For Quick Alerts
ALLOW NOTIFICATIONS  
For Daily Alerts
 

ಮುಂಬೈ ರಸ್ತೆಯಲ್ಲಿ 12 ಕೋಟಿಯ ಫೆರಾರಿ ಏರಿದ ಹಾರ್ದಿಕ್ ಪಾಂಡ್ಯ: ಬೆವರಿಳಿಸಿದ ಸ್ಪೀಡ್ ಬ್ರೇಕರ್

ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ವಾಂಖೆಡೆಯಲ್ಲಿ ಐಪಿಎಲ್‌ ಆಡಲು ಸಜ್ಜಾಗುತ್ತಿದ್ದರೆ, ಇತ್ತ ಸಾಮಾಜಿಕ ಜಾಲತಣದಲ್ಲಿ ಅವರದೊಂದು ವಿಡಿಯೋ ಸಖತ್ ವೈರಲ್ ಆಗಿದೆ. ಹಾರ್ದಿಕ್ ಪಾಂಡ್ಯ ಇತ್ತೀಚಿಗೆ ಮುಂಬೈನ ಬೀದಿಗಳಲ್ಲಿ ಅವರ 12 ಕೋಟಿ ರೂ. ಮೌಲ್ಯದ ಹೊಸ ಫೆರಾರಿ ಕಾರನ್ನು ಚಾಲನೆ ಮಾಡಿದರು. ಈ ಕಾರ್‌ ಹೈ ಸ್ಪೀಡ್ ಬ್ರೇಕ್‌ ದಾಟಲು ಕಷ್ಟ ಪಡುತ್ತಿರುವ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.

ಸ್ಪೋರ್ಟ್ಸ್ ಕಾರುಗಳು ತುಂಬಾ ಕಡಿಮೆ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಮುಂಬೈನ ಹೈ ಸ್ಪೀಡ್ ಬ್ರೇಕರ್‌ಗಳ ಮೇಲೆ ಚಲಿಸುವುದು ಹಾರ್ದಿಕ್‌ಗೆ ಸವಾಲಾಗಿ ಪರಿಣಮಿಸಿದೆ. ವೈರಲ್ ಆಗಿರುವ ವೀಡಿಯೊದಲ್ಲಿ, ಹಾರ್ದಿಕ್ ಕಾರಿನ ಕೆಳಭಾಗಕ್ಕೆ ಹಾನಿಯಾಗದಂತೆ, ತಮ್ಮ ಡ್ರೈವಿಂಗ್ ಕೌಶಲ್ಯಗಳನ್ನು ಪ್ರದರ್ಶಿಸುವುದು ಕಂಡು ಬಂದಿದೆ.

Hardik Pandya

ವೈರಲ್ ವಿಡಿಯೋ

ಹಾರ್ದಿಕ್ ಪಾಂಡ್ಯ ಗ್ರೌಂಡ್ ಕ್ಲಿಯರೆನ್ಸ್ ಕಡಿಮೆ ಇರುವ ಕಾರನ್ನು ನೇರವಾಗಿ ಸ್ಪೀಡ್‌ ಬ್ರೇಕರ್ ದಾಟಿಸದೆ, ಕ್ರಾಸ್‌ ಆಗಿ ಕಾರನ್ನು ನಿಧಾನವಾಗಿ ಚಲಾಯಿಸಿದರು. ಅಲ್ಲದೆ ಸ್ಪೀಡ್ ಬ್ರೇಕರ್ ಅನ್ನು ಎಚ್ಚರಿಕೆಯಿಂದ ದಾಟಿದರು. ಸ್ಪೀಡ್ ಬ್ರೇಕರ್ ದಾಟಿದ ನಂತರ, ಹಾರ್ದಿಕ್ ಅಲ್ಲಿದ್ದ ಕೆಲವು ಪೊಲೀಸ್ ಅಧಿಕಾರಿಗಳನ್ನು ಸಹ ಭೇಟಿಯಾದರು. ಈ ವೀಡಿಯೊವನ್ನು ಅಭಿಮಾನಿಗಳು ವ್ಯಾಪಕವಾಗಿ ಮೆಚ್ಚಿದ್ದಾರೆ. ಅಲ್ಲದೆ ಹಾರ್ದಿಕ್ ಪಾಂಡ್ಯ ಅವರ ಕಾರಿನ ಮೇಲಿನ ಪ್ರೀತಿ ಈ ವಿಡಿಯೋದಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ.

ಹಾರ್ದಿಕ್ ಪಾಂಡ್ಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ತಂಡದಲ್ಲಿ ವಿಶ್ವ ಚಾಂಪಿಯನ್ ಆಟಗಾರರ ದಂಡೇ ಇದೆ. ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಸ್ಟಾರ್ ಆಟಗಾರರ ಬಲ ತಂಡಕ್ಕಿದೆ. ಈ ಆಟಗಾರರು ಯಾವುದೇ ಕ್ಷಣದಲ್ಲೂ ಪಂದ್ಯದ ಗತಿಯನ್ನು ಬದಲಿಸಬಲ್ಲ ಕ್ಷಮತೆಯನ್ನು ಹೊಂದಿರುವ ಪ್ಲೇಯರ್ಸ್‌.

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕಳೆದ ಐದು ವರ್ಷಗಳಿಂದ ಪ್ರಶಸ್ತಿ ಬರವನ್ನು ಎದುರಿಸುತ್ತಿದೆ. ಈ ಬಾರಿ ಆರನೇ ಬಾರಿ ಟ್ರೋಫಿ ಎತ್ತಿ ಇತಿಹಾಸ ನಿರ್ಮಿಸುವ ಕನಸು ಹಾರ್ದಿಕ್ ಪಡೆಯದ್ದಾಗಿದೆ. ಭಾನುವಾರ ಮುಂಬೈ ಇಂಡಿಯನ್ಸ್‌ ತನ್ನ ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಕೋಲತ್ತಾ ನೈಟ್ ರೈಡರ್ಸ್ ಸವಾಲು ಎದುರಿಸಲಿದೆ.

Story first published: Sunday, March 29, 2026, 20:14 [IST]
Other articles published on Mar 29, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+