For Quick Alerts
ALLOW NOTIFICATIONS  
For Daily Alerts
 

ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ನೂತನ ನಾಯಕ

ಟೀಮ್ ಇಂಡಿಯಾದ ಭವಿಷ್ಯದ ನಾಯಕನೆಂದು ಗುರುತಿಸಿಕೊಂಡಿರುವ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಮುಂಬೈ ಇಂಡಿಯನ್ಸ್‌ ನಾಯಕತ್ವ ಲಭಿಸಿದೆ. ಕಳೆದ ಹಲವು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ನಿಭಾಯಿಸುತ್ತಿದ್ದರು. ಇನ್ನು 2024ರ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ.

ಐಪಿಎಲ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಆಟಗಾರ ಹಾರ್ದಿಕ್ ಪಾಂಡ್ಯ, ಗುಜರಾತ್ ಜೇಂಟ್ಸ್ ತಂಡಕ್ಕೆ ನಾಯಕರಾಗಿದ್ದರು. ಅಲ್ಲದೆ ತಮ್ಮ ಮೊದಲ ಪ್ರಯತ್ನದಲ್ಲೇ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸಿದ್ದರು. ಮುಂಬೈ ತಂಡ ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್‌ಗೆ ಟ್ರೇಡ್ ಮಾಡಿತ್ತು.

Hardik Pandya is the new captain of Mumbai Indians

ಮುಂಬೈ ಇಂಡಿಯನ್ಸ್‌ ತಂಡದ ಯಶಸ್ವಿ ನಾಯಕ ಎಂದೇ ಗುರುತಿಸಲ್ಪಟ್ಟಿರುವ ರೋಹಿತ್ ಶರ್ಮಾ, ಸುದೀರ್ಘ ಕಾಲ ತಂಡದ ನಾಯಕರಾಗಿದ್ದರು. ಅವರ ಸಮ್ಮುಖದಲ್ಲಿ ಮುಂಬೈ ಐದು ಬಾರಿ ಪ್ರಶಸ್ತಿ ಗೆದ್ದುಕೊಂಡಿತ್ತು. ಆದರೆ ಇದೀಗ ನಾಯಕತ್ವದ ಜವಾಬ್ದಾರಿಯಿಂದ ರೋಹಿತ್ ಅವರನ್ನು ಮುಕ್ತಗೊಳಿಸಲಾಗಿದೆ.

ಮುಂಬೈಗೆ ನೂತನ ಸಾರಥಿ

ಮುಂಬೈ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡುವ ಸುದ್ದಿಯನ್ನು ಹಂಚಿಕೊಂಡಿದೆ. "ಮುಂಬೈ ಇಂಡಿಯನ್ಸ್ ಇಂದು ನಾಯಕತ್ವದ ಬದಲಾವಣೆಯನ್ನು ಘೋಷಿಸುತ್ತಿದೆ. ಮುಂದಿನ ಋತುವಿನಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕರಾಗಲಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಲ್ಲಿಯವರೆಗೆ ಯಶಸ್ವಿಯಾಗಿದೆ. ನಮ್ಮ ತಂಡವು ರೋಹಿತ್ ಶರ್ಮಾಗೆ ಕೃತಜ್ಞರಾಗಿರಬೇಕು ಎಂದು ಬರೆದುಕೊಂಡಿದೆ. 2013 ರಿಂದ ಇಲ್ಲಿಯವರೆಗೆ ರೋಹಿತ್ ನಾಯಕರಾಗಿ ಉತ್ತಮವಾಗಿ ತಂಡವನ್ನು ಮುನ್ನಡೆಸಿದ್ದಾರೆ. ಅವರು ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ನಾಯಕರಲ್ಲಿ ಒಬ್ಬರು ಎಂದು ಬರೆದುಕೊಂಡಿದೆ.

ಪಾಂಡ್ಯ ಈ ಹಿಂದೆ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದರು. ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಕೂಡ ಪ್ರಶಸ್ತಿ ಗೆದ್ದುಕೊಂಡಿದ್ದು. ಕಳೆದ ಋತುವಿನಲ್ಲಿ ತಂಡ ಫೈನಲ್ ತಲುಪಿತ್ತು. ಐಪಿಎಲ್‌ನಲ್ಲಿ ಹಾರ್ದಿಕ್ ಅವರ ವೈಯಕ್ತಿಕ ಪ್ರದರ್ಶನವನ್ನು ಅತ್ಯುತ್ತಮವಾಗಿದೆ.
ಪಾಂಡ್ಯ ಇದುವರೆಗೆ 123 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 2309 ರನ್ ಗಳಿಸಿದ್ದು, 53 ವಿಕೆಟ್ ಕೂಡ ಕಬಳಿಸಿದ್ದಾರೆ. 17 ರನ್‌ಗಳಿಗೆ 3 ವಿಕೆಟ್‌ ಕಬಳಿಸಿರುವುದು ಐಪಿಎಲ್‌ನಲ್ಲಿ ಹಾರ್ದಿಕ್‌ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

Hardik Pandya is the new captain of Mumbai Indians

ಮುಂಬೈ ಪರ ರೋಹಿತ್ ಸಾಧನೆ ಹೇಗಿದೆ?

ರೋಹಿತ್ ಶರ್ಮಾ ಮುಂಬೈನ ಅತ್ಯಂತ ಯಶಸ್ವಿ ನಾಯಕ. ಇವರ ನಾಯಕತ್ವದಲ್ಲಿ ತಂಡವು ಐದು ಬಾರಿ ಚಾಂಪಿಯನ್ ಆಯಿತು. ಮುಂಬೈ 2013, 2015, 2017, 2019 ಮತ್ತು 2020ರಲ್ಲಿ ಪ್ರಶಸ್ತಿ ಗೆದ್ದಿತ್ತು. ಐಪಿಎಲ್‌ನಲ್ಲಿ ರೋಹಿತ್ ಅವರ ವೈಯಕ್ತಿಕ ಪ್ರದರ್ಶನ ಅಮೋಘ. ಅವರು 243 ಪಂದ್ಯಗಳಲ್ಲಿ 6211 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು ಒಂದು ಶತಕ ಮತ್ತು 42 ಅರ್ಧ ಶತಕಗಳನ್ನು ಗಳಿಸಿದ್ದಾರೆ. ರೋಹಿತ್ ತಮ್ಮ ವೃತ್ತಿಜೀವನದ ಚೊಚ್ಚಲ IPL ಪಂದ್ಯವನ್ನು ಏಪ್ರಿಲ್ 2008 ರಲ್ಲಿ ಡೆಕ್ಕರ್ ಚಾರ್ಜಸ್ ಪರ ಆಡಿದ್ದರು.

Story first published: Friday, December 15, 2023, 18:51 [IST]
Other articles published on Dec 15, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+