Hardik Pandya-Natasha Divorce: ಸರ್ಬಿಯಾ ಅಥವಾ ಭಾರತದಲ್ಲಿ ಕೇಸ್ ದಾಖಲಾದರೆ ಹಾರ್ದಿಕ್ ಪಾಂಡ್ಯ ಗತಿಯೇನು?
ಮೇ 29 ಬುಧವಾರ, ಭಾರತ ತಂಡದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹಾಗು ನಟಿ ನತಾಶಾ ಸ್ಟಾಂಕೋವಿಕ್ ಜೋಡಿ ಮದುವೆಗೂ ಮುಂಚೆ ಸಾಕಷ್ಟು ಸುದ್ದಿಯಾಗಿದ್ದರು.
ಬಳಿಕ ಇದೀಗ ಈ ಸ್ಟಾರ್ ಜೋಡಿ ವಿಚ್ಛೇದನ ಪಡೆದುಕೊಳ್ಳಲು ಬಯಸಿದೆ ಎಂಬ ವದಂತಿಗಳು ಎಲ್ಲಡೆ ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಇಬ್ಬರೂ ಯಾವುದೇ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿಲ್ಲ. ಅದಾಗ್ಯೂ, ಹಾರ್ದಿಕ್ ಪಾಂಡ್ಯ ಏಕೆ ಸಂಕಷ್ಟ ಎದುರಿಸುತ್ತಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಇಬ್ಬರೂ ಪ್ರೀತಿಸಿ ಮದುವೆ ಆದವರು. ಸರ್ಬಿಯಾದ ಪ್ರಜೆಯಾದ ನತಾಶಾ ಭಾರತದಲ್ಲಿ ವಾಸಿಸುತ್ತಿದ್ದಾರೆ. ಮಾಡೆಲ್, ನಟಿಯಾಗಿ ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇತ್ತೀಚೆಗೆ ನತಾಸಾ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ 'ಪಾಂಡ್ಯ' ಹೆಸರನ್ನು ತೆಗೆದುಹಾಕಿದ್ದಾರೆ. ಬಳಿಕ ಏಪ್ರಿಲ್ 4ರಂದು ಪತ್ನಿಯ ಹುಟ್ಟುಹಬ್ಬಕ್ಕೆ ಹಾರ್ದಿಕ್ ಪಾಂಡ್ಯ ಶುಭಾಶಯ ತಿಳಿಸಿಲ್ಲ. ಅಲ್ಲದೆ ಪ್ರತಿ ಬಾರಿ ತನ್ನ ಪತಿಗೆ ಬೆಂಬಲ ನೀಡಲು ಮೈದಾನಕ್ಕೆ ಬರುತ್ತಿದ್ದ ನತಾಶಾ ಈ ಆವೃತ್ತಿ ಐಪಿಎಲ್ ವೇಳೆ ಬಂದಿಲ್ಲ.
ಹೀಗಾಗಿ ಸ್ಟಾರ್ ಜೋಡಿಯ ವಿಚ್ಛೇದನದ ಈ ಊಹಾಪೋಹಗಳು ವೇಗವನ್ನು ಪಡೆದುಕೊಂಡಿದ್ದು, ಹಾರ್ದಿಕ್ ಪಾಂಡ್ಯ ಆಸ್ತಿಗೆ ಸಂಬಂಧಿಸಿದಂತೆ ಹಲವು ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಎಲ್ಲ ವಿಚಾರಗಳು ಹರಿದಾಡುತ್ತಿರುವ ಬೆನ್ನಲ್ಲೆ, ನತಾಶ ವಿಚ್ಛೇದನ ಪ್ರಕರಣವನ್ನು ಎಲ್ಲಿ ದಾಖಲಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ನತಾಶಾ ವಿಚ್ಛೇದನ ಪ್ರಕರಣವನ್ನು ಎಲ್ಲಿ ದಾಖಲಿಸುತ್ತಾರೆ ಎಂಬುದರ ಮೇಲೆ ಆಸ್ತಿ ವಿವಾದವು ಅವಲಂಬಿತವಾಗಿರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಸರ್ಬಿಯಾದಲ್ಲಿ ಕೇಸ್ ದಾಖಲಾದರೆ ಹಾರ್ದಿಕ್ ಪಾಂಡ್ಯ ಸಂಕಷ್ಟ ಮತ್ತಷ್ಟು ಹೆಚ್ಚಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಈ ಬಗ್ಗೆ ವಿಚ್ಛೇದನ ಪ್ರಕರಣಗಳಲ್ಲಿ ಪರಿಣಿತರಾಗಿರುವ ಕರ್ಕರ್ಡೂಮಾ ನ್ಯಾಯಾಲಯದ ವಕೀಲ ಮನೀಶ್ ಭದೌರಿಯವರು ಮಾಹಿತಿ ನೀಡಿದ್ದಾರೆ. ನ್ಯೂಸ್ 24 ಚಾನೆಲ್‌ಗೆ ತಿಳಿಸಿದ ಮಾಹಿತಿಯ ಪ್ರಕಾರ, ನತಾಶಾಗೆ ವಿಚ್ಛೇದನ ಪ್ರಕರಣವನ್ನು ದಾಖಲಿಸಲು ಭಾರತ ಮತ್ತು ಸರ್ಬಿಯಾ ಎರಡು ದೇಶಗಳಲ್ಲಿ ಅವಕಾಶ ಇದೆ.
ಈ ಸಂದರ್ಭದಲ್ಲಿ ಸರ್ಬಿಯಾ ಕೋರ್ಟ್ ಯಾವುದೇ ತೀರ್ಪು ನೀಡಿದರೂ ಹಾರ್ದಿಕ್ ಅದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಆದರೆ, ಅದು ಅಷ್ಟು ಸುಲಭವಲ್ಲ. ಭಾರತದಲ್ಲಿ ಹಾರ್ದಿಕ್ ಪಾಂಡ್ಯ ವಿರುದ್ಧ ಪತ್ನಿ ಕೇಸ್ ದಾಖಲಿಸಿದರೆ, ಅವರಿಗೆ ಈ ಕಾನೂನಿ ಪ್ರಕಾರ ಏನನ್ನೂ ಪಡೆಯಲು ಸಾಧ್ಯವಿಲ್ಲ ಎಂದು ವಕೀಲರು ಹೇಳಿದ್ದಾರೆ.

ನ್ಯಾಯಾಲಯದಲ್ಲಿ ನತಾಶ ಜೀವನ ನಡೆಸಲು ಬೇಕಾಗುವ ಹಣವನ್ನು ಕೇಳಬಹುದು. ಆ ಮೊತ್ತವನ್ನು ಪಾವತಿಸುವುದರಿಂದ ಹಾರ್ದಿಕ್ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಆದರೆ, ನತಾಶಾ ಸರ್ಬಿಯಾ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿ ನಂತರ ಜೀವನಾಂಶವಾಗಿ ಭಾರೀ ಪ್ರಮಾಣದ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದೇ ಆದಲ್ಲಿ ಹಾರ್ದಿಕ್ ಸಮಸ್ಯೆಗಳು ಹೆಚ್ಚಾಗುವುದು ಖಚಿತ ಎಂದು ವಕೀಲ ಮನೀಶ್ ಭದೌರಿ ವಿವರಿಸಿದ್ದಾರೆ.
ಏನಾದರೂ ಹಾರ್ದಿಕ್ ಅವರಿಗೆ ಸರ್ಬಿಯಾ ಕೋರ್ಟ್ ನೀಡಿದ ನೋಟಿಸ್‌ಗೆ ಪ್ರತಿಕ್ರಿಯಿಸಿದ್ದರೆ, ಅಥವಾ ಕೋರ್ಟ್ ಗೆ ಹಾಜರಾಗದಿದ್ದರೆ ಅಲ್ಲಿನ ನ್ಯಾಯಾಲಯವು ನತಾಶಾ ಪರವಾಗಿ ತೀರ್ಪು ನೀಡಬಹುದು. ಸರ್ಬಿಯಾ ಕೋರ್ಟ್ ಯಾವುದೇ ನಿರ್ಧಾರ ನೀಡಿದರೂ ಹಾರ್ದಿಕ್ ಅದನ್ನು ಒಪ್ಪಿಕೊಳ್ಳಲೇಬೇಕು.
ಇಲ್ಲದಿದ್ದರೆ ಅವರ ವಿರುದ್ಧ ಭಾರತದಲ್ಲೂ ಪ್ರಕರಣ ದಾಖಲಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಸರ್ಬಿಯಾದಲ್ಲಿ ಕೇಸ್ ದಾಖಲಿಸುವುದು ಸುಲಭದ ಮಾತಲ್ಲ. ಏಕೆಂದರೆ ಸ್ಟಾರ್ ಜೋಡಿ ಭಾರತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಈ ಕೇಸ್‌ಗೆ ಸಂಬಂಧಿಸಿದಂತೆ ಮೊದಲು ಭಾರತದ ನ್ಯಾಯಾಲಯ ತೀರ್ಪನ್ನು ನೀಡಬೇಕೆಂಬ ನಿಯಮವಿದೆ. ಭಾರತೀಯ ನ್ಯಾಯಾಲಯ ನೀಡಿರುವ ತೀರ್ಪಿನಿಂದ ನತಾಶಾ ತೃಪ್ತ ರಾಗದಿದ್ದರೆ ಸರ್ಬಿಯಾ ನ್ಯಾಯಾಲಯದ ಮೊರೆ ಹೋಗಲು ಮುಕ್ತ ಅವಕಾಶವಿದೆ.
ಸರ್ಬಿಯಾ ವಿಚ್ಛೇದನ ನಿಯಮ ವಿಭಿನ್ನ
ವಿದೇಶಿ ಪ್ರಜೆಯನ್ನು ಸರ್ಬಿಯಾದ ಪ್ರಜೆ ಆ ದೇಶದಲ್ಲಿ ಮದುವೆಯಾಗಿದ್ದರೆ, ಅಲ್ಲಿ ಮದುವೆ ನೋಂದಣಿಯನ್ನು ಮಾಡಬೇಕಾಗುತ್ತದೆ. ಮದುವೆ ನೋಂದಣಿಯ ಪ್ರತಿಯನ್ನು ಆ ದೇಶದ ಸರ್ಬಿಯಾದ ರಾಯಭಾರಿ ಕಚೇರಿಗೆ ಸಲ್ಲಿಸಬೇಕು.
ಬಳಿಕ ಸರ್ಬಿಯಾದ ಪ್ರಜೆಯು ಆ ಮದುವೆಯನ್ನು ತನ್ನ ಪ್ರದೇಶದಲ್ಲಿಯೂ ನೋಂದಾಯಿಸಿಕೊಳ್ಳಬೇಕು. ನತಾಶಾ ಈ ಪ್ರಕ್ರಿಯೆಗಳನ್ನು ಮಾಡಿದ್ದಾರೋ ಇಲ್ಲವೋ ಎಂಬ ಮಾಹಿತಿ ಇಲ್ಲ. ಮಾಡದಿದ್ದರೆ ಹಾರ್ದಿಕ್ ಪಾಂಡ್ಯ ಸ್ವಲ್ಪ ರಿಲ್ಯಾಕ್ಸ್ ಆಗಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications