'ಫಿಟ್'ಗೆ ಮರಳಿದ ಆಲ್ ರೌಂಡರ್ ಹಾರ್ದಿಕ್, ಅಶ್ವಿನ್ ತಂಡಕ್ಕೆ ಸೇರ್ಪಡೆ?

ನವದೆಹಲಿ, ಡಿಸೆಂಬರ್ 21: ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಏಷ್ಯಕಪ್ ಕ್ರಿಕೆಟ್ ವೇಳೆ ಗಾಯಕ್ಕೀಡಾಗಿ ತಂಡದಿಂದ ಹೊರ ಬಿದ್ದಿದ್ದ ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೆ ಫಿಟ್ ಅನ್ನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯಕ್ಕಾಗಿ ಅವರು ತಂಡದ ಸೇರಿಕೊಳ್ಳುವ ಸಾಧ್ಯತೆಯೂ ಇದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ವೇಳೆಯೇ ಹಾರ್ದಿಕ್ ಗಾಯಕ್ಕೆ ತುತ್ತಾಗಿದ್ದರು. ಏಷ್ಯಕಪ್ ವೇಳೆ ಗಾಯ ತೀವ್ರಗೊಂಡಿದ್ದರಿಂದ ಪಾಂಡ್ಯ ಟೂರ್ನಿಯ ಅಂತಿಮ ಕ್ಷಣದಲ್ಲಿ ಟೀಮ್ ಇಂಡಿಯಾದಿಂದ ಹೊರ ಬಿದ್ದಿದ್ದರು. ಈಗ ಹಾರ್ದಿಕ್ ಚೇತರಿಸಿಕೊಂಡಿದ್ದು, ಹನುಮ ವಿಹಾರಿ ಜಾಗವನ್ನು ಆವರಿಸಿಕೊಳ್ಳುವ ಸಾಧ್ಯತೆಯಿದೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ 31ರ ಸರಾಸರಿ ಹೊಂದಿರುವ 25ರ ಹರೆಯದ ಪಾಂಡ್ಯ ತಂಡದಿಂದ ಹೊರ ಬಿದ್ದಿದ್ದು ತಂಡ ನಿರ್ವಹಣ ಸಮಿತಿಯ ಲೆಕ್ಕಾಚಾರವನ್ನೂ ತಪ್ಪಿಸಿತ್ತು. ಹಾರ್ದಿಕ್ ಚೇತರಿಕೆ ಈಗ ಭಾರತಕ್ಕೆ ಬಲ ತುಂಬಿದೆ. ಇನ್ನೊಂದೆಡೆ ಸ್ಪಿನ್ನರ್ ಅಶ್ವಿನ್ ಕೂಡ ಚೇತರಿಸಿಕೊಳ್ಳುತ್ತಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ನಲ್ಲಿ ಭಾರತ 146 ರನ್ ನಿಂದ ಮುಖ ಭಂಗ ಅನುಭವಿಸಿತ್ತು. ಭಾರತಕ್ಕೆ ಈ ಹೊತ್ತು ಆಲ್ ರೌಂಡರ್‌ಗಳ ಅಗತ್ಯ ಹೆಚ್ಚಿದೆ. ಹೀಗಾಗಿ ಮೂರನೇ ಟೆಸ್ಟ್ ಪಂದ್ಯದ ವೇಳೆ ಪಾಂಡ್ಯ 6ನೇ ಕ್ರಮಾಂಕದಲ್ಲಿ, ಅಶ್ವಿನ್ 7ನೇ ಕ್ರಮಾಂಕದಲ್ಲಿ ತಂಡದಲ್ಲಿ ಕಾಣಿಸಿಕೊಂಡರೆ ಅದರಲ್ಲಿ ಅಚ್ಚರಿಯಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications