Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನೆಚ್ಚಿನ ನಾಯಕನನ್ನು ಹೆಸರಿಸಿದ ಹಾರ್ದಿಕ್ ಪಾಂಡ್ಯ: ಆದರೆ ಅದು ವಿರಾಟ್ ಕೊಹ್ಲಿ ಅಲ್ಲ!

Hardik Pandya Names His Favorite Captain

ಸೀಮಿತ ಓವರ್‌ಗಳಲ್ಲಿ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಪ್ರಮುಖ ಆಲ್‌ರೌಂಡರ್. ತನ್ನ ಸ್ಪೋಟಕ ಬ್ಯಾಟಿಂಗ್ ಮತ್ತು ಮಧ್ಯಮ ವೇಗದ ಬೌಲಿಂಗ್‌ನಿಂದ ತಂಡಕ್ಕೆ ಕೊಡುಗೆಯನ್ನು ನೀಡುತ್ತಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಸಾಕಷ್ಟು ಭರವಸೆಯನ್ನು ಮೂಡಿಸಿರುವ ಆಟಗಾರ ಹಾರ್ದಿಕ್ ಪಾಂಡ್ಯ.

ಕೊರೊನಾ ವೈರಸ್‌ನ ಸಂದರ್ಭದಲ್ಲಿ ತಮ್ಮ ಕುಟುಂಬ ದೊಂದಿಗೆ ಕಾಲಕಳೆಯುತ್ತಿರುವ ಹಾರ್ದಿಕ್ ಪಾಂಡ್ಯ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಪಾಂಡ್ಯ ತನ್ನ ನೆಚ್ಚಿನ ನಾಯಕ ಯಾರು ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ. ಮತ್ತು ಅದಕ್ಕೆ ಕಾರಣವನ್ನೂ ಹೇಳಿದ್ದಾರೆ.

ಟೀಮ್ ಇಂಡಿಯಾ ಆಲ್‌ರೌಂಡರ್‌ನ ನೆಚ್ಚಿನ ನಾಯಕ ಯಾರು ಹಾಗಾದರೆ ಎಂಬುದನ್ನು ಮುಂದೆ ಓದಿ..

ಹಾರ್ದಿಕ್ ನೆಚ್ಚಿನ ನಾಯಕ ಕೊಹ್ಲಿ ಅಲ್ಲ.

ಹಾರ್ದಿಕ್ ನೆಚ್ಚಿನ ನಾಯಕ ಕೊಹ್ಲಿ ಅಲ್ಲ.

ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲೇ ಹೆಚ್ಚಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ ವಿರಾಟ್ ಕೊಹ್ಲಿಗಿಂತಲೂ ನೆಚ್ಚಿನ ನಾಯಕ ಪಾಂಡ್ಯಗೆ ಬೇರೊಬ್ಬರಿದ್ದಾರೆ. ಆತನ ನಾಯಕತ್ವೇ ತನಗೆ ಹೆಚ್ಚು ಇಷ್ಟ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಮಾತ್ರವಲ್ಲ ಆತ ತನ್ನ ಕ್ರಿಕೆಟ್‌ನ ಬೆಳವಣಿಗೆಗೆ ಸಾಕಷ್ಟು ಬೆಂಬಲವನ್ನು ನೀಡಿದ್ದಾರೆ ಎಂದಿದ್ದಾರೆ.

ಹಾರ್ದಿಕ್ ಹೇಳಿದ ನಾಯಕ ಯಾರು

ಹಾರ್ದಿಕ್ ಹೇಳಿದ ನಾಯಕ ಯಾರು

ಹಾಗಾದರೆ ಹಾರ್ದಿಕ್ ಪಾಂಡ್ಯಾ ಹೆಸರಿಸಿದ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರ ಟೀಮ್ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ. ಹಾರ್ದಿಕ್ ಪಾಂಡ್ಯಗೆ ವಿರಾಟ್‌ಗಿಂತಲೂ ಶರ್ಮಾ ನಾಯಕತ್ವ ಎಂದರೆ ಅಚ್ಚುಮೆಚ್ಚು ಎಂದು ಅವರೇ ಹೇಳಿಕೊಂಡಿದ್ದಾರೆ. ನಾನು ಅವರೊಂದಿಗೆ ಕ್ರಿಕೆಟ್ ಆಡುವುದನ್ನು ಯಾವಾಗಲೂ ಆನಂದಿಸುತ್ತೇನೆ ಎಂದಿದ್ದಾರೆ ಪಾಂಡ್ಯ.

ಮುಂಬೈ ಇಂಡಿಯನ್ಸ್ ತಂಡದ ನಾಯಕ

ಮುಂಬೈ ಇಂಡಿಯನ್ಸ್ ತಂಡದ ನಾಯಕ

ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. 2015ರಿಂದ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಈ ಅವಧಿಯಲ್ಲಿ ಮುಂಬೈ ಮೂರು ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದೆ.

ಶ್ರೇಷ್ಠ ನಾಯಕ ರೋಹಿತ್

ಶ್ರೇಷ್ಠ ನಾಯಕ ರೋಹಿತ್

ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡುವುದನ್ನು ನಾನು ಸಾಕಷ್ಟು ಆನಂದಿಸುತ್ತೇನೆ. ಆತನೋರ್ವ ಶ್ರೇಷ್ಠ ನಾಯಕ. ನಾವಿಬ್ಬರೂ ಆಟದ ಬಗ್ಗೆ ಹೆಚ್ಚಿನ ಚರ್ಚೆಗಳನ್ನು ನಡೆಸುವುದಿಲ್ಲ. ಆದರೆ ನಾನು ನನ್ನ ಉತ್ತಮ ಸಂದರ್ಭಗಳನ್ನು ರೋಹಿತ್ ನಾಯಕತ್ವದಲ್ಲಿ ಆಡಿದಾಗ ಪಡೆದುಕೊಂಡಿದ್ದೇನೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಬೂಮ್ರಾ ಬಗ್ಗೆಯೂ ಪಾಂಡ್ಯ ಪ್ರಶಂಸೆ

ಬೂಮ್ರಾ ಬಗ್ಗೆಯೂ ಪಾಂಡ್ಯ ಪ್ರಶಂಸೆ

ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬೂಮ್ರಾ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಬೂಮ್ರಾ ಶಾಂತ ಮನಸ್ಸಿನ ವ್ಯಕ್ತಿ ಮತ್ತು ಸಾಕಷ್ಟು ಜ್ಞಾನವನ್ನು ಹೊಂದಿದ್ದಾರೆ. ನಾನು ಹೆಚ್ಚಿನ ಸಮಯವನ್ನು ಕಳೆಯಲು ಬಯಸುವ ವ್ಯಕ್ತಿಗಳಲ್ಲಿ ಬೂಮ್ರಾ ಕೂಡ ಒಬ್ಬರು ಎಂದು ಪಾಂಡ್ಯ ಹೇಳಿಕೊಂಡಿದ್ದಾರೆ. ಬೂಮ್ರ ಕೂಡ ಮುಂಬೈ ಇಂಡಿಯನ್ಸ್ ತಂಡದ ಸದಸ್ಯ

Story first published: Monday, June 8, 2020, 13:58 [IST]
Other articles published on Jun 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+