For Quick Alerts
ALLOW NOTIFICATIONS  
For Daily Alerts
 

T20 World Cup: ವೆಸ್ಟ್ ಇಂಡೀಸ್ ಸ್ಕೋರ್‌ಕಾರ್ಡ್‌ನಲ್ಲಿ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ !

ಜೂನ್ 3 ಸೋಮವಾರ, 2024ರ ಐಸಿಸಿ ಟಿ20 ವಿಶ್ವಕಪ್‌ನ ಎರಡನೇ ಪಂದ್ಯ ವೆಸ್ಟ್ ಇಂಡೀಸ್ ಮತ್ತು ಪಪುವಾ ನ್ಯೂಗಿನಿಯಾ ನಡುವೆ ನಡೆಯಿತು. ಈ ಪಂದ್ಯದಲ್ಲಿ ಹೋರಾಡಿ ಗೆದ್ದ ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ಶುಭಾರಂಭ ಮಾಡಿದೆ.

ಈ ಪಂದ್ಯದ ನಂತರ ಪ್ರಸಾರಕರು ಮಾಡಿದ ಎಡವಟ್ಟು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪಪುವಾ ನ್ಯೂ ಗಿನಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಈ ಪಂದ್ಯದ ಸಂದರ್ಭದಲ್ಲಿ ತೋರಿಸಲಾದ ಸ್ಕೋರ್‌ ಕಾರ್ಡ್ನ್‌ನಲ್ಲಿ ಆಕಸ್ಮಿಕವಾಗಿ ಭಾರತ ತಂಡದ ಉಪನಾಯಕ ಹಾರ್ದಿಕ್‌ ಪಾಂಡ್ಯ ಅವರ ಫೋಟೋವನ್ನು ಪ್ರಸಾರಕರು ಬಳಸಿದ್ದಾರೆ.

Hardik Pandya photo on West Indies score card

ವಿಶೇಷವೆನೆಂದೆರೆ ವಿಂಡೀಸ್‌ ಬ್ಯಾಟರ್‌ಗಳ ಪಟ್ಟಿಯಲ್ಲೂ ಹಾಗು ಪಪುವಾ ನ್ಯೂ ಗಿನಿಯಾ ಬೌಲರ್‌ಗಳ ಪಟ್ಟಿಯಲ್ಲೂ ಹಾರ್ದಿಕ್‌ ಪಾಂಡ್ಯ ಫೋಟೋ ಕಾಣಿಸಿಕೊಂಡಿದೆ. ವೆಸ್ಟ್ ಇಂಡೀಸ್ ಗೆದ್ದ ನಂತರ, ಪ್ರಸಾರಕರು ಆಟಗಾರರ ಉನ್ನತ ಪ್ರದರ್ಶನದ ಆಧಾರದ ಮೇಲೆ ಸ್ಕೋರ್ ಕಾರ್್ ಅನ್ನು ತೋರಿಸಿದರು.

ಅಲ್ಲಿ, ರೋಸ್ಟನ್ ಚೇಸ್, ಬ್ರೆಂಡನ್ ಕಿಂಗ್ ಮತ್ತು ಆಂಡ್ರೆ ರಸೆಲ್ ಮತ್ತು ಇತರ ಆಟಗಾರರ ಪಂದ್ಯದ ಅಂಕಿಅಂಶಗಳನ್ನು ತೋರಿಸಲಾಗಿತ್ತು. ಆದರೆ, ಈ ಎಲ್ಲಾ ಅಂಕಪಟ್ಟಿಗಳ ಗ್ರಾಫಿಕ್ಸ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಫೋಟೋ ಕಾಣಿಸಿಕೊಂಡಿತ್ತು. ಹೀಗೆ ಐದು ಕಡೆ ಹಾರ್ದಿಕ್‌ ಪಾಂಡ್ಯ ಫೋಟೋ ಬಳಸಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, ಹಾರ್ದಿಕ್ ಪಾಂಡ್ಯ ವಿಶ್ವದ ಅತ್ಯಂತ ಅಪಾಯಕಾರಿ ಆಲ್‌ರೌಂಡರ್ ಎಂದು ಬರೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಪಪುವಾ ನ್ಯೂಗಿನಿಯಾ ಪಂದ್ಯದಲ್ಲಿ ನಾನು ಹಾರ್ದಿಕ್ ಪಾಂಡ್ಯ ಅವರ ಫೋಟೋವನ್ನು ನೋಡುತ್ತಿದ್ದೇನೆ ಎಂದು ಮತ್ತೋಬ್ಬ ಬರೆದುಕೊಂಡಿದ್ದಾರೆ.

ಭಾರತ ತಂಡ ಜೂನ್ 5 ರಿಂದ ಐರ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಟೀಮ್‌ ಇಂಡಿಯಾದ ನಾಯಕತ್ವ ರೋಹಿತ್ ಶರ್ಮಾ ಕೈಯಲ್ಲಿದ್ದರೆ, ಉಪನಾಯಕ ಹಾರ್ದಿಕ್ ಪಾಂಡ್ಯ ಆಗಿದ್ದಾರೆ. ಪಾಂಡ್ಯ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಲ್ ರೌಂಡ್ ಪ್ರದರ್ಶನ ನೀಡಿ 40 ರನ್ ಗಳಿಸಿ ಒಂದು ವಿಕೆಟ್ ಪಡೆದಿದ್ದರು.

Story first published: Monday, June 3, 2024, 18:11 [IST]
Other articles published on Jun 3, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+