Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬೆನ್ ಸ್ಟೋಕ್ಸ್‌ಗೆ ಸವಾಲು ನೀಡಲು ಹಾರ್ದಿಕ್ ಪಾಂಡ್ಯಾಗೆ ಸಾಧ್ಯವಿಲ್ಲ: ಹಾಜ್

Hardik Pandya Cant Challenge Ben Stokes, Says Brad Hogg

ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪ್ರತಿಭಾನ್ವಿತ ಕ್ರಿಕೆಟಿಗ. ಟೀಮ್ ಇಂಡಿಯಾದ ಆಲ್‌ರೌಂಡರ್ ಸ್ಥಾನವನ್ನು ಹಾರ್ದಿಕ್ ಪಾಂಡ್ಯಾ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆದರೆ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಜ್ ಹಾರ್ದಿಕ್ ಪಾಂಡ್ಯಾ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.

ಇಂಗ್ಲೆಂಡ್‌ನ ಖ್ಯಾತ ಆಲ್‌ರೌಂಡರ್ ಆಗಿರುವ ಬೆನ್ ಸ್ಟೋಕ್ಸ್‌ಗೆ ಹಾರ್ದಿಕ್ ಪಾಂಡ್ಯಾ ಚಾಲೆಂಜ್ ಮಾಡಲು ಸಾಧ್ಯವಿಲ್ಲ ಎಂದು ಬ್ರಾಡ್ ಹಾಜ್ ಹೇಳಿದ್ದಾರೆ. ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಕೇಳಿದ ಪ್ರಶ್ನೆಗೆ ಹಾಜ್ ಈ ರೀತಿಯಾಗಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಹಾರ್ದಿಕ್ ಪಾಂಡ್ಯಾಗೆ ಒಳ್ಳೆಯ ಅವಕಾಶವಿದೆ ಮತ್ತು ಆತನಲ್ಲಿ ಸಾಕಷ್ಟು ಕ್ಷಮತೆಯಿದೆ. ಆದರೆ ಆತನಿಗಿನ್ನೂ ಅನುಭವವಿಲ್ಲ ಎಂದು ತಮ್ಮ ಹೇಳಿಕೆಗೆ ಕಾರಣವನ್ನು ನೀಡಿದ್ದಾರೆ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಜ್.

ಹಾರ್ದಿಕ್ ಪಾಂಡ್ಯಾ ಇನ್ನೂ ಸಾಕಷ್ಟು ಅಂತಾರಾಷ್ಟ್ರೀಯ ಕ್ರಿಕೆಟನ್ನು ಆಡಬೇಕಿದೆ. ಈ ಮೂಲಕ ತನ್ನ ಸಾಮರ್ಥ್ಯವನ್ನು ಸಾಭೀತುಪಡಿಸಿಕೊಳ್ಳಬೇಕಿದೆ. ಅದಕ್ಕಾಗಿ ಸಾಕಷ್ಟು ಅವಕಾಶವೂ ಹಾರ್ದಿಕ್ ಪಾಂಡ್ಯಾ ಮುಂದಿದೆ ಎಂದು ಬ್ರಾಡ್ ಹಾಜ್ ಹೇಳಿಕೊಂಡಿದ್ದಾರೆ.

26 ವರ್ಷದ ಹಾರ್ದಿಕ್ ಪಾಂಡ್ಯಾ ಟೀಮ್ ಇಂಡಿಯಾ ಪರವಾಗಿ ಅನೇಕ ಉತ್ತಮ ಇನ್ನಿಂಗ್ಸ್‌ಗಳನ್ನು ನೀಡಿದ್ದಾರೆ. ಸದ್ಯ ವಿಶ್ವದ ಖ್ಯಾತ ಆಲ್‌ರೌಂಡರ್‌ಗಳ ಜೊತೆಗೆ ಹಾರ್ದಿಕ್ ಪಾಂಡ್ಯ ಅವರನ್ನು ಹೋಲಿಸಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಬ್ರಾಡ್ ಹಾಜ್‌ಗೂ ಈ ಪ್ರಶ್ನೆ ಎದುರಾಗಿತ್ತು.

Story first published: Tuesday, March 24, 2020, 19:49 [IST]
Other articles published on Mar 24, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+