20 ಸಿಕ್ಸರ್ 158* ರನ್: ಟಿ20ಯಲ್ಲಿ ಹಾರ್ದಿಕ್ ಪಾಂಡ್ಯ ದಾಖಲೆಯ ಶತಕ

ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ಯೊಂದು ಭರ್ಜರಿ ಶತಕವನ್ನು ಸಿಡಿಸಿದ್ದಾರೆ. ಡಿ.ವೈ ಪಾಟೀಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಸತತ ಎರಡನೇ ಪಂದ್ಯದಲ್ಲಿ ಶತಕವನ್ನು ಸಿಡಿಸಿ ತಮ್ಮ ಪುನರಾಗಮನವನ್ನು ಭರ್ಜರಿಯಾಗಿ ಸಾರಿ ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ಬೆನ್ನು ನೋವಿನ ಶಸ್ತ್ರ ಚಿಕಿತ್ಸೆಯ ಬಳಿಕ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾಗಿಯಾಗಿಲ್ಲ. ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಪಾಂಡ್ಯ ಸದ್ಯ ಡಿ.ವೈ ಪಾಟೀಲ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಅಬ್ಬರದ ಆಟವನ್ನು ಪ್ರದರ್ಶಿಸುತ್ತಿದ್ದಾರೆ.
ಸತತ ಎರಡನೇ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿರುವ ಇಂದಿನ ಆಟ ಹೇಗಿತ್ತು ಮುಂದೆ ಓದಿ..

ಮತ್ತೊಂದು ಶತಕ ಸಿಡಿಸಿದ ಪಾಂಡ್ಯ
ಕಳೆದ ಎರಡು ದಿನಗಳ ಹಿಂದೆಯಷ್ಟೇ ಹಾರ್ದಿಕ್ ಪಾಂಡ್ಯ ಇದೇ ಟೂರ್ನಿಯಲ್ಲಿ ಶತಕವನ್ನು ಬಾರಿಸಿದ್ದರು. ಈ ಹಿಂದಿನ ಪಂದ್ಯದಲ್ಲಿ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದ್ದ ಹಾರ್ದಿಕ್ ಪಾಂಡ್ಯ ಇಂದು(ಶುಕ್ರವಾರ) ನಡೆದ ಸೆಮಿಫೈನಲ್ ಪಂದ್ಯದಲ್ಲಿ 39 ಎಸೆತಗಳಲ್ಲಿ ಶತಕವನ್ನು ಸಿಡಿಸಿ ಮಿಂಚಿದ್ದಾರೆ. ಡಿ.ವೈ ಪಾಟೀಲ್ ಟಿ20 ಟೂರ್ನಿಯಲ್ಲಿ ಹಾರ್ದಿಕ್ಪಾಂಡ್ಯ ರಿಲಯನ್ಸ್ 1 ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಟಿ20ಯಲ್ಲಿ ಗರಿಷ್ಠ ರನ್ ಗಳಿಕೆ
ಇಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬರೊಬ್ಬರಿ 158 ರನ್‌ಗಳಸಿದ್ದಾರೆ. ಇದು ಟಿ20ಪಂದ್ಯವೊಂದರಲ್ಲಿ ಭಾರತೀಯ ಆಟಗಾರನೋರ್ವನ ಗರಿಷ್ಠ ಗಳಿಕೆಯಾಗಿದೆ. ಇಲ್ಲಿಯವರೆಗೆ ಟಿ20 ಪಂದ್ಯವೊಂದರಲ್ಲಿ ಶ್ರೇಯಸ್ ಅಯ್ಯರ್ ಗಳಿಸಿದ 147 ರನ್ ಗರಿಷ್ಠವಾಗಿತ್ತು.

ಅಜೇಯ ಆಟ ಪ್ರದರ್ಶಿಸಿದ ಪಾಂಡ್ಯ
ಈ ಇನ್ನಿಂಗ್ಸ್‌ನಲ್ಲಿ ಹಾರ್ದಿಕ್ ಪಾಂಡ್ಯ ಭರ್ಜರಿ 20 ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ್ದರು. ಒಟ್ಟಾರೆ 55 ಎಸೆತಗಳನ್ನು ಎದುರಿಸಿದ ಹಾರ್ದಿಕ್ ಪಾಂಡ್ಯಾ 158 ರನ್‌ಗಳನ್ನು ಅಜೇಯವಾಗಿ ಚಚ್ಚಿದರು. ಪಾಂಡ್ಯ ಸಾಹಸದಿಂದ ರಿಲಯನ್ಸ್ 1 ತಂಡ 238 ರನ್‌ಗಳನ್ನು ಗಳಿಸಿತು.

ಸುದೀರ್ಘ ವಿಶ್ರಾಂತಿಯಿಂದ ವಾಪಾಸ್
ಹಾರ್ದಿಕ್ ಪಾಂಡ್ಯ ಬೆನ್ನು ನೋವಿನ ಕಾರಣಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಕಳೆದ ಅಕ್ಟೋಬರ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಹಾರ್ದಿಕ್ ಪಾಂಡ್ಯ ಬಳಿಕ ಸಂಪೂರ್ಣವಾಗಿ ವಿಶ್ರಾಂತಿಯಲ್ಲಿದ್ದರು. ಸಂಪೂರ್ಣ ಚೇತರಿಕೆಯ ನಂತರ ಮತ್ತೆ ಅಂಗಳಕ್ಕಿಳಿದಿರುವ ಹಾರ್ದಿಕ್ ಪಾಂಡ್ಯ ಭರ್ಜರಿ ಪ್ರದರ್ಶನವನ್ನು ನೀಡುತ್ತಿದ್ದಾರೆ.

ದ.ಆಫ್ರಿಕಾ ಸರಣಿಗೆ ಪಾಂಡ್ಯ?
ಟೀಮ್ ಇಂಡಿಯಾದ ಪ್ರಮುಖ ಆಲ್‌ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಭಾರತದ ಮುಂದಿನ ಸರಣಿಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ವಾರ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಏಕದಿನ ಸರಣಿಯನ್ನಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications