ಅಪ್ಪನಿಗೆ ಪ್ರೀತಿಯ ಉಡುಗೊರೆ ಕೊಟ್ಟ ಹಾರ್ದಿಕ್ ಪಾಂಡ್ಯ
ಕೊಲಂಬೋ, ಆಗಸ್ಟ್ 17: ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ತಂದೆಗೆ ಅಚ್ಚರಿಯ ಉಡುಗೊರೆಯೊಂದನ್ನು ನೀಡಿದ್ದಾರೆ.
ಗಿಫ್ಟ್ ಪಡೆದ ತಂದೆಯ ಮುಖದಲ್ಲಿ ಅರಳಿದ ನಗು ಹಾಗೂ ಖುಷಿಯನ್ನು ನೋಡಿ ತಾವೂ ಸಂತಸಪಟ್ಟಿರೋದಾಗಿ ಟ್ವೀಟ್ ಮಾಡಿದ್ದಾರೆ.
ನಮ್ಮ ಏಳಿಗೆಗಾಗಿ ತ್ಯಾಗ ಮಾಡಿರುವ ಇವರಿಗೆ ಏನು ನೀಡಿದರೂ ಸಾಲದು ಎಂದು ಪಾಂಡ್ಯ ಟ್ವೀಟ್ ನಲ್ಲಿ ಹೇಳಿದ್ದಾರೆ.

ಏಕದಿನ ಪಂದ್ಯಗಳ ಸರಣಿ ಹಾಗೂ ಟಿ20ಐ ಪಂದ್ಯಕ್ಕೆ ಆಯ್ಕೆ ಮಾಡಲಾಗಿರುವ ತಂಡದಲ್ಲಿರುವ ಹಾರ್ದಿಕ್ ಅವರ ಸೋದರ ಕೃನಾಲ್ ಕೂಡಾ ಈಗ ಶ್ರೀಲಂಕಾದಲ್ಲಿದ್ದು, ಇಬ್ಬರೂ ತಮ್ಮ ತಂದೆಗೆ ಗಿಫ್ಟ್ ನೀಡಿ ಅವರಿಗಾದ ಆನಂದವನ್ನು ಕಣ್ತುಂಬಿಕೊಂಡಿದ್ದಾರೆ.
ಶ್ರೀಲಂಕಾ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ ಗೆ ಹಾರ್ದಿಪ್ ಪಾಂಡ್ಯ ಅವರು ಪಾದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲೇ ಅರ್ಧಶತಕ ಕೂಡ ಸಿಡಿಸಿದರು.
ಮೂರನೇ ಟೆಸ್ಟ್ ನಲ್ಲಿ ಶತಕ ಬಾರಿಸುವ ಮೂಲಕ ಮಾಜಿ ನಾಯಕ ಕಪಿಲ್ ದೇವ್ ಸೇರಿದಂತೆ ಎಲ್ಲರಿಂದ ಪ್ರಶಂಸೆಗೆ ಪಾತ್ರರಾದರು.
ಆಗಸ್ಟ್ 20ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಹಾಗೂ ಏಕೈಕ ಟಿ20 ಪಂದ್ಯಗಳಲ್ಲಿ ಹಾರ್ದಿಕ್ ಅವರು ಮಹತ್ವದ ಪಾತ್ರವಹಿಸುವ ನಿರೀಕ್ಷೆಯಿದೆ.
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications