Hardik Pandya: ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ನಾಯಕ ಹಾರ್ದಿಕ್ ಪಾಂಡ್ಯ
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಇತಿಹಾಸ ಸೃಷ್ಟಿಸಿದರು. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇಲ್ಲಿಯವರೆಗೆ ಯಾರೂ ಮಾಡಲು ಸಾಧ್ಯವಾಗದ ದಾಖಲೆಯನ್ನು ಹಾರ್ದಿಕ್ ಪಾಂಡ್ಯ ಮಾಡಿದರು. ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಐಪಿಎಲ್ 2025 ರ 16 ನೇ ಪಂದ್ಯದಲ್ಲಿ ಹಾರ್ದಿಕ್ ಈ ಸಾಧನೆ ಮಾಡಿದರು.
ಹಾರ್ದಿಕ್ ಪಾಂಡ್ಯ ಐಪಿಎಲ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ 5 ವಿಕೆಟ್ ಪಡೆದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹಾರ್ದಿಕ್‌ಗಿಂತ ಮೊದಲು, ಐಪಿಎಲ್‌ನಲ್ಲಿ ಯಾರೂ ಈ ದಾಖಲೆಯನ್ನು ಮಾಡಲು ಸಾಧ್ಯವಾಗಿರಲಿಲ್ಲ. ಮೊದಲ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಆಕಾಶ್‌ದೀಪ್ ಅವರನ್ನು ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಹಾರ್ದಿಕ್ ಈ ದಾಖಲೆಯನ್ನು ಮಾಡುವಲ್ಲಿ ಯಶಸ್ವಿಯಾದರು.

ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 4 ಓವರ್‌ಗಳಲ್ಲಿ 36 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸಿದರು. ಇದರೊಂದಿಗೆ, ಅವರು ಐದು ವಿಕೆಟ್ ಪಡೆದ ಮೊದಲ ಐಪಿಎಲ್ ನಾಯಕರಾದರು. ಹಾರ್ದಿಕ್ ಪಾಂಡ್ಯ ಅವರು, ಐಡೆನ್ ಮಾರ್ಕ್ರಾಮ್ (38 ಎಸೆತಗಳಲ್ಲಿ 53), ನಿಕೋಲಸ್ ಪೂರನ್ (12), ರಿಷಭ್ ಪಂತ್ (2), ಡೇವಿಡ್ ಮಿಲ್ಲರ್ (27) ಮತ್ತು ಆಕಾಶ್ ದೀಪ್ (0) ಅವರ ವಿಕೆಟ್‌ಗಳನ್ನು ಪಡೆದು ಈ ಮೈಲಿಗಲ್ಲು ತಲುಪಿದರು.
ಇದು ಐಪಿಎಲ್‌ನಲ್ಲಿ ಹಾರ್ದಿಕ್ ಅವರ ಮೊದಲ ಐದು ವಿಕೆಟ್ ಸಾಧನೆ ಆಗಿದೆ. ಇಷ್ಟೇ ಅಲ್ಲ, ಟಿ20 ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಭಾರತೀಯ ಆಲ್‌ರೌಂಡರ್ ಒಂದೇ ಪಂದ್ಯದಲ್ಲಿ 5 ವಿಕೆಟ್‌ಗಳನ್ನು ಪಡೆದ ಸಾಧನೆಯ ಪಟ್ಟಿಗೂ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ 5 ವಿಕೆಟ್ ಪಡೆಯುವ ಮೂಲಕ 16 ವರ್ಷಗಳ ಇತಿಹಾಸವನ್ನೇ ಬದಲಾಯಿಸಿದರು. ನಾಯಕನಾಗಿ ಒಂದೇ ಐಪಿಎಲ್ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳ ದಾಖಲೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಹೊಂದಿದ್ದರು. ಅವರು 2009 ರಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ 16 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಬಳಿಸಿದರು. ಈಗ ಹಾರ್ದಿಕ್ ಪಾಂಡ್ಯ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಲಕ್ನೋ ವಿರುದ್ಧ 36 ರನ್‌ಗಳಿಗೆ 5 ವಿಕೆಟ್ ಪಡೆಯುವ ಮೂಲಕ ಹಾರ್ದಿಕ್ ನಾಯಕನಾಗಿ ಐಪಿಎಲ್ ಪಂದ್ಯವೊಂದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ.
ಐಪಿಎಲ್ ಪಂದ್ಯದಲ್ಲಿ ನಾಯಕರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ
ಹಾರ್ದಿಕ್ ಪಾಂಡ್ಯ- 5/36 - vs ಲಕ್ನೋ ಸೂಪರ್ ಜೈಂಟ್ಸ್, ಲಕ್ನೋ, 2025
ಅನಿಲ್ ಕುಂಬ್ಳೆ- 4/16 - vs ಡೆಕ್ಕನ್ ಚಾರ್ಜರ್ಸ್, ಜೋಹಾನ್ಸ್‌ಬರ್ಗ್, 2009
ಅನಿಲ್ ಕುಂಬ್ಳೆ- 4/16 - vs ಡೆಕ್ಕನ್ ಚಾರ್ಜರ್ಸ್, ನವಿ ಮುಂಬೈ, 2010
ಜೆಪಿ ಡುಮಿನಿ- 4/17 - vs ಸನ್‌ರೈಸರ್ಸ್ ಹೈದರಾಬಾದ್, ವೈಜಾಗ್, 2015
ಶೇನ್ ವಾರ್ನ್- 4/21 - vs ಡೆಕ್ಕನ್ ಚಾರ್ಜರ್ಸ್, ನಾಗ್ಪುರ, 2010
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications