IND vs ENG 3rd T20: ಧವನ್-ಚಹಾಲ್ ದಾಖಲೆ ಮೇಲೆ ಕಣ್ಣಿಟ್ಟ ಹಾರ್ದಿಕ್ ಪಾಂಡ್ಯ
ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸುವ ಅವಕಾಶ ಪಡೆದಿದ್ದಾರೆ. ಇಂದು ಅಂದರೆ ಜನವರಿ 28 ರಂದು ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಹಾರ್ದಿಕ್ ಈ ಸಾಧನೆ ಮಾಡಲಿದ್ದಾರೆ. ಈ ಪಂದ್ಯ ರಾಜ್‌ಕೋಟ್‌ನ ನಿರಂಜನ್ ಶಾ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾತ್ರಿ 7 ಗಂಟೆಗೆ ನಡೆಯಲಿದೆ.
ಇಂಗ್ಲೆಂಡ್ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಮಾಜಿ ಬ್ಯಾಟರ್ ಶಿಖರ್ ಧವನ್ ಹಿಂದಿಕ್ಕುವ ಅವಕಾಶವನ್ನು ಹೊಂದಿದ್ದಾರೆ. ಸದ್ಯ, ಶಿಖರ್ ಧವನ್ ಟಿ20ಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ ಐದನೇ ಸ್ಥಾನದಲ್ಲಿದ್ದಾರೆ. ಇದೀಗ ಹಾರ್ದಿಕ್ ಪಾಂಡ್ಯಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಪರ ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗುವ ಅವಕಾಶವಿದೆ.

ಪ್ರಸ್ತುತ, ಶಿಖರ್ ಧವನ್ 68 ಪಂದ್ಯಗಳ 66 ಇನ್ನಿಂಗ್ಸ್‌ಗಳಲ್ಲಿ 11 ಅರ್ಧ ಶತಕಗಳೊಂದಿಗೆ 1759 ರನ್ ಗಳಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಪ್ರಸ್ತುತ 111 ಪಂದ್ಯಗಳ 87 ಇನ್ನಿಂಗ್ಸ್‌ಗಳಲ್ಲಿ 4 ಅರ್ಧಶತಕಗಳ ಸಹಾಯದಿಂದ 1710 ರನ್ ಬಾರಿಸಿದ್ದಾರೆ. ಹಾರ್ದಿಕ್ ಸದ್ಯ ಶಿಖರ್ ಗಿಂತ ಕೇವಲ 49 ರನ್ ಹಿಂದಿದ್ದಾರೆ. ಇಂಗ್ಲೆಂಡ್ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಹಾರ್ದಿಕ್ 49 ರನ್ ಗಳಿಸಿದರೆ ಟಿ20ಯಲ್ಲಿ ಭಾರತ ಪರ ಐದನೇ ತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಚಹಾಲ್ ರೆಕಾರ್ಡ್ ಬ್ರೇಕ್?
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ದಾಖಲೆಯನ್ನು ಮುರಿಯುವ ಅವಕಾಶ ಹಾರ್ದಿಕ್ ಪಾಂಡ್ಯಗೆ ಸಿಕ್ಕಿದೆ. ಯುಜ್ವೇಂದ್ರ ಚಹಾಲ್ ಹಿಂದಿಕ್ಕುವ ಮೂಲಕ ಹಾರ್ದಿಕ್ ಪಾಂಡ್ಯ ಭಾರತದ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಬಹುದು. ಟೀಮ್ ಇಂಡಿಯಾ ಪರ ಚಹಾಲ್ 80 ಪಂದ್ಯಗಳ 79 ಇನ್ನಿಂಗ್ಸ್‌ಗಳಲ್ಲಿ 96 ವಿಕೆಟ್ ಪಡೆದಿದ್ದಾರೆ. ಹಾರ್ದಿಕ್ 111 ಪಂದ್ಯಗಳಲ್ಲಿ 99 ಇನ್ನಿಂಗ್ಸ್‌ಗಳಲ್ಲಿ 92 ವಿಕೆಟ್‌ಗಳೊಂದಿಗೆ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಉಳಿದಿದ್ದಾರೆ. ಇದೀಗ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಚಹಾಲ್ ದಾಖಲೆಯನ್ನು ಹಾರ್ದಿಕ್ ಪಾಂಡ್ಯ ಮುರಿಯಲಿದ್ದಾರೆ.
ಟಿ20ಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದವರು
ರೋಹಿತ್ ಶರ್ಮಾ: 159 ಪಂದ್ಯಗಳಲ್ಲಿ 4231 ರನ್
ವಿರಾಟ್ ಕೊಹ್ಲಿ: 125 ಪಂದ್ಯಗಳಲ್ಲಿ 4188 ರನ್
ಸೂರ್ಯಕುಮಾರ್ ಯಾದವ್: 80 ಪಂದ್ಯಗಳಲ್ಲಿ 2582 ರನ್
ಕೆಎಲ್ ರಾಹುಲ್: 72 ಪಂದ್ಯಗಳಲ್ಲಿ 2265 ರನ್
ಶಿಖರ್ ಧವನ್: 68 ಪಂದ್ಯಗಳಲ್ಲಿ 1759 ರನ್
ಹಾರ್ದಿಕ್ ಪಾಂಡ್ಯ: 111 ಪಂದ್ಯಗಳಲ್ಲಿ 1710 ರನ್
ಟಿ20ಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದವರು
ಅರ್ಷದೀಪ್ ಸಿಂಗ್: 62 ಪಂದ್ಯಗಳಲ್ಲಿ 98 ವಿಕೆಟ್
ಯುಜ್ವೇಂದ್ರ ಚಹಾಲ್: 80 ಪಂದ್ಯಗಳಲ್ಲಿ 96 ವಿಕೆಟ್
ಹಾರ್ದಿಕ್ ಪಾಂಡ್ಯ: 111 ಪಂದ್ಯಗಳಲ್ಲಿ 92 ವಿಕೆಟ್
ಭುವನೇಶ್ವರ್ ಕುಮಾರ್: 87 ಪಂದ್ಯಗಳಲ್ಲಿ 90 ವಿಕೆಟ್
ಜಸ್ಪ್ರೀತ್ ಬುಮ್ರಾ: 70 ಪಂದ್ಯಗಳಲ್ಲಿ 89 ವಿಕೆಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications