ಪುತ್ರನ ಚೊಚ್ಚಲ ವಿಮಾನಯಾನದ ಚಿತ್ರ ಹಂಚಿಕೊಂಡ ಹಾರ್ದಿಕ್ ಪಾಂಡ್ಯ

ಮುಂಬೈ: ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಪುತ್ರ ಅಗಸ್ತ್ಯ ಪಾಂಡ್ಯ ಚೊಚ್ಚಲ ಬಾರಿಗೆ ವಿಮಾನ ಯಾನ ಮಾಡಿದ್ದಾರೆ. ಸೀನಿಯರ್ ಪಾಂಡ್ಯ ಜೂನಿಯರ್ ಪಾಂಡ್ಯನ ಮೊದಲ ವಿಮಾನಯಾನದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಜನವರಿ 28ರಂದು ಟ್ವಿಟರ್‌ನಲ್ಲಿ ಫೋಟೋ ಹಂಚಿಕೊಂಡಿರುವ ಪಾಂಡ್ಯ, 'ನನ್ನ ಹುಡುಗನ ಮೊದಲ ವಿಮಾನಯಾನ' ಎಂದು ಬರೆದುಕೊಂಡಿದ್ದಾರೆ. ಭಾರತ vs ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯ ನಡೆಯುವ ಚೆನ್ನೈಗೆ ಪಾಂಡ್ಯ ಮತ್ತು ಅವರ ಕುಟುಂಬ ಪ್ರಯಾಣಿಸುತ್ತಿದೆ.
ಫೆಬ್ರವರಿ 5ರಿಂದ ಆರಂಭಗೊಳ್ಳಲಿರುವ ಮೊದಲನೇ ಟೆಸ್ಟ್‌ಗೂ ಮುನ್ನ ಭಾರತದ ಆಟಗಾರರು 6 ದಿನಗಳ ಕ್ವಾರಂಟೈನ್ ಪಾಲಿಸಲಿದ್ದಾರೆ. ಕ್ರಿಕೆಟಿಗರ ಜೊತೆ ಅವರ ಕುಟುಂಬಸ್ಥರೂ ಪ್ರಯಾಣಿಸಲು ಅವಕಾಶ ನೀಡಲಾಗಿರುವುದರಿಂದ ಪಾಂಡ್ಯ ಕುಟುಂಬವೂ ಜೊತೆಯಲ್ಲಿ ಚೆನ್ನೈಗೆ ಪ್ರಯಾಣಿಸಿದೆ.
ಕಳೆದ ಆಗಸ್ಟ್‌ನಲ್ಲಿ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟ್ಯಾಂಕೋವಿಕ್ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದರು. ಕ್ರಿಕೆಟ್ ಕಮಿಟ್‌ಮೆಂಟ್‌ನಿಂದಾಗಿ ಹಾರ್ದಿಕ್‌ಗೆ ಪುತ್ರನ ಜೊತೆಗೆ ಹೆಚ್ಚು ಸಮಯ ಕಳೆಯಲಾಗಿರಲಿಲ್ಲ. ಆದರೆ ಆಸ್ಟ್ರೇಲಿಯಾ-ಭಾರತ ಟೆಸ್ಟ್ ಸರಣಿಯ ವೇಳೆ ಪಾಂಡ್ಯ ಭಾರತದಲ್ಲಿದ್ದು ಕುಟುಂಬದ ಜೊತೆ ಸಮಯ ಕಳೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications