Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಾರ್ದಿಕ್ ಪಾಂಡ್ಯ, ರಾಹುಲ್‌ಗೆ ಬಿಸಿಸಿಐನಿಂದ ಏಕದಿನ ಪಂದ್ಯ ನಿಷೇಧ!

ಹಾರ್ದಿಕ್ ಪಾಂಡ್ಯ, ರಾಹುಲ್‌ಗೆ ಬಿಸಿಸಿಐನಿಂದ ಏಕದಿನ ಪಂದ್ಯ ನಿಷೇಧ! | Oneindia Kannada
Hardik Pandya, KL Rahul to be banned for two matches each by BCCI

ನವದೆಹಲಿ, ಜನವರಿ 10: ಕಾಫೀ ವಿತ್ ಕರಣ್‌ ಟಿವಿ ಟಾಕ್‌ ಶೋನಲ್ಲಿ ಪಾಲ್ಗೊಂಡಿದ್ದ ವಿವಾದದ ಬಿಸಿ ಭಾರತದ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಅವರನ್ನು ಬಿಡುವಂತೆ ಕಾಣುತ್ತಿಲ್ಲ. ಇಬ್ಬರೂ ಆಟಗಾರರಿಗೆ ಬಿಸಿಸಿಐ ಎರಡು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಂದ ನಿಷೇಧ ನಿಷೇಧ ಹೇರಿದೆ.

ಕರಣ್ ಜೋಹರ್ ನಡೆಸಿಕೊಡುವ ಕಾಫೀ ವಿತ್ ಕರಣ್ ಜನಪ್ರಿಯ ಟಿವಿ ಶೋನಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರಾಹುಲ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ತಪ್ಪಲ್ಲ, ಆದರೆ ಟಾಕ್ ಶೋ ವೇಳೆ ವಿವಾದಾತ್ಮಕ ಹೇಳಿಕೆ ನೀಡಿ ಇಬ್ಬರೂ ಆಟಗಾರರು ಬಿಸಿಸಿಐ ಮತ್ತು ಕ್ರಿಕೆಟ್ ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು.

ಅಸಲಿಗೆ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿ ನೀಡಿ ಅಸಂಬದ್ಧ ಮನೋಭಾವ ತೋರಿಕೊಂಡಿದ್ದು ಪಾಂಡ್ಯ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ಕನ್ನಡಿಗ ಲೋಕೇಶ್ ರಾಹುಲ್ ಕೂಡ ತಗಲಾಕ್ಕೊಂಡಂತಾಗಿದೆ. ಸಚಿನ್-ಕೊಹ್ಲಿ ಕುರಿತ ಪ್ರಶ್ನೆಗೆ ಉತ್ತರಿಸಿಯೂ ರಾಹುಲ್ ಅವರಿಂದ ಒಂದು ಪ್ರಮಾದವಾಗಿತ್ತು.

'ನನಗೆ ಹಾರ್ದಿಕ್ ಪಾಂಡ್ಯ ಅವರ ವಿವರಣೆ ತೃಪ್ತಿ ನೀಡಿಲ್ಲ. ಆದ್ದರಿಂದ ನಾನು ಇಬ್ಬರೂ ಆಟಗಾರರಿಗೂ ಎರಡು ಏಕದಿನ ಪಂದ್ಯಗಳಿಂದ ನಿಷೇಧ ಹೇರುವಂತೆ ಶಿಫಾರಸು ಮಾಡಿದ್ದೇನೆ' ಎಂದು ಪಿಟಿಐ ಜೊತೆ ಮಾತನಾಡುತ್ತ ಬಿಸಿಸಿಐ ಆಡಳಿತ ಸಮಿತಿ ಸದಸ್ಯ ವಿನೋದ್ ರೈ ಬುಧವಾರ (ಜನವರಿ 10) ತಿಳಿಸಿದ್ದಾರೆ.

Story first published: Thursday, January 10, 2019, 14:18 [IST]
Other articles published on Jan 10, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+