2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಗೆ ಐದು ತಿಂಗಳು ಮುನ್ನ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನೂತನ ನಾಯಕ ಎಂದು ಘೋಷಿಸಿದ ಒಂದು ಗಂಟೆಯೊಳಗೆ ಮುಂಬೈ ಇಂಡಿಯನ್ಸ್ ಎಕ್ಸ್ (ಟ್ವಿಟ್ಟರ್)ನಲ್ಲಿ 4 ಲಕ್ಷ ಅನುಯಾಯಿಗಳನ್ನು ಕಳೆದುಕೊಂಡಿದೆ.
ಹಾರ್ದಿಕ್ ಪಾಂಡ್ಯ ಅವರನ್ನು ಡಿಸೆಂಬರ್ 15ರಂದು ಮುಂಬೈ ಇಂಡಿಯನ್ಸ್ ತಂಡದ ಹೊಸ ನಾಯಕ ಎಂದು ಘೋಷಿಸಲಾಯಿತು. ಗುಜರಾತ್ ಟೈಟನ್ಸ್ ಮಾಜಿ ನಾಯಕ ಪಾಂಡ್ಯ ಅವರು ತನ್ನ ಹೆಸರಿಗೆ ಐದು ಐಪಿಎಲ್ ಪ್ರಶಸ್ತಿಗಳನ್ನು ಹೊಂದಿರುವ ಲೆಜೆಂಡ್ ರೋಹಿತ್ ಶರ್ಮಾ ಅವರಿಂದ ನಾಯಕತ್ವ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ರೋಹಿತ್ ಶರ್ಮಾ ಅವರು 2013ರಿಂದ ಮುಂಬೈ ಇಂಡಿಯನ್ಸ್‌ನ ಚುಕ್ಕಾಣಿ ಹಿಡಿದಿದ್ದರು ಮತ್ತು 2023ರ ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರಿಂದ ಸರಿಗಟ್ಟಿದ 5 ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
2022ರ ಟಿ20 ವಿಶ್ವಕಪ್ ಸೆಮಿಫೈನಲ್ ಸೋಲಿನ ನಂತರ ಭಾರತ ತಂಡಕ್ಕಾಗಿ ಟಿ20 ಪಂದ್ಯಗಳನ್ನು ಆಡದ ರೋಹಿತ್ ಶರ್ಮಾ ಅವರು ಐಪಿಎಲ್ 2024ರಿಂದ ತಮ್ಮ ಫ್ರಾಂಚೈಸಿಯನ್ನು ಮುನ್ನಡೆಸುವುದಿಲ್ಲ.
2023ರ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತದ ಹೃದಯವಿದ್ರಾವಕ ಸೋಲಿನ ಬಳಿಕ, ಭಾರತ ತಂಡದ ನಾಯಕ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡರು ಮತ್ತು ಡಿಸೆಂಬರ್ 26ರಂದು ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮರಳಲಿದ್ದಾರೆ.
"ಇದು ಪರಂಪರೆಯ ನಿರ್ಮಾಣದ ಭಾಗವಾಗಿದೆ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಮುಂಬೈ ಇಂಡಿಯನ್ಸ್ ತತ್ವಶಾಸ್ತ್ರಕ್ಕೆ ನಿಜವಾಗಿದೆ. ಮುಂಬೈ ಇಂಡಿಯನ್ಸ್ ಯಾವಾಗಲೂ ಸಚಿನ್‌ನಿಂದ ಹರ್ಭಜನ್‌ವರೆಗೆ ಮತ್ತು ರಿಕಿ ಪಾಟಿಂಗ್‌ರಿಂದ ರೋಹಿತ್‌ವರೆಗೆ ಅಸಾಧಾರಣ ನಾಯಕತ್ವದಿಂದ ಆಶೀರ್ವದಿಸಲ್ಪಟ್ಟಿದೆ. ಇವರೆಲ್ಲಾ ತಕ್ಷಣದ ಯಶಸ್ಸಿಗೆ ಕೊಡುಗೆ ನೀಡಿದರು ಮತ್ತು ಭವಿಷ್ಯಕ್ಕಾಗಿ ತಂಡವನ್ನು ಬಲಪಡಿಸುವತ್ತ ಯಾವಾಗಲೂ ಕಣ್ಣಿಟ್ಟಿದ್ದರು".
"ಇದೇ ತತ್ತ್ವಶಾಸ್ತ್ರಕ್ಕೆ ಅನುಗುಣವಾಗಿ ಹಾರ್ದಿಕ್ ಪಾಂಡ್ಯ ಅವರು ಐಪಿಎಲ್ 2024ರ ಆವೃತ್ತಿಗಾಗಿ ಮುಂಬೈ ಇಂಡಿಯನ್ಸ್‌ನ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ," ಎಂದು ಮುಂಬೈ ಇಂಡಿಯನ್ಸ್‌ನ ಗ್ಲೋಬಲ್ ಹೆಡ್ ಆಫ್ ಪರ್ಫಾರ್ಮೆನ್ಸ್ ಮಹೇಲಾ ಜಯವರ್ಧನೆ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಪರ ಆಡುವ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಹಾರ್ದಿಕ್ ಪಾಂಡ್ಯ, 2022 ಮತ್ತು 2023ರ ಆವೃತ್ತಿಯಲ್ಲಿ ಹೊಸ ತಂಡ ಗುಜರಾತ್ ಟೈಟನ್ಸ್ ನಾಯಕತ್ವ ವಹಿಸಿದರು. ಇದೀಗ ಅದನ್ನು ತ್ಯಜಿಸಿ 2 ವರ್ಷಗಳ ನಂತರ ಮೂಲ ಫ್ರಾಂಚೈಸಿಗೆ ಮರಳಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರು ತಮ್ಮ ಚೊಚ್ಚಲ ಋತುವಿನಲ್ಲಿ ಐಪಿಎಲ್ ಪ್ರಶಸ್ತಿಗೆ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸಿದರು. ಅವರು ಐಪಿಎಲ್ 2022ರ ಫೈನಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿದರು. ಅಂತಿಮ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದು 34 ರನ್ ಗಳಿಸಿ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು.
ಹಾರ್ದಿಕ್ ಪಾಂಡ್ಯ 2023ರಲ್ಲಿ ಗುಜರಾತ್ ಟೈಟನ್ಸ್ ಫ್ರಾಂಚೈಸಿಯೊಂದಿಗೆ ಉತ್ತಮವಾಗಿ ಪ್ರದಶನ ನೀಡಿದರು ಮತ್ತು ತಂಡವನ್ನು ಫೈನಲ್‌ಗೆ ಕರೆದೊಯ್ದರು. ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯದ ಕೊನೆಯ ಎಸೆತದಲ್ಲಿ ರೋಚಕ ಸೋಲು ಅನುಭವಿಸಿದರು.