Hardik Pandya: ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 60 ರನ್ ಬಾರಿಸುತ್ತಿದ್ದಂತೆ ದಾಖಲೆ ಬರೆಯಲಿದ್ದಾರೆ ಹಾರ್ದಿಕ್ ಪಾಂಡ್ಯ
ಒಂದು ಸರಣಿ ಆರಂಭವಾಗುವ ಮುನ್ನ ಯಾರು, ಯಾರು, ಯಾವ, ಯಾವ ದಾಖಲೆ ಬರೆಯುತ್ತಾರೆ ಎಂಬುದರ ಮೇಲೆ ಕಣ್ಣು ನೆಟ್ಟಿರಲಿದೆ. ಇದೇ ರೀತಿ ಜನವರಿ 22 ರಿಂದ ಆರಂಭವಾಗುವ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯ ಮೇಲೂ ಅಭಿಮಾನಿಗಳ ಕಣ್ಣು ನೆಟ್ಟಿದೆ. ಈ ಸರಣಿಗೆ ಈಗಾಗಲೇ ಉಭಯ ತಂಡಗಳನ್ನು ಘೋಷಿಸಲಾಗಿದೆ. ಭಾರತ ತಂಡ ಯುವ ಹಾಗೂ ಅನುಭವಿ ಆಟಗಾರರಿಂದ ಕೂಡಿದೆ. ಹೀಗಾಗಿ ಎಲ್ಲರ ಚಿತ್ತ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಡೆಯಲಿರುವ ಈ ಪಂದ್ಯದ ಮೇಲೆ ನೆಟ್ಟಿರಲಿದೆ.
ಟೀಮ್ ಇಂಡಿಯಾದಲ್ಲೂ ಹಲವು ಸ್ಟಾರ್ ಆಟಗಾರರ ಹೆಸರುಗಳು ಸರಣಿಯ ವೇಳೆ ಕಾಣಿಸಿಕೊಳ್ಳಲಿವೆ. ಈ ವೇಳೆ ಎಲ್ಲರ ಚಿತ್ತವನ್ನು ಕದ್ದ ಹೆಸರು ಹಾರ್ದಿಕ್ ಪಾಂಡ್ಯ. ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಈ ಸರಣಿಯಲ್ಲಿ ದೊಡ್ಡ ಸಾಧನೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಹಾಗಿದ್ದರೆ ಅವರು ಬರೆಯಲಿರುವ ಸಾಧನೆ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಯಾವ ದಾಖಲೆಯ ಮೇಲೆ ಹಾರ್ದಿಕ್ ಕಣ್ಣು?
ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಕಲೆ ಹಾಕಿದ ಆಟಗಾರರ ಪಟ್ಟಿಯನ್ನು ನೋಡುತ್ತಾ ಸಾಗಿದರೆ, ಈ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಹೆಸರು ಸಹ ಇದೆ. ಇವರು ಈಗಾಗಲೇ ಆಡಿದ 85 ಚುಟುಕು ಪಂದ್ಯಗಳಲ್ಲಿ 1700 ರನ್ ಕಲೆ ಹಾಕಿದ್ದಾರೆ. ಈ ವೇಳೆ ನಾಲ್ಕು ಅರ್ಧಶತಕಗಳು ಸಹ ಸೇರಿವೆ. ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ಇವರಿಗೆ ಆರನೇ ಸ್ಥಾನ. ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಸಣಿಯಲ್ಲಿ 60 ರನ್ ಕಲೆ ಹಾಕಿದರೆ ಹಾರ್ದಿಕ್ ಪಾಂಡ್ಯ ಮತ್ತೊಂದು ದಾಖಲೆ ಬರೆಯಲಿದ್ದಾರೆ.
ಭಾರತದ ಸ್ಟಾರ್ ಆರಂಭಿಕ ಆಟಗಾರ ಗಬ್ಬರ್ ಖ್ಯಾತಿಯ ಶಿಖರ್ ಧವನ್ ಟಿ20 ಫಾರ್ಮೆಟ್‌ನಲ್ಲಿ 1759 ರನ್ ಸಿಡಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಅವರಿಗೆ ಈ ರೆಕಾರ್ಡ್ ಬ್ರೇಕ್ ಮಾಡಲು ಜಸ್ಟ್ 60 ರನ್ ಬೇಕಿವೆ. ಈ ಸಾಧನೆಯನ್ನು ಮಾಡಿದ್ದೇ ಆದಲ್ಲಿ ಹಾರ್ದಿಕ್ ಪಾಂಡ್ಯ ಈ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಬಡ್ತಿ ಪಡೆಯಲಿದ್ದಾರೆ.

ಟೀಮ್ ಇಂಡಿಯಾದ ಅನುಭವಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಆಟಗಾರ. ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡುವ ಕಲೆಯನ್ನು ಇವರು ಕರಗತ ಮಾಡಿಕೊಂಡಿದ್ದಾರೆ. ಬಿಗ್ ಹಿಟ್‌ಗಳನ್ನು ಸಹ ಸಲೀಸಾಗಿ ಬಾರಿಸುತ್ತಾರೆ. ಭಾರತದ ಪರ ಇವರು ಬರಿ ಬ್ಯಾಟಿಂಗ್ ಅಷ್ಟೇ ಅಲ್ಲ, ಬೌಲಿಂಗ್‌ನಲ್ಲೂ ನೆರವಾಗಬಲ್ಲ ಪ್ಲೇಯರ್. ಇವರ ಬುಟ್ಟಿಯಲ್ಲಿ ಈಗಾಗಲೇ 89 ವಿಕೆಟ್‌ಗಳು ಸಹ ಇವೆ.
ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ರನ್ ಸಾಧಕರು
ರೋಹಿತ್ ಶರ್ಮಾ, 4231 ರನ್
ವಿರಾಟ್ ಕೊಹ್ಲಿ, 4188 ರನ್
ಸೂರ್ಯಕುಮಾರ್ ಯಾದವ್ , 2570 ರನ್
ಕೆಎಲ್ ರಾಹುಲ್, 2265 ರನ್
ಶಿಖರ್ ಧವನ್, 1759 ರನ್
ಹಾರ್ದಿಕ್ ಪಾಂಡ್ಯ, 1700 ರನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications