ಟೆಸ್ಟ್ ಕ್ರಿಕೆಟ್‌ನಲ್ಲಿ ಹಾರ್ದಿಕ್ ಪಾಂಡ್ಯ ಗೈರು ಅನುಭವಕ್ಕೆ ಬರಲಿದೆ: ಸೆಹ್ವಾಗ್

ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿ ಅಂತ್ಯವಾಗಿದ್ದು ಸುದೀರ್ಘ ಮಾದರಿಯ ಕ್ರಿಕೆಟ್‌ನತ್ತ ಆಟಗಾರರು ಹಾಗೂ ಅಭಿಮಾನಿಗಳು ಚಿತ್ತ ನೆಟ್ಟಿದ್ದಾರೆ. ಸೀಮಿತ ಓವರ್‌ನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಪರವಾಗಿ ಅದ್ಭುತ ಪ್ರದರ್ಶನ ನಿಡಿದ ಆಟಗಾರ ಎಂದರೆ ಹಾರ್ದಿಕ್ ಪಾಂಡ್ಯ. ಏಕದಿನ ಹಾಗೂ ಟಿ20 ಕ್ರಿಎಕಟ್‌ನಲ್ಲಿ ಮಿಂಚಿದ ಪಾಂಡ್ಯ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿಲ್ಲ.
ಆದರೆ ಹಾರ್ದಿಕ್ ಪಾಂಡ್ಯ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಲ್ಳಬೇಕು ಎಂಬ ಅಭಿಪ್ರಾಯಗಳು ಕೇಳಿ ಬಂದಿದೆ. ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಪಂದ್ಯದ ಬಳಿಕ ತವರಿಗೆ ಮರಳುವ ಕಾರಣ ಆ ಪಾಂಡ್ಯ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಅಭಿಪ್ರಾಯಗಳನ್ನು ಅನೇಕರು ನೀಡಿದ್ದಾರೆ. ಈ ಮಧ್ಯೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹಾರ್ದಿಕ್ ಪಾಂಡ್ಯ ಟೆಸ್ಟ್ ಸರಣಿಗೆ ಗೈರಾಗುತ್ತಿರುವುದು ತಂಡದ ಅನುಭವಕ್ಕೆ ಬರಲಿದೆ ಎಂದಿದ್ದಾರೆ.
ಹಾರ್ದಿಕ್ ಪಾಂಡ್ಯ ದೀರ್ಘ ಕಾಲದ ಬೆನ್ನುನೋವಿಗೆ ಒಳಗಾದ ಕಾರಣ ಬೌಲಿಂಗ್ ಮಾಡಲು ಅಸಮರ್ಥರಾಗಿದ್ದಾರೆ. ಹಾಗಾಗಿ ಆರನೇ ಬೌಲರ್‌ನತ್ತ ಟೀಮ್ ಇಂಡಿಯಾ ನಾಯಕ ದೃಷ್ಟಿಹರಿಸಿದ್ದಾರೆ. ಈ ಕಾರಣದಿಂದಾಗಿ ಹಾರ್ದಿಕ್ ಪಾಂಡ್ಯ ಟೆಸ್ಟ್ ತಂಡದಿಂದ ಹೊರಗುಳಿದಿದ್ದಾರೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
"ಆತ ಬೌಲಿಂಗ್ ಮಾಡಲು ಸಮರ್ಥನಾದರೆ ಆತ ಟೀಮ್ ಇಂಡಿಯಾದ ಭಾಗವಾಗಲಿದ್ದಾರೆ. ಇದೇ ಕಾರಣದಿಂದಾಗಿ ಹಾರ್ದಿಕ್ ಪಾಂಡ್ಯ ಆಯ್ಕೆಗಾರರಲ್ಲಿ ಟೆಸ್ಟ್ ಸರಣಿಗೆ ಪರಿಗಣಿಸದಿರುವಂತೆ ಹೇಳಿರುವ ಸಾಧ್ಯತೆಯಿದೆ. ಹಾಗಾಗಿಯೇ ಅವರು ಕೇವಲ ಟಿ20 ಹಾಗೂ ಏಕದಿನ ಸರಣಿಯಲ್ಲಿ ಪಾಲ್ಗೊಂಡಿದ್ದು ಬಳಿಕ ಕುಟುಂಬವನ್ನು ಸೇರಿಕೊಳ್ಳಲಿದ್ದಾರೆ" ಎಂದು ಸೆಹ್ವಾಗ್ ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications