RCB: ಫಾಫ್ ಡುಪ್ಲೇಸಿಸ್ ಸ್ಥಾನವನ್ನು ತುಂಬುತ್ತಾರಾ ಟೀಮ್ ಇಂಡಿಯಾ ಆಲ್‌ರೌಂಡರ್?
ಐಪಿಎಲ್ 2025ರ ಸಿದ್ಧತೆಗಳನ್ನು ಮಾಲೀಕರು ಮಾಡಿಕೊಳ್ಳುತ್ತಿದ್ದಾರೆ. ಯಾವ ಆಟಗಾರನನ್ನು ತಂಡದಿಂದ ಕೈ ಬಿಡಬೇಕು. ಯಾರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆರ್‌ಸಿಬಿ ಸಹ ಎಷ್ಟು ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
18ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತದೆ. ಈ ಹಾರಜಿಗೂ ಮುನ್ನ ಮಾಲೀಕರು ತಮ್ಮ ತಂಡದಲ್ಲಿ ಇರಿಸಿಕೊಂಡಿರುವ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಐಪಿಎಲ್ ಮ್ಯಾನೇಜ್ಮೆಂಟ್‌ಗೆ ಸಲ್ಲಿಸಬೇಕಾಗುತ್ತಾದೆ. ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಫಾಫ್ ಡುಪ್ಲೇಸಿಸ್, ರಿಷಭ್ ಪಂಥ್ ತಂಡವನ್ನು ತೊರೆಯುವ ಸಾಧ್ಯತೆ ದಟ್ಟವಾಗಿದೆ.

ತಂಡ ತೊರೆಯಲಿದ್ದಾರೆ ಹಾರ್ದಿಕ್?
ತಂಡವನ್ನು ತೊರೆಯುವ ಆಟಗಾರರ ಲೀಸ್ಟ್ ಇನ್ನು ಫೈನಲ್ ಆಗಿಲ್ಲ. ಆದರೆ ಈ ಪಟ್ಟಿಗೆ ಈಗ ಬಿಗ್ ಅಪ್‌ಡೇಟ್ ಸಿಕ್ಕಿದೆ. ಇದರ ಅನುಸಾರ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ತಂಡವನ್ನು ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಕಳೆದ ಆವೃತ್ತಿಯ ಹರಾಜಿಗೂ ಮುನ್ನ ಗುಜರಾತ್ ಟೈಟನ್ಸ್‌ನಿಂದ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ಟ್ರೇಡ್ ಮಾಡಿಕೊಂಡಿತ್ತು. ಆದರೆ ಹಾರ್ದಿಕ್, ತಂಡ ತನ್ನ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಆಡಲಿಲ್ಲ. ಹೀಗಾಗಿ ಮ್ಯಾನೇಜ್ಮೆಂಟ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಮುಂಬೈ ಸಹ ಮುಂದಿನ ಆವೃತ್ತಿಗೆ ತಮ್ಮ ತಂಡದ ನಾಯಕನನ್ನು ಬದಲಾವಣೆ ಮಾಡುವ ಸೂಚನೆ ನೀಡಿದೆ.

ಭವಿಷ್ಯದ ನಾಯಕನ ಹುಡುಕಾಟದಲ್ಲಿ ಆರ್‌ಸಿಬಿ?
ಆರ್‌ಸಿಬಿ ತಂಡದ ನಾಯಕ ಫಾಫ್ ಡುಪ್ಲೇಸಿಸ್ ಅವರನ್ನು ತಂಡದಿಂದ ಕೈ ಬಿಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಆರ್‌ಸಿಬಿ ಭವಿಷ್ಯದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಯೋಚನೆ ನಡೆಸಿದೆ. ಹೀಗಾಗಿ ಆರ್‌ಸಿಬಿ ನಾಯಕ ಪ್ಲಸ್ ಬೆಸ್ಟ್ ಪ್ಲೇಯರ್ ಹುಡುಕಾಟದಲ್ಲಿದೆ. ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ತೊರೆದಿದ್ದೇ ಆದಲ್ಲಿ, ಆರ್‌ಸಿಬಿ ಅವರಿಗೆ ಗಾಳ ಹಾಕಬಹುದಾಗಿದೆ.
ಫಾಫ್ ಸ್ಥಾನ ತುಂಬುತ್ತಾರಾ ಹಾರ್ದಿಕ್?
ಹಾರ್ದಿಕ್ ಪಾಂಡ್ಯ ಆರ್‌ಸಿಬಿ ತಂಡ ಸೇರಿಕೊಂಡಲ್ಲಿ, ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಸಮಸ್ಯೆ, ಆಲ್‌ರೌಂಡರ್ ಸಮಸ್ಯೆ ಹಾಗೂ ನಾಯಕನ ಸಮಸ್ಯೆಗೆ ಫುಲ್ ಸ್ಟಾಪ್ ಇಡಬಹುದಾಗಿದೆ. ಆದರೆ ಈ ಬಗ್ಗೆ ಇನ್ನು ಯಾವುದೇ ಸ್ಪಷ್ಟಮಾಹಿತಿ ಲಭ್ಯವಾಗಿಲ್ಲ. ಒಂದು ವೇಳೆ ಹೀಗೆ ಆದಲ್ಲಿ ಅಭಿಮಾನಿಗಳ ಖುಷಿಗೆ ಪಾರವೆ ಇರುವುದಿಲ್ಲ.
ರೋಹಿತ್‌ಗೆ ಮುಂಬೈ ಪಟ್ಟ?
ಹಾರ್ದಿಕ್ ಪಾಂಡ್ಯ ಆರ್‌ಸಿಬಿ ನಾಯಕತ್ವವನ್ನು ವಹಿಸಿಕೊಂಡಲ್ಲಿ, ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ಐಪಿಎಲ್ 2025ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಟಿ20 ವಿಶ್ವಕಪ್ ಚಾಂಪಿಯನ್ ತಂಡದ ನಾಯಕ ಹಾಗೂ ಮುಂಬೈ ಇಂಡಿಯನ್ಸ್ ತಂಡಕ್ಕೆ ಐದು ಬಾರಿ ಐಪಿಎಲ್ ಮುಕುಟ ತೊಡಿಸಿದ ಕ್ಯಾಪ್ಟನ್ ಮತ್ತೆ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದು ಹೇಳಲಾಗುತ್ತಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಮಾಲೀಕರು ಎಷ್ಟು ಆಟಗಾರರನ್ನು ಉಳಿಸಿಕೊಂಡಿದ್ದಾರೆ. ಯಾರಿಗೆ ರಿಲೀಸ್ ಮಾಡಿದ್ದಾರೆ ಎಂಬೆಲ್ಲಾ ಮಾಹಿತಿ ಸಿಗುತ್ತದೆ. ಆ ಬಳಿಕವೇ ಹರಾಜಿನ ಲೆಕ್ಕಾಚಾರಗಳು ಆರಂಭವಾಗುತ್ತವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications