Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Viral Video: ವೈರಲ್‌ ಆಗುತ್ತಿದೆ ಹಾರ್ದಿಕ್ ಪಾಂಡ್ಯ ಪೋಸ್ಟ್ ಹಾಗೂ ವಿಡಿಯೋ

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಸದ್ಯ ಐಪಿಎಲ್‌ ಆಡುತ್ತಿದ್ದಾರೆ. ಇವರು ಮುಂಬೈ ಇಂಡಿಯನ್ಸ್‌ ತಂಡವನ್ನು ಪ್ರತಿ ನಿಧಿಸುತ್ತಿದ್ದಾರೆ. ಇವರ ಮುಂದಾಳತ್ವದ ತಂಡ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಪ್ಲೇ ಆಫ್‌ನತ್ತ ಚಿತ್ತ ನೆಟ್ಟಿದೆ. ಈ ಮಧ್ಯೆದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆ ವಾತಾವರಣ ನಿರ್ಮಾಣವಾಗಿದ್ದರಿಂದ ಐಪಿಎಲ್‌ ಟೂರ್ನಿಗಳನ್ನು ರದ್ದು ಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಟಗಾರರು ತಮ್ಮ ತಮ್ಮ ಮನೆಯ ಕಡೆ ಮುಖ ಮಾಡಿದ್ದಾರೆ.

ಐಪಿಎಲ್‌ ರದ್ದಾದ ಬೆನ್ನಲೆ ದೇಶೀಯ ಹಾಗೂ ವಿದೇಶಿ ಆಟಗಾರರು ತವರಿನತ್ತ ಮುಖ ಮಾಡಿದ್ದಾರೆ. ಈ ವೇಳೆ ಹಾರ್ದಿಕ್ ಪಾಂಡ್ಯ ಅವರ ಒಂದು ಪೋಸ್ಟ್‌ ಹಾಗೂ ವಿಡಿಯೋ ಸಖತ್ ವೈರಲ್‌ ಆಗುತ್ತಿದೆ. ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಭಾರತೀಯ ಸೇನೆಯ ಗೌರವಾರ್ಥ ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ಪೋಸ್ಟ್ ಮಾಡಿದ್ದಾರೆ.

Hardik Pandya Salutes Indian Army Viral Video Shows Him Greeting Soldiers Amid IPL Suspension

ಸ್ಟಾರ್ ಆಲ್‌ರೌಂಡರ್‌ ಹಾರ್ದಿಕ್ 'ಭಾರತೀಯ ಸೇನೆಯ ಶೌರ್ಯ ಮತ್ತು ತ್ಯಾಗದ ಬಗ್ಗೆ ನಮಗೆ ಹೆಮ್ಮೆ ಇದೆ. ದೇಶದ ಎಲ್ಲಾ ಜನರನ್ನು ಸುರಕ್ಷಿತವಾಗಿರಿಸಿದ್ದಕ್ಕಾಗಿ ನೀವು ದುಡಿಯುತ್ತಿದ್ದೀರಿ ಧನ್ಯವಾದಗಳು' ಹಾರ್ದಿಕ್ ಪಾಂಡ್ಯ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ ಸಖತ್ ವೈರಲ್ ಆಗುತ್ತಿದೆ. ಇದೇ ವೇಳೆ ಹಾರ್ದಿಕ್ ಪಾಂಡ್ಯ ವಿಡಿಯೋ ಸಹ ಅಭಿಮಾನಿಗಳ ಮನ ಗದ್ದಿದೆ.

ವೈರಲ್‌ ವಿಡಿಯೋ

ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರ ಒಂದು ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವೇಳೆ ಹಾರ್ದಿಕ್ ಪಾಂಡ್ಯ ವಿಮಾನ ನಿಲ್ದಾಣದಲ್ಲಿ ಪ್ರವೇಶಿಸುವಾಗ ಗೇಟ್‌ ಬಳಿ ನಿಂತಿದ್ದ ಸೈನಿಕರಿಗೆ ನಮಸ್ಕರಿಸಿ ಕೈಕುಲುಕಿದ್ದಾರೆ. ನಂತರ ಸೈನಿಕರ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದ್ದಾರೆ. ಏಪ್ರಿಲ್‌ 22 ರಂದು ಪಹಲ್ಗಾಮ್‌ದಲ್ಲಿ ನಡೆದ ಉಗ್ರರರ ದಾಳಿಯನ್ನು ಹಾರ್ದಿಕ್ ಪಾಂಡ್ಯ ತೀವ್ರವಾಗಿ ಖಂಡಿಸಿದ್ದಾರೆ. ಬಳಿಕ ಸೈನಿಕರ ಕಾರ್ಯವನ್ನು ಶ್ಲಾಘಿಸಿದ್ದಾರೆ.

ವಿರಾಟ್‌, ಸಿರಾಜ್‌ ಪೋಸ್ಟ್‌

ಟೀಮ್ ಇಂಡಿಯಾದ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್‌ ಕೊಹ್ಲಿ ಸಹ ಪೋಸ್ಟ್ ಮಾಡಿದ್ದಾರೆ. ಭಾರತ ಹಾಗೂ ಪಾಕ್‌ ನಡುವಣ ಉದ್ವಿಗ್ನತೆಯ ವೇಳೆ ವಿರಾಟ್‌ ಮಾಡಿರುವ ಪೋಸ್ಟ್‌ ಅಭಿಮಾನಿಗಳ ಮನ ಗೆದ್ದಿದೆ. "ಈ ಕಷ್ಟದ ಸಮಯದಲ್ಲಿ ಸೈನ್ಯದೊಂದಿಗೆ ನಾವು ನಿಲ್ಲುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ದೇಶವನ್ನು ರಕ್ಷಿಸುತ್ತಿರುವ ಸಶಸ್ತ್ರ ಪಡೆಗಳಿಗೆ ನಾವು ನಮಸ್ಕರಿಸುತ್ತೇವೆ. ಸೈನ್ಯಕರ ವೀರ ಶೌರ್ಯ ಹಾಗೂ ಧೈರ್ಯಕ್ಕೆ ನಾವು ಯಾವಾಗಲೂ ಚಿರರುಣಿಯಾಗಿರುತ್ತೇವೆ ಎಂದು ವಿರಾಟ್ ಬರೆದುಕೊಂಡಿದ್ದಾರೆ.

Hardik Pandya Salutes Indian Army Viral Video Shows Him Greeting Soldiers Amid IPL Suspension

ಟೀಮ್ ಇಂಡಿಯಾದ ವೇಗದ ಬೌಲರ್‌ ಮೊಹಮ್ಮದ್‌ ಸಿರಾಹ್‌ ಸಹ ಈ ಬಗ್ಗೆ ಪೋಸ್ಟ್ ಒಂದುವನ್ನು ಮಾಡಿದ್ದು ಈ ಪೋಸ್ಟ್‌ ಸಹ ಸಖತ್ ವೈರಲ್ ಆಗುತ್ತಿದೆ. "ಮೇ 8ರ ರಾತ್ರಿ ದೇಶದ 15 ನಗರಗಳನ್ನು ಸೇನೆ ರಕ್ಷಿಸಿದೆ. ಭಾರತೀಯ ಸೇನೆಗೆ ಧನ್ಯವಾದ. ನಿಮ್ಮಿಂದಾಗಿ ಮಾತ್ರ ದೇಶವಾಸಿಗಳು ಶಾಂತಿಯುತವಾಗಿ ಮಲಗಲು ಹಾಗೂ ಉಸಿರಾಡಲು ಸಾಧ್ಯ ಎಂದು ತಿಳಿಸಿದ್ದಾರೆ.

Story first published: Saturday, May 10, 2025, 12:44 [IST]
Other articles published on May 10, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+