂಶಗಳಷ್ಟೇ ಅಲ್ಲ, ಆದರೆ ಫೀಲ್ಡಿಂಗ್ ಕೂಡ ಮುಖ್ಯವಾಗಿದೆ. 1985 ರಲ್ಲಿ ರವಿಶಾಸ್ತ್ರಿ ಅವರಂತೆ, ಚಾಂಪಿಯನ್ ಆಫ್ ಚಾಂಪಿಯನ್ಸ್‌ನಂತಿದ್ದರೆ ನಾನು ಆಶ್ಚರ್ಯಪಡುವುದಿಲ್ಲ." ಎಂದು ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ನಾಲ್ಕನೇ ವೇಗದ ಬೌಲರ್ ಆಗಬೇಕು
ಹಾರ್ದಿಕ್ ಪಾಂಡ್ಯರನ್ನು ಪ್ರಮುಖದ ವೇಗದ ಬೌಲರ್ ಎನ್ನುವಂತೆ ನೋಡಬಾರದು ಎಂದು ಭಾರತ ತಂಡದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಭಾರತ ತಂಡ ಮೂವರು ಸ್ಪೆಷಲಿಸ್ಟ್ ವೇಗದ ಬೌಲರ್‌ಗಳೊಂದಿಗೆ ಆಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಏಷ್ಯಾಕಪ್‌ನ ಸೂಪರ್ 4 ಹಂತದಲ್ಲಿ ದಯನೀಯವಾಗಿ ವಿಫಲವಾದ ನಂತರ ಮೂರನೇ ಸೀಮರ್ ಪಾತ್ರಕ್ಕೆ ಹಾರ್ದಿಕ್ ಸೂಕ್ತವಲ್ಲ ಎಂದು ಸಂಜಯ್ ಮಂಜ್ರೇಕರ್ ಭಾವಿಸಿದ್ದಾರೆ. ಆದ್ದರಿಂದಲೇ ಎಲ್ಲಾ ಸಮಯದಲ್ಲೂ ಬೌಲಿಂಗ್ ವಿಭಾಗದಲ್ಲಿ ಪಾಂಡ್ಯ ಮೇಲೆ ಅವಲಂಬಿತವಾಗಬಾರದು ಎಂದು ಹೇಳಿದ್ದಾರೆ.

ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿ
2022ರಲ್ಲಿ ಇದುವರೆಗೆ ಹಾರ್ದಿಕ್ ಪಾಂಡ್ಯ 16 ಟಿ20 ಪಂದ್ಯಗಳಲ್ಲಿ 331 ರನ್ ಗಳಿಸಿದ್ದಾರೆ ಮಾತ್ರವಲ್ಲದೆ 12 ವಿಕೆಟ್ ಪಡೆದಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಪಾಂಡ್ಯ ವಿಶ್ವಕಪ್‌ನಲ್ಲಿ ಅದೇ ಪ್ರದರ್ಶನವನ್ನು ಮುಂದುವರೆಸಲಿ ಎಂದು ಸಂಜಯ್ ಮಂಜ್ರೇಕರ್ ಆಶಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟಿ20 ಪಂದ್ಯಗಳಿಗೆ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದೆ. ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಪಾಂಡ್ಯ ಆಡಲಿದ್ದಾರೆ. ಸೆಪ್ಟೆಂಬರ್ 20 ರಂದು ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರಂಭಿಕ ಟಿ20 ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications