ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್‌ಗೆ ಸಿದ್ಧರಿಲ್ಲ: ರೋಹಿತ್

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2020ರ ಆವೃತ್ತಿಯಲ್ಲೂ ಮುಂಬೈ ಇಂಡಿಯನ್ಸ್ ಫೈನಲ್‌ಗೆ ಪ್ರವೇಶಿಸಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗದಲ್ಲೂ ಮುಂಬೈ ಬಲಿಷ್ಠವಾಗಿದೆ. ಆದರೆ ತಂಡಕ್ಕೆ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಬಲವಾಗಿ ನಿಲ್ಲುತ್ತಿದ್ದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಈ ಬಾರಿ ಬೌಲಿಂಗ್ ಮಾಡಿದ್ದು ಕಾಣಿಸಿರಲಿಲ್ಲ.
2018ರಲ್ಲಿ ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳೆ ಹಾರ್ದಿಕ್ ಪಾಂಡ್ಯಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಕಳೆದ ಅಕ್ಟೋಬರ್‌ನಲ್ಲಿ ಯುನೈಟೆಡ್ ಕಿಂಗ್ಡಮ್‌ನಲ್ಲಿ ಹಾರ್ದಿಕ್ ಬೆನ್ನು ನೋವಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಬೌಲಿಂಗ್ ಮಾಡುವಷ್ಟು ಹಾರ್ದಿಕ್ ಇನ್ನೂ ಚೇತರಿಸಿಕೊಂಡಿಲ್ಲ.
ಆಸ್ಟ್ರೇಲಿಯಾ ಪ್ರವಾಸ ಸರಣಿಗಾಗಿ ಲಿಮಿಟೆಡ್ ಓವರ್ ತಂಡಗಳಲ್ಲಿ ಹಾರ್ದಿಕ್ ಹೆಸರಿದೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಪರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹಾರ್ದಿಕ್ ಕಣಕ್ಕಿಳಿಯಲಿದ್ದಾರೆ. ಆದರೆ ಆಸ್ಟ್ರೇಲಿಯಾ ಮತ್ತು ಐಪಿಎಲ್ ಫೈನಲ್‌ನಲ್ಲಾದರೂ ಹಾರ್ದಿಕ್ ಬೌಲಿಂಗ್ ಮಾಡುತ್ತಾರಾ ಎನ್ನುವ ಬಗ್ಗೆ ಎಂಐ ನಾಯಕ ರೋಹಿತ್ ಮಾತನಾಡಿದ್ದಾರೆ.
'ಹಾರ್ದಿಕ್ ಈಗ ಬೌಲಿಂಗ್ ಮಾಡುವಷ್ಟು ಆರಾಮವಾಗಿಲ್ಲ ಅನ್ನೋದು ನಿಮಗೆ ಗೊತ್ತಿರಬಹುದು. ಹೀಗಾಗಿ ನಾವು ಈ ಬಗ್ಗೆ ನಿರ್ಧರಿಸುವುದನ್ನು ಸಂಪೂರ್ಣವಾಗಿ ಅವರಿಗೇ ಬಿಟ್ಟಿದ್ದೇವೆ. ಫಿಟ್ ಅನಿಸಿದರೆ ಅವರು ಬೌಲಿಂಗ್ ಮಾಡುತ್ತಾರೆ,' ಎಂದು ಶರ್ಮಾ ಮಾಹಿತಿ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications