Hardik Pandya: ಮಾಜಿ ಪತ್ನಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟು ಮತ್ತೆ ಸುದ್ದಿಯಾದ ಹಾರ್ದಿಕ್ ಪಾಂಡ್ಯ
Hardik Pandya: ಟೀಂ ಇಂಡಿಯಾ ಕ್ರಿಕೆಟ್ ತಂಡ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ವಿಚ್ಛೇದನ ಪಡದ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಹಾಗೂ ಪುತ್ರ ಅಗಸ್ತ್ಯನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ಮಾಡಿದ್ದಾರೆ. ಇದೀಗ ಇದೇ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇವರ ನಡೆಗೆ ಮೆಚ್ಚುಗೆಗಳ ಸುರಿಮಳೆ ಹರಿದುಬರುತ್ತಿದೆ.
ಹಾರ್ದಿಕ್ ಪಾಂಡ್ಯ ಅವರು ವಿಚ್ಚೇದನವಾಗಿ ಇದೀಗ ಸದ್ಯ ಮಹಿಕಾ ಶರ್ಮಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಗಾಸಿಪ್‌ಗಳು ಹರಿದಾಡುತ್ತಿವೆ. ಇತ್ತೀಚೆಗಷ್ಟೇ ಮಹಿಕಾ ಶರ್ಮಾ ಹುಟ್ಟುಹಬ್ಬ ಹಿನ್ನೆಲೆ ಇಬ್ಬರ ರೊಮ್ಯಾಂಟಿಕ್ ವಿಡಿಯೋ ಹಾಗೂ ಫೋಟೋವನ್ನು ಸಹ ಶೇರ್ ಮಾಡಿಕೊಂಡು ಗಮನ ಸೆಳೆದಿದ್ದರು. ಇದೆಲ್ಲದರ ನಡುವೆ ಇವರು ಮಗನ ಭವಿಷ್ಯದ ಗಮನ ಹರಿಸಿರುವುದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಮಾಜಿ ಪತ್ನಿಗೆ ದುಬಾರಿ ಕಾರು ಗಿಫ್ಟ್
ಪ್ರಸ್ತುತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬ್ಯುಸಿಯಾಗಿರುವ ಹಾರ್ದಿಕ್ ಪಾಂಡ್ಯ ಅವರು ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಹೀಗೆ ಸುದ್ದಿಯಲ್ಲಿದ್ದಾರೆ. ವಿಚ್ಛೇದನದ ಬಳಿಕವೂ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಹಾಗೂ ಪುತ್ರ ಅಗಸ್ತ್ಯನೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಂಡಿರುವ ಪಾಂಡ್ಯ, ಅವರಿಗೆ ದುಬಾರಿ ಕಾರು ಗಿಫ್ಟ್ ಮಾಡಿರುವ ಘಟನೆ ಇದೀಗ ಸಖತ್ ಸದ್ದು ಮಾಡಿದೆ.
ಹಾರ್ದಿಕ್ ಮಾಜಿ ಪತ್ನಿಗೆ ನೀಡಿದ ಕಾರಿನ ಬೆಲೆ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಹಾರ್ದಿಕ್ ಸುಮಾರು 3ರಿಂದ 4 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಎಸ್‌ಯುವಿ 'ಲ್ಯಾಂಡ್ ರೋವರ್ ಡಿಫೆಂಡರ್' ಕಾರನ್ನು ತಮ್ಮ ಮಗ ಅಗಸ್ತ್ಯನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಮುಂಬೈನಲ್ಲಿರುವ ಶೋರೂಂನಲ್ಲಿ ಈ ಹೊಸ ಕಾರಿನ ಮುಂದೆ ನಿಂತು ನತಾಶಾ ಮತ್ತು ಅಗಸ್ತ್ಯ ಪೋಸ್ ನೀಡಿರುವ ಫೋಟೋ, ವಿಡಿಯೋಗಳು ವೈರಲ್ ಆಗಿವೆ. ಈ ದೃಶ್ಯಗಳು ಅಭಿಮಾನಿಗಳಿ ಭಾರೀ ಮೆಚ್ಚುಗೆ ಪಡೆದುಕೊಂಡಿವೆ.
2024ರಲ್ಲಿ ನತಾಶ ಜೊತೆ ವಿಚ್ಛೇದನ
ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್ 2024ರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಘೋಷಿಸಿದ್ದರು. ಬಳಿಕ ಇಬ್ಬರೂ ತಮ್ಮ ತಮ್ಮ ಜೀವನದಲ್ಲಿ ಮುಂದುವರಿದಿದ್ದಾರೆ. ಆದರೂ, ಮಗ ಅಗಸ್ತ್ಯನ ಜವಾಬ್ದಾರಿ ನತಾಶಾ ನೋಡಿಕೊಳ್ಳುತ್ತಿದ್ದು, ಪಾಂಡ್ಯ ಸಗ ತಂದೆಯಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಈ ಮೂಲಕ ಇಬ್ಬರು ದೂರ ಆದರೂ ಮಗನ ಭವಿಷ್ಯದ ಕಡೆಗೆ ಗಮನಹರಿಸಿದ್ದಾರೆ ಎನ್ನುವ ಮಾಹಿತಿ ಇದೆ.
ಈ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ಪುತ್ರನ ಮೇಲಿನ ಪ್ರೀತಿ ಮತ್ತು ಜವಾಬ್ದಾರಿತನವನ್ನು ಪಾಂಡ್ಯ ಹಾಗೂ ಮಾಜಿ ಪತ್ನಿ ಉತ್ತಮವಾಗಿ ನಿಭಾಯಿಸುತ್ತಿದ್ದಾರೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ವಿಚ್ಛೇದನದ ಬಳಿಕವೂ ಮಗನ ಭವಿಷ್ಯವನ್ನು ಆದ್ಯತೆಯಾಗಿ ಇಟ್ಟುಕೊಂಡಿರುವ ಹಾರ್ದಿಕ್ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಕಾರು ಕಂಪನಿ ಇನ್‌ಸ್ಟಾಗ್ರಾಂ ಪೋಟೋದಲ್ಲಿ ಏನಿದೆ?
ಈ ವಿಶೇಷ ಸಂದರ್ಭದ ಫೋಟೋ, ವಿಡಿಯೋ ವಾಹನ ತಯಾರಕ ಕಂಪನಿಯೇ ಸಾಮಾಜಿಕ ಜಾಲತಾಣಗದಲ್ಲಿ ಹಂಚಿಕೊಂಡಿದೆ. ಅಲ್ಲದೆ, ಪೋಸ್ಟ್‌ಗೆ ನೀಡಿದ್ದ ಕ್ಯಾಪ್ಷನ್‌ನಲ್ಲಿ 'ಶ್ರೀ ಹಾರ್ದಿಕ್ ಪಾಂಡ್ಯ ಅವರು ಮತ್ತೊಮ್ಮೆ ತಮ್ಮ ಡಿಫೆಂಡರ್ ಖರೀದಿಗಾಗಿ ನವನೀತ್ ಮೋಟಾರ್ಸ್ ಅನ್ನು ಆಯ್ಕೆ ಮಾಡಿದ್ದಾರೆ. ಇದು ಅವರು ನಮ್ಮ ಮೇಲೆ ಇಟ್ಟ ನಂಬಿಕೆ. ಅಗಸ್ತ್ಯ ಪಾಂಡ್ಯ ಹಾಗೂ ಶ್ರೀಮತಿ ನತಾಶಾ ಸ್ಟಾಂಕೋವಿಕ್ ಅವರಿಗೆ ಮುಂಬೈನ ಶೋರೂಂನಲ್ಲಿ ಈ ಕಾರನ್ನು ವಿತರಣೆ ಮಾಡಲಾಗಿದೆ," ಎಂದು ಬರೆಯಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications