For Quick Alerts
ALLOW NOTIFICATIONS  
For Daily Alerts
 

Hardik Pandya-Natasha Divorce: ಬೇರೆಯಾದ ಹಾರ್ದಿಕ್‌-ನತಾಶ ದಂಪತಿ; 4 ವರ್ಷಗಳ ವೈವಾಹಿಕ ಜೀವನಕ್ಕೆ ಬ್ರೇಕ್‌!

ಜುಲೈ 18 ಗುರುವಾರ, ಹಾರ್ದಿಕ್ ಪಾಂಡ್ಯ ಮತ್ತು ನತಾಸಾ ಸ್ಟಾಂಕೋವಿಕ್ ಪರಸ್ಪರ ತಮ್ಮ ವೈವಾಹಿಕ ಸಂಬಂಧವನ್ನು ಕೊನೆಗೊಳಿಸಿದ್ದಾರೆ. ಈ ಮೂಲಕ ಹಾರ್ದಿಕ್ ಮತ್ತು ನತಾಶಾ ಅವರ 4 ವರ್ಷಗಳ ವೈವಾಹಿಕ ಜೀವನಕ್ಕೆ ಬ್ರೇಕ್‌ ಬಿದ್ದಿದೆ.

ಈ ಬಗ್ಗೆ ಹಾರ್ದಿಕ್ ಮತ್ತು ನತಾಶಾ ಅವರು ಇನ್‌ಸ್ಟಾಗ್ರಾಮ್‌ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಕಳೆದ 6 ತಿಂಗಳಿಂದ ಇಬ್ಬರ ಸಂಬಂಧದಲ್ಲಿ ಬಿರುಸಿನ ಸುದ್ದಿಗಳು ಬಂದಿದ್ದವು. ಆದರೆ ಇದೀಗ ಇಬ್ಬರೂ ಪರಸ್ಪರ ಸಂಬಂಧವನ್ನು ಕೊನೆಗೊಳಿಸಿರುವುದು ಅಧಿಕೃತವಾಗಿದೆ.

Hardik Pandya-Natasa Stankovic Divorce Announcement

ಕಳೆದ 4 ವರ್ಷಗಳಿಂದ ಇಬ್ಬರೂ ಒಟ್ಟಿಗೆ ಇದ್ದರು. ಆದರೆ ಈಗ ಸ್ಟಾರ್‌ ಜೋಡಿಯ ವೈವಾಹಿಕ ಸಂಬಂಧ ಮುರಿದು ಬಿದ್ದಿದೆ. ನತಾಶಾ ಮತ್ತು ಹಾರ್ದಿಕ್ ತಮ್ಮ ಸಂಬಂಧದಲ್ಲಿನ ಹುಳಿತನದ ಬಗ್ಗೆ ಹಲವು ತಿಂಗಳುಗಳಿಂದ ಮೌನವಹಿಸಿದ್ದರು.

ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಏನಿದೆ?

ವಿಚ್ಛೇದನ ಬಗ್ಗೆ ಮಾಹಿತಿ ನೀಡಲು ಹಾರ್ದಿಕ್ ಪಾಂಡ್ಯ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಮಾಡಿ ಕಾಮೆಂಟ್‌ ಬಾಕ್ಸ್‌ ಆಫ್‌ ಮಾಡಿದ್ದಾರೆ. '4 ವರ್ಷಗಳ ಕಾಲ ಒಟ್ಟಿಗೆ ವಾಸಿಸಿದ ನಂತರ, ನತಾಶಾ ಮತ್ತು ನಾನು ಪರಸ್ಪರ ಒಪ್ಪಿಗೆಯೊಂದಿಗೆ ಬೇರೆಯಾಗಲು ನಿರ್ಧರಿಸಿದ್ದೇವೆ.

ಇದು ನಮಗೆ ಕಷ್ಟಕರವಾದ ನಿರ್ಧಾರವಾಗಿತ್ತು. ಏಕೆಂದರೆ ಒಟ್ಟಾಗಿ ನಾವು ನಮ್ಮ ಕೈಲಾದಷ್ಟು ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಹೊಂದಿದ್ದೇವೆ, ನಮ್ಮ ಕುಟುಂಬ ಬೆಳೆಸಿಕೊಂಡಿದ್ದೇವೆ' ಎಂದು ಹಾರ್ದಿಕ್‌ ತಮ್ಮ ನೋವಿನ ಬರಹದ ಮೂಲಕ ವ್ಯಕ್ತಪಡಿಸಿದ್ದಾರೆ.

ಪ್ರೀತಿಯ ಮಗನ ಬಗ್ಗೆ ಪಾಂಡ್ಯ ಹೇಳಿದ್ದೇನು?

ಹಾರ್ದಿಕ್‌ ಪಾಂಡ್ಯ ಅವರಿಗೆ ತಮ್ಮ ಮಗ ಅಗಸ್ತ್ಯ ಎಂದರೆ ಪಂಚಪ್ರಾಣ. ಹಾರ್ದಿಕ್‌ ಮತ್ತು ನತಾಶ ವಿಚ್ಛೇದನ ಪಡೆದ ನಂತರ ಅಗಸ್ತ್ಯ ಯರೊಂದಿಗೆ ಇರುತ್ತಾನೆ ಎಂಬುದು ಕೂತುಹಲ ಮೂಡಿಸಿದೆ. ಆದರೆ, ಈ ಬಗ್ಗೆ ಪೋಸ್ಟ್‌ನಲ್ಲಿ ಹಾರ್ದಿಕ್‌ ಪಾಂಡ್ಯ ತಿಳಿಸಿದ್ದಾರೆ.

'ನಮ್ಮಿಬ್ಬರ ಜೀವನದ ಕೇಂದ್ರ ಬಿಂದುವಾಗಿರುವ ಅಗಸ್ತ್ಯನನ್ನು ನಾವು ಆಶೀರ್ವದಿಸಿದ್ದೇವೆ ಮತ್ತು ನಾವು ಅವನ ಸಂತೋಷಕ್ಕಾಗಿ ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ನೀಡುವುದನ್ನು ಖಚಿತಪಡಿಸಿಕೊಳ್ಳಲು ಅವನಿಗೆ ಸಹ-ಪೋಷಕರಾಗಿರುತ್ತೇವೆ.

ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಉಳಿಸಿಕೊಳ್ಳಲು ನಿಮ್ಮ ಬೆಂಬಲ ಮತ್ತು ಸಹಕಾರವನ್ನು ಪ್ರಾಮಾಣಿಕವಾಗಿ ಕೇಳಿಕೊಳ್ಳುತ್ತೇವೆ ಎಂದು ಮನವಿ ಮಾಡಿದ್ದಾರೆ.

ಹಾರ್ದಿಕ್‌ ಪಾಂಡ್ಯ ಮತ್ತು ನತಾಶಾ ಇಬ್ಬರೂ ಪ್ರೀತಿಸಿ ಮದುವೆ ಆದವರು. ಸರ್ಬಿಯಾದ ಪ್ರಜೆಯಾದ ನತಾಶಾ ಭಾರತದಲ್ಲಿ ವಾಸಿಸುತ್ತಿದ್ದಾರೆ. ಮಾಡೆಲ್‌, ನಟಿಯಾಗಿ ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Story first published: Thursday, July 18, 2024, 22:06 [IST]
Other articles published on Jul 18, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+