ಟೆಸ್ಟ್ ಕ್ರಿಕೆಟ್ ನಲ್ಲಿ ಕಪಿಲ್ ದೇವ್ ದಾಖಲೆ ಮುರಿದ ಹಾರ್ದಿಕ್ ಪಾಂಡ್ಯ
ಪಲ್ಲೆಕೆಲೆ, ಆಗಸ್ಟ್ 13 : ಟೆಸ್ಟ್ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕ ಸಿಡಿಸುವುದರ ಜತೆಗೆ ಒಂದೇ ಓವರ್ ನಲ್ಲಿ ಅತಿ ಹೆಚ್ಚು ರನ್ ಚಚ್ಚಿದ ಏಕೈಕ ಭಾರತೀಯ ಆಟಗಾರನೆಂಬ ಹೆಗ್ಗಳಿಕೆ ಹಾರ್ದಿಕ್ ಪಾಂಡ್ಯಾ ಪಾತ್ರರಾಗಿದ್ದಾರೆ.
ಶ್ರೀಲಂಕಾ ವಿರುದ್ಧ 3ನೇ ಟೆಸ್ಟ್ ನ 2ನೇ ದಿನವಾದ ಭಾನುವಾರದಂದು 116ನೇ ಓವರ್ ನಲ್ಲಿ ಪಾಂಡ್ಯಾ 26 ರನ್ ಚಚ್ಚಿದರು. ಈ ಮೂಲಕ 1990ರಲ್ಲಿ ಕಪಿಲ್ ದೇವ್ ಅವರ ಹೆಸರಿನಲ್ಲಿದ್ದ ಒಂದೇ ಓವರ್ ನಲ್ಲಿ 24 ರನ್ ಹೊಡೆದಿದ್ದ ದಾಖಲೆಯನ್ನು ಪಾಂಡ್ಯಾ ಮುರಿದರು.

ಎಡಗೈ ಸ್ಪಿನ್ನರ್ ಮಲಿಂದ ಪುಷ್ಪಕುಮಾರ ಎಸೆದ ಆರಂಭದ ಎರಡು ಎಸೆತವನ್ನು ಬೌಂಡರಿಗೆ ಅಟ್ಟಿದ್ದರೆ, ನಂತರ ಮೂರು ಎಸೆತದಲ್ಲಿ ಪಾಂಡ್ಯಾ ಸತತ ಮೂರು ಸಿಕ್ಸರ್ ಹೊಡೆಯುವ ಆ ಓವರ್ ನಲ್ಲಿ ಬರೋಬ್ಬರಿ 26 ರನ್ ಗಳಿಸಿ ಈ ದಾಖಲೆ ನಿರ್ಮಿಸಿದರು.
ಟೆಸ್ಟ್ ಕ್ರಿಕೆಟ್ ನಲ್ಲಿ ಒಂದೇ ಓವರ್ ನಲ್ಲಿ ಅತಿ ಹೆಚ್ಚು ರನ್ ಹೊಡೆದ ದಾಖಲೆ ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ ಮತ್ತು ಆಸ್ಟ್ರೇಲಿಯಾದ ಜಾರ್ಜ್ ಬೈಲಿ ಅವರ ಹೆಸರಿನಲ್ಲಿದೆ. ಇವರಿಬ್ಬರು ಒಂದೇ ಓವರ್ ನಲ್ಲಿ 28 ರನ್ ಹೊಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications