Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹೊಸ ವರ್ಷದಂದೇ 'ದನ ಕಾಯೋನು' ನಟಿಯ ಜೊತೆ ಹಾರ್ದಿಕ್ ಪಾಂಡ್ಯಾ ನಿಶ್ಚಿತಾರ್ಥ

ಸತ್ಯ ಒಪ್ಪಿಕೊಂಡ ಹಾರ್ದಿಕ್ ಪಾಂಡ್ಯ | Oneindia Kannada
Hardik Pandya makes his relationship with Natasa Stankovic official

ಟೀಮ್ ಇಂಡಿಯಾ ಬ್ಯಾಡ್ ಬಾಯ್ ಹಾರ್ದಿಕ್ ಪಾಂಡ್ಯಾ ಹೊಸ ವರ್ಷದ ಆರಂಭದಲ್ಲೇ ಸುದ್ದಿಯಾಗಿದ್ದಾರೆ. ಹೊಸ ವರ್ಷವನ್ನು ಸ್ವಾಗತಿಸುವ ಸಂದರ್ಭದ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಮುಚ್ಚಿಟ್ಟಿದ್ದ ಪ್ರೇಮಕಾವ್ಯವನ್ನು ಅಭಿಮಾನಿಗಳಿಗೆ ಬಹಿರಂಗ ಪಡಿಸಿದ್ದಾರೆ. ಈ ಮೂಲಕ ನಟಿ ನತಾಶಾ ಸ್ಯಾಂಕೋವಿಕ್ ಜೊತೆಗಿನ ತಮ್ಮ ಪ್ರೇಮ ಸಂಬಂಧವನ್ನು ಖಚಿತಪಡಿಸಿದ್ದಾರೆ.

ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಾ ಇನ್ಸ್ಟಾಗ್ರಾಂನಲ್ಲಿ ತಮ್ಮ ಪ್ರೇಯಸಿಯೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಈಗಾಗಲೆ ಇಬ್ಬರ ಎಂಗೇಜ್ ಮೆಂಟ್ ಕೂಡ ನಡೆದಿದ್ದು ಎಂಜೇಗ್ ಮೆಂಟ್ ಉಂಗುರ ತೊಟ್ಟಿರುವ ಫೋಟೋವನ್ನು ಹಾರ್ದಿಕ್ ಶೇರ್ ಮಾಡಿದ್ದಾರೆ. ಈ ಪೋಟೋ ನೋಡಿದ ಅಭಿಮಾನಿಗಳು ಶುಭಾಶಯಗಳನ್ನು ಹಾರ್ದಿಕ್ ಪಾಂಡ್ಯಾ ಜೋಡಿಗೆ ಕಳುಹಿಸಿದ್ದಾರೆ.

ನಟಿ ನತಾಶಾ ಸ್ಯಾಂಕೋವಿಕ್ ಜೊತೆಗೆ ಹಾರ್ದಿಕ್ ಪಾಂಡ್ಯಾ ಡೇಟಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ ಎಂಬ ಸುದ್ದಿಗಳು ಆಗಾಗ ಕೇಳಿ ಬರುತ್ತಿತ್ತು. ಆದರೆ ಹಾರ್ದಿಕ್ ಪಾಂಡ್ಯಾ ಇದನ್ನು ಖಚಿತಪಡಿಸಿರಲಿಲ್ಲ. ಹೊಸ ವರ್ಷದ ಸಂದರ್ಭದಲ್ಲಿನ ಈ ಪೋಸ್ಟ್‌ ಈ ಎಲ್ಲದಕ್ಕೂ ಸ್ಪಷ್ಟ ಉತ್ತರವನ್ನು ನೀಡಿದೆ.

ಸರ್ಬಿಯನ್ ಮೂಲದ ನಟಿ ನತಾಶಾ ಸ್ಯಾಂಕೋವಿಕ್ ಕನ್ನಡ ಚಿತ್ರಗಳಲ್ಲೂ ಮಿಂಚಿದ್ದಾರೆ. ಕನ್ನಡದ 'ದನ ಕಾಯೋನು 'ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಸಾ ಕಾಣಿಸಿಕೊಂಡಿದ್ದರು.ಡ್ಯಾನ್ಸ್ ಟಿವಿ ಶೋ 'ನಾಚ್ ಬಲಿಯೆ' ಸೀಸನ್ 9ರ ಮೂಲಕ ಜನಪ್ರಿಯತೆಯನ್ನು ನಟಿ ಸ್ಟ್ಯಾಂಕೋವಿಕ್ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಈ ಮೂಲಕ ಸಿನಿಲೋಕ ಹಾಗೂ ಕ್ರಿಕೆಟ್‌ಲೋಕದ ಮತ್ತೊಂದು ಜೋಡಿ ಪ್ರೇಮ ಬಂಧನದಲ್ಲಿ ಸಿಲುಕಿದಂತಾಗಿದೆ.

ಹಾರ್ದಿಕ್ ಪಾಂಡ್ಯಾ ಗಾಯದ ಕಾರಣದಿಂದ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಕ್ರಿಕೆಟ್‌ನಿಂದ ದೂರವಿದ್ದಾರೆ. ಸದ್ಯ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಮತ್ತೆ ಅಭ್ಯಾಸವನ್ನೂ ಆರಂಭಿಸಿರುವ ಪಾಂಡ್ಯಾ ಮುಂದಿನ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನೂ ತಪ್ಪಿಸಿಕೊಂಡಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫಿಕ್ರಾ ವಿರುದ್ಧದ ಸರಣಿಯಲ್ಲಿ ಕೊನೆಯ ಬಾರಿಗೆ ಅಂತರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು.

Story first published: Wednesday, January 1, 2020, 19:47 [IST]
Other articles published on Jan 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+