Hardik Pandya: ಪಾಕ್ ವಿರುದ್ಧ ಹಾರ್ದಿಕ್ ಕಟ್ಟಿಕೊಂಡಿದ್ದ ವಾಚ್ ಬೆಲೆ ತಿಳಿದ್ರೆ ತಲೆ ತಿರಗಬೇಕು
ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯ ದುಬೈನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಈ ವೇಳೆ ಟೀಮ್ ಇಂಡಿಯಾದ ಮೊದಲ ವಿಕೆಟ್ ಹಾರ್ದಿಕ್ ಪಾಂಡ್ಯ ಪಡೆದು ಬೀಗಿದರು. ಇವರ ಸಖತ್ ಲೈನ್ ಹಾಗೂ ಲೆಂಥ್ ಡಿಲೇವರಿಗಳು ಎದುರಾಳಿ ಬ್ಯಾಟರ್‌ಗಳನ್ನು ಕಾಡಿದವು. ಆದರೆ ಹಾರ್ದಿಕ್ ಪಾಂಡ್ಯ ಅವರ ಕೈಯಲ್ಲಿ ಕಟ್ಟಿದ ವಾಚ್ ಅಭಿಮಾನಿಗಳ ದೃಷ್ಟಿ ಕದ್ದಿತು.
ಭಾರತ ವಿರುದ್ಧ ಮೊದಲು ಬ್ಯಾಟ್ ಮಾಡಿದ ಪಾಕ್ 49.4 ಓವರ್‌ಗಳಲ್ಲಿ 241 ರನ್‌ಗಳಿಗೆ ಆಲೌಟ್ ಆಯಿತು. ಪಾಕ್ ಪರ ಸೌದ್ ಶಕೀಲ್ 62, ಮೊಹಮ್ಮದ್ ರಿಜ್ವಾನ್ 46 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಈ ಪಂದ್ಯದಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 8 ಓವರ್ ಬೌಲ್ ಮಾಡಿ 31 ರನ್ ನೀಡಿ 2 ವಿಕೆಟ್ ಕಬಳಿಸಿದರು. ಈ ಮೂಲಕ ತಂಡಕ್ಕೆ ಆಧಾರವಾದರು. ಈ ವೇಳೆ ಇವರ ಕೈಯಲ್ಲಿ ಕೇಸರಿ ಕಲರ್ ವಾಚ್ ಎಲ್ಲರ ಆಕರ್ಷಣೆ ಆಯಿತು.

ಹಾರ್ದಿಕ್ ಪಾಂಡ್ಯ ವಾಚ್ ಬೆಲೆ ಎಷ್ಟು?
ಹಾರ್ದಿಕ್ ಪಾಂಡ್ಯ ಮೈದಾನಕ್ಕೆ ಪ್ರವೇಶಿಸುವಾಗ ಧರಿಸಿದ್ದ ಗಡಿಯಾರದತ್ತ ಅಭಿಮಾನಿಗಳ ಚಿತ್ತ ನೆಟ್ಟಿತ್ತು. ಈ ಗಡಿಯಾರದ ಬೆಲೆ 15 ಕೋಟಿ ರೂಪಾಯಿ ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆ ಮಾಡುತ್ತಿದೆ. ಹಾರ್ದಿಕ್ ಪಾಂಡ್ಯ ತಮ್ಮ ಐಶಾರಾಮಿ ಜೀವನ ಶೈಲಿಯಿಂದ ಹೆಸರುವಾಸಿ. ಇವರು ಮುಂಬೈ ಹಾಗೂ ಗುಜರಾತ್‌ನಲ್ಲಿ ದೊಡ್ಡ ಮನೆ. ಭಾರೀ ದುಬಾರಿ ಬೆಲೆಯ ಕಾರ್‌ಗಳು ಇವರ ಐಶಾರಾಮಿ ಜೀವನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಇನ್ನು ಹಾರ್ದಿಕ್ ಪಾಂಡ್ಯ ಅವರಿಗೆ ವಾಚ್‌ಗಳ ಮೇಲೂ ಹೆಚ್ಚಿನ ಪ್ರೀತಿ ಇದೆ. ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಧರಿಸಿದ್ದು ನಿಜಕ್ಕೂ 15 ಕೋಟಿಯ ಗಡಿಯಾರವಾ ಎಂಬ ಪ್ರಶ್ನೆ ಮೂಡುತ್ತದೆ.

ಹಾರ್ದಿಕ್ ಕಟ್ಟಿರುವ ವಾಚ್ ಯಾವುದು?
ಪಾಕ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ರಿಚರ್ಡ್ ಮಿಲ್ಲೆ ಲಿಮಿಟೆಡ್ ಎಡಿಷನ್ ವಾಚ್ ಕಟ್ಟಿದ್ದರು. ಇವರು RM27-02 CA FQ ಟೂರ್‌ಬಿಲ್ಲನ್ ಧರಿಸಿ ಎಲ್ಲರ ಚಿತ್ತವನ್ನು ತಮ್ಮತ್ತ ಸೆಳೆಯುವಂತೆ ಮಾಡಿದರು. ಅಂದಹಾಗೆ ಈ ಗಡಿಯಾರದ ಬೆಲೆಯನ್ನು ಕಂಪನಿಯ ವೆಬ್ ಸೈಟ್‌ನಲ್ಲಿ ನಮೂದಿಸಿಲ್ಲ. ಆದರೆ ವೆಬ್ ಸೈಟ್‌ನಲ್ಲಿ ಶಿಪ್ಪಿಂಗ್ ಶುಲ್ಕದ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ ಅದರ ಬೆಲೆ ವೆಬ್ ಸೈಟ್‌ನಲ್ಲಿ ಕಾಣುವುದಿಲ್ಲ. ಜೆಮ್ ನೇಷನ್ ಪ್ರಕಾರ, ಈ ಐಶಾರಾಮಿ ವಾಚ್ ಬೆಲೆ 6.93 ಕೋಟಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications