Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹೃದಯವಂತ: ಮೈದಾನದ ಸಿಬ್ಬಂದಿಗಳಿಗೆ ಹಾರ್ದಿಕ್‌ ಚೆಕ್‌ ನೀಡಲು ಇದೇ ಕಾರಣ

ಐಪಿಎಲ್ 2026 ಕ್ಷಣಗಣನೆ ಆರಂಭವಾಗಿದೆ. ಈ ವೇಳೆ ಎಲ್ಲ ತಂಡಗಳು ಭರದ ಸಿದ್ಧತೆಯನ್ನು ನಡೆಸಿವೆ. ಮುಂಬೈ ಇಂಡಿಯನ್ಸ್‌ ಸಹ ಈ ಬಾರಿ ಆರನೇ ಟ್ರೋಫಿ ಎತ್ತುವ ಕನಸನ್ನು ಕಾಣುತ್ತಿದೆ. ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮೈದಾನಕ್ಕೆ ಇಳಿಯುವ ಮುನ್ನವೇ ಈಗ ಸುದ್ದಿಯಲ್ಲಿದ್ದಾರೆ. ಹಾರ್ದಿಕ್ ಈ ಬಾರಿ ತಮ್ಮ ಹೃದಯ ಶ್ರೀಮಂತಿಕೆಯಿಂದ ಸುದ್ದಿಯಲ್ಲಿದ್ದಾರೆ.

ಹಾರ್ದಿಕ್ ಪಾಂಡ್ಯ ಮೈದಾನದಲ್ಲಿ ತಮ್ಮ ಭರ್ಜರಿ ಆಟದ ಮೂಲಕ ಹೆಸರುವಾಸಿ. ಬಿಗ್ ಸಿಕ್ಸರ್‌ಗಳನ್ನು ಬಾರಿಸುವುದು ಬಿಗುವಿನ ದಾಳಿ ನಡೆಸುವುದು ಹಾರ್ದಿಕ್ ಅವರ ಸ್ಟ್ರೆಂತ್. ಆದರೆ ಐಪಿಎಲ್‌ ಆರಂಭಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಮುಂಬೈ ವಾಂಖೆಡೆ ಮೈದಾನದ ಸಿಬ್ಬಂದಿಗಳೊಂದಿಗೆ ಚೆಕ್‌ ಹಿಡಿದುಕೊಂಡು ಫೋಟೋಗೆ ಪೋಸ್ ನೀಡಿದ್ದು ಸಖತ್ ಸದ್ದು ಮಾಡುತ್ತಿದೆ. ಹಾರ್ದಿಕ್ ಮೈದಾನದ ಸಿಬ್ಬಂದಿಗೆ ಹಣ ನೀಡಿದ್ದು ಏಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.

Hardik Pandya

ಮೈದಾನದ ಸಿಬ್ಬಂದಿಗೆ ಹಣ ನೀಡಿದ್ದು ಏಕೆ?

ವರದಿಗಳ ಪ್ರಕಾರ, ಹಾರ್ದಿಕ್ ಕ್ರೀಡಾಂಗಣದ ಸಿಬ್ಬಂದಿಗೆ ತಲಾ ₹10 ಲಕ್ಷ ಚೆಕ್‌ ನೀಡಿದ್ದಾರೆ. ಇವರು ಟಿ20 ವಿಶ್ವಕಪ್‌ಗಾಗಿ ಮುಂಬೈನ ವಾಂಖೆಡೆ ಮೈದಾನದಲ್ಲಿ ಸಿದ್ಧತೆ ನಡೆಸಿದ್ದರು. ಆಗ ಮೈದಾನದ ಸಿಬ್ಬಂದಿ ತಡರಾತ್ರಿ ಇರಬೇಕಾಗಿತ್ತು. ಆಗ ಹಾರ್ದಿಕ್ ತಾವು ಮುಂಬೈಗೆ ಮರಳಿ ಬಂದಾಗ ಬಹುಮಾನ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಹಾರ್ದಿಕ್ ಮೈದಾನದ ಸಿಬ್ಬಂದಿಯೊಂದಿಗೆ ನಿಂತು ಫೋಟೋ ತೆಗಿಸಿಕೊಂಡಿದ್ದು ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾರ್ದಿಕ್ ಮೈದಾನ ಸಿಬ್ಬಂದಿಗೆ ತಲಾ ₹10 ಲಕ್ಷ ಚೆಕ್‌ಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪ್ರದರ್ಶನ

ತವರಿನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡಿ ಅಬ್ಬರಿಸಿದೆ. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಕೊಡುಗೆ ನೀಡಿದ್ದಾರೆ. ಇವರು ವಿಶ್ವಕಪ್‌ನಲ್ಲಿ ಆಡಿದ 9 ಇನಿಂಗ್ಸ್‌ಗಳಲ್ಲಿ 217 ರನ್‌ ಕಲೆ ಹಾಕಿದ್ದು, 9 ವಿಕೆಟ್‌ ಪಡೆದಿದ್ದಾರೆ. ಈ ವರೆಗೆ ಇವರು ಭಾರತದ ಪರ 11 ಟೆಸ್ಟ್‌, 94 ಏಕದಿನ, 138 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ.

Story first published: Saturday, March 28, 2026, 13:24 [IST]
Other articles published on Mar 28, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+