ವಿಶೇಷ ವ್ಯಕ್ತಿಗೆ 'ಐಪಿಎಲ್ 2020 ಗೆಲುವು' ಅರ್ಪಿಸಿದ ಹಾರ್ದಿಕ್ ಪಾಂಡ್ಯ

ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೆ 2020 ಬಹಳ ವಿಶೇಷ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಪಾಂಡ್ಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಚೇತರಿಕೆ ಕಂಡು ಕಂಬ್ಯಾಕ್ ಮಾಡಿದ ಹಾರ್ದಿಕ್ ಐಪಿಎಲ್ 2020 ಟ್ರೋಫಿ ಎತ್ತಿ ಹಿಡಿದಿದ್ದಾರೆ.
ಈ ಗೆಲುವನ್ನು ತಮ್ಮ ಮಗ ಅಗಸ್ತ್ಯ ಪಾಂಡ್ಯಗೆ ಅರ್ಪಿಸಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡಿರುವ ಪಾಂಡ್ಯ ''ಇದು ನಿನಗಾಗಿ....ಮುಂಬೈ ಇಂಡಿಯನ್ಸ್ ಲವ್ ಯೂ'' ಎಂದು ಕ್ಯಾಪ್ಷನ್ ಹಾಕಿದ್ದಾರೆ.
ಡೆಲ್ಲಿ ವಿರುದ್ಧದ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಜಯ ಕಂಡಿದ್ದು, ಐದನೇ ಬಾರಿ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 2013, 2015, 2017, 2019 ಹಾಗೂ 2020ರಲ್ಲಿ ಮುಂಬೈ ಐಪಿಎಲ್ ಜಯಿಸಿದೆ.

ನಟಿ ಹಾಗೂ ಮಾಡೆಲ್ ನತಾಶಾ ಸ್ಟಾಂಕೋವಿಕ್ ಅವರನ್ನು ವಿವಾಹವಾಗಿರುವ ಹಾರ್ದಿಕ್ ಪಾಂಡ್ಯ ದಂಪತಿ, ಜುಲೈ 30 ರಂದು ತಮ್ಮ ಚೊಚ್ಚಲ ಮಗುವಿಗೆ ಜನ್ಮ ನೀಡಿದರು. ಆ ಮಗುವಿಗೆ ಅಗಸ್ತ್ಯ ಪಾಂಡ್ಯ ಎಂದು ಹೆಸರಿಡಲಾಗಿದೆ.
ಈ ವರ್ಷ ಕೊರೊನಾ ವೈರಸ್ ಕಾರಣದಿಂದ ಯುಎಇನಲ್ಲಿ ಐಪಿಎಲ್ ನಡೆದಿದ್ದು, ಮಗನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಈ ಹಿಂದೆ ಹಲವು ಬಾರಿ ಹಾರ್ದಿಕ್ ಪಾಂಡ್ಯ ಪೋಸ್ಟ್ ಹಾಕಿದ್ದರು. ಅಂತಿಮವಾಗಿ ಐಪಿಎಲ್ ಗೆದ್ದ ತಮ್ಮ ಮಗನಿಗೆ ಅರ್ಪಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications