ನವದೆಹಲಿ, ನವೆಂಬರ್ 29: ಭಾರತದ ಯುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಬಲಭುಜಕ್ಕೆ ಗಾಯವಾಗಿದ್ದು, ಕ್ರಿಕೆಟ್ ಮೈದಾನದಿಂದ 6 ವಾರಗಳ ಕಾಲ ದೂರವಿರಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಪಾಂಡ್ಯ ಅಲಭ್ಯರಾಗಿರುತ್ತಾರೆ.
ಹಾರ್ದಿಕ್ ಪಾಂಡ್ಯ ಅವರ ಬಲಭುಜಕ್ಕೆ ಆಗಿರುವ (hairline fracture) ಗಾಯ ಗುಣಮುಖವಾಗಲು ಸಾಕಷ್ಟು ಸಮಯ ಬೇಕಿದ್ದು, ಅವರಿಗೆ 6 ವಾರಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ವೈದಕೀಯ ತಂಡ ಹೇಳಿದೆ.

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ನೆಟ್ ಅಭ್ಯಾಸ ವೇಳೆ ಆಡುವಾಗ ಪಾಂಡ್ಯ ಅವರ ಬಲಭುಜಕ್ಕೆ ಗಾಯವಾಗಿತ್ತು. ಇದರಿಂದಾಗಿ ಟೆಸ್ಟ್ ತಂಡದಿಂದ ಹೊರಗುಳಿದು ಚಿಕಿತ್ಸೆ ಪಡೆಯುತ್ತಿದ್ದರು. ಈಗ ಏಕದಿನ ಸರಣಿ ಆಡುವುದು ಅನುಮಾನವಾಗಿದೆ. ಈಗಾಗಲೇ ಕೆಎಲ್ ರಾಹುಲ್ ಹಾಗೂ ವೃದ್ಧಿಮಾನ್ ಸಹಾ ಗಾಯಾಳುಗಳ ಪಟ್ಟಿಯಲ್ಲಿದ್ದಾರೆ. (ಒನ್ಇಂಡಿಯಾ ಸುದ್ದಿ)