Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Hardik Pandya captaincy: ಫಿಟ್ನೆಸ್ ಬಗ್ಗೆ ಪೋಸ್ಟ್ ಮಾಡುವ ಮೂಲಕ ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯೆ!

ಜುಲೈ 17 ಬುಧವಾರ, ಟಿ20 ಕ್ರಿಕೆಟ್‌ ನಿಂದ ರೋಹಿತ್ ಶರ್ಮಾ ನಿವೃತ್ತಿಯ ನಂತರ, ಹಾರ್ದಿಕ್ ಪಾಂಡ್ಯ ನಾಯಕತ್ವದ ಮೊದಲ ಸ್ಪರ್ಧಿಯಾಗಿದ್ದರು. ಆದರೆ ವರದಿಗಳ ಪ್ರಕಾರ, ಫಿಟ್ನೆಸ್ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಹಾರ್ದಿಕ್ ಅವರಿಗೆ ನಾಯಕತ್ವ ನೀಡದಿರಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.

ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ 2026ರ ಟಿ20 ವಿಶ್ವಕಪ್ ವರೆಗೆ ರೋಹಿತ್ ಶರ್ಮಾ ಗದ್ದುಗೆಯಲ್ಲಿ ಕೂರಲಿದ್ದಾರೆ. ಇದಕ್ಕೆ ಗೌತಮ್ ಗಂಭೀರ್ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.

Hardik Pandya response by posting about his fitness

ಹಾರ್ದಿಕ್ ನಾಯಕತ್ವದಲ್ಲಿ ಹೆಚ್ಚು ಅನುಭವ ಹೊಂದಿದ್ದರೂ ಪಾಂಡ್ಯ ಅವರ ಫಿಟ್ನೆಸ್ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಇದೆ. ಇದರ ಬೆನ್ನಲೇ ಹಾರ್ದಿಕ್ ತಮ್ಮ ಫಿಟ್ನೆಸ್ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಹಾರ್ದಿಕ್ ಇನ್‌ಸ್ಟಾಗ್ರಾಮ್‌ ಪೋಸ್ಟ್

ಫಿಟ್ನೆಸ್ ಕಾರಣದಿಂದ ನಾಯಕತ್ವ ಸಿಗದಿರುವ ಸುದ್ದಿಯ ನಡುವೆ ಹಾರ್ದಿಕ್ ಪಾಂಡ್ಯ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ತಮ್ಮ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮೊದಲ ಫೋಟೋ 2023ರ ಏಕದಿನ ವಿಶ್ವಕಪ್ ನಂತರ ಹಾರ್ದಿಕ್ ಪಾಂಡ್ಯ ಗಾಯಗೊಂಡಾಗ ಹಾಗು ಎರಡನೇ ಫೋಟೋ ಪ್ರಸ್ತುತ ಸಮಯದ್ದು. ಈ ಪೋಸ್ಟ್‌ನಲ್ಲಿ, ಹಾರ್ದಿಕ್ ತಾವು ಫಿಟ್‌ನೆಸ್‌ಗೆ ಎಷ್ಟು ಒತ್ತು ನೀಡುತ್ತೇನೆ ಎಂಬುದನ್ನು ಹೇಳಲು ಬಯಸಿದ್ದಾರೆ.

'2023 ರ ವಿಶ್ವಕಪ್‌ನಲ್ಲಿ ಗಾಯಗೊಂಡ ನಂತರ ಈ ಪ್ರಯಾಣವು ಕಷ್ಟಕರವಾಗಿತ್ತು. ಆದರೆ ಟಿ20 ವಿಶ್ವಕಪ್‌ನಲ್ಲಿನ ಗೆಲುವಿನೊಂದಿಗೆ ಪ್ರಯತ್ನವು ಸಾರ್ಥಕವಾಗಿದೆ. ಎಲ್ಲಿಯವರೆಗೆ ನೀವು ಪ್ರಯತ್ನದಲ್ಲಿ ತೊಡಗುತ್ತೀರಿ, ನೀವು ಫಲಿತಾಂಶಗಳನ್ನು ಪಡೆಯುತ್ತೀರಿ.

ಕಠಿಣ ಪರಿಶ್ರಮ ವ್ಯರ್ಥವಾಗುವುದಿಲ್ಲ. ನಾವೆಲ್ಲರೂ ನಮ್ಮ ಕೈಲಾದಷ್ಟು ಪ್ರಯತ್ನಿಸೋಣ ಮತ್ತು ನಮ್ಮ ಫಿಟ್‌ನೆಸ್‌ನಲ್ಲಿ ಕೆಲಸ ಮಾಡೋಣ' ಎಂದು ಪೋಸ್ಟ್‌ನಲ್ಲಿ ಹಾರ್ದಿಕ್‌ ಬರೆದಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಉಪನಾಯಕ

ಹಾರ್ದಿಕ್ ಪಾಂಡ್ಯ 2024ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಉಪನಾಯಕರಾಗಿದ್ದರು. ಅವರು 16 ಪಂದ್ಯಗಳಲ್ಲಿ ಟೀಮ್ ಇಂಡಿಯಾ ನಾಯಕತ್ವವನ್ನು ವಹಿಸಿದ್ದಾರೆ. ಅದರಲ್ಲಿ ಭಾರತ 10 ಪಂದ್ಯಗಳನ್ನು ಗೆದ್ದಿದೆ.

ಆದರೆ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿರುವ ಪ್ರಕಾರ, 'ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಉಪನಾಯಕರಾಗಿದ್ದರು. ಈಗ ಸಂಪೂರ್ಣ ಫಿಟ್ ಆಗಿದ್ದು, 3 ಪಂದ್ಯಗಳ ಟಿ20 ಸರಣಿಗೂ ಲಭ್ಯವಾಗಿದ್ದಾರೆ.

ಅವರಿಗೆ ಟಿ20 ತಂಡದ ನಾಯಕತ್ವ ನೀಡಲಾಗುತ್ತದೆ ಎಂದು ನಂಬಲಾಗಿತ್ತು. ಆದರೆ ಸೂರ್ಯಕುಮಾರ್ ಯಾದವ್ ಕೂಡ ನಾಯಕನಾಗಲು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಗೆ ಮಾತ್ರವಲ್ಲ, 2026ರ ಟಿ20 ವಿಶ್ವಕಪ್‌ಗೂ ಸಹ ಎಂದಿದ್ದಾರೆ.

ಜುಲೈ 18ರಂದು ಬಿಸಿಸಿಐ ಆಯ್ಕೆ ಸಮಿತಿ ಸಭೆ ನಡೆಯಲಿದ್ದು, ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಟೀಮ್‌ ಇಂಡಿಯಾ ಘೋಷಣೆಯಾಗಬಹುದು. ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿ ಜುಲೈ 26 ರಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಟೀಮ್‌ ಇಂಡಿಯಾದ ಹೊಸ ನಾಯಕನನ್ನು ಕಾಣಬಹುದಾಗಿದೆ.

Story first published: Wednesday, July 17, 2024, 23:49 [IST]
Other articles published on Jul 17, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+