Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

17 ರನ್‌ ಬಾರಿಸುತ್ತಲೇ ಹಾರ್ದಿಕ್ ಪಾಂಡ್ಯ ದಾಖಲೆ

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಟಿ20 ಕ್ರಿಕೆಟ್‌ಗೆ ಮರಳಲು ತಯಾರಿ ನಡೆಸಿದ್ದಾರೆ. ಇವರು ಈಗಾಗಲೇ ಟಿ20 ಫಾರ್ಮೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಟಿ20 ಸ್ವರೂಪದಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಹಾರ್ದಿಕ್ ಪಾಂಡ್ಯ, ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಯಾರು ಮಾಡದ ಸಾಧನೆಯನ್ನು ಮಾಡಲು ಸಿದ್ಧರಾಗಿದ್ದಾರೆ. ಹಾಗಿದ್ದರೆ ಆ ದಾಖಲೆ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಹಾರ್ದಿಕ್ ಪಾಂಡ್ಯ ಈ ವರ್ಷದ ಆರಂಭದಲ್ಲಿ ದುಬೈನಲ್ಲಿ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿದ್ದರು. ಈಗ ಮತ್ತೆ ಹಾರ್ದಿಕ್ ಪಾಂಡ್ಯ ಚುಟುಕು ಫಾರ್ಮೆಟ್‌ ಮೂಲಕ ಬ್ಲ್ಯೂ ಜೆರ್ಸಿಯಲ್ಲಿ ಮಿಂಚಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಐಸಿಸಿ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಇವರಿಗೆ ಮೊದಲ ಸ್ಥಾನ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಆಟಗಾರ.

Hardik Pandya set to make history at Asia Cup T20 on the verge of a new record

ಮುಂದಿನ ವರ್ಷದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಟಿ20 ವಿಶ್ವಕಪ್‌ ನಡೆಯಲಿದೆ. ಇದಕ್ಕೆ ತಯಾರಿಯಾಗಿ ಏಷ್ಯಾ ಕಪ್ ಟಿ20 ಟೂರ್ನಿಯನ್ನು ಆಡಿಸಲಾಗುತ್ತಿದೆ. ಇದೇ ಮೂರನೇ ಬಾರಿಗೆ ಏಷ್ಯ ಕಪ್‌ನ್ನು ಟಿ20 ಮಾದರಿಯಲ್ಲಿ ಆಡಲಾಗತ್ತಿದೆ. ಈ ಫಾರ್ಮೆಟ್‌ನಲ್ಲಿ ಟೀಮ್ ಇಂಡಿಯಾ ಒಮ್ಮೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಸ್ವರೂಪದಲ್ಲಿ ಹಾರ್ದಿಕ್ ಪಾಂಡ್ಯ 8 ಪಂದ್ಯಗಳನ್ನು ಆಡಿದ್ದು 11 ವಿಕೆಟ್‌ ಕಬಳಿಸಿದ್ದಾರೆ. ಅಲ್ಲದೆ 83 ರನ್‌ ಬಾರಿಸಿದ್ದಾರೆ. ಮುಂಬರುವ ಏಷ್ಯಾ ಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ 17 ರನ್‌ಗಳನ್ನು ಬಾರಿಸುವಲ್ಲಿ ಯಶಸ್ವಿಯಾದರೆ, ಟಿ 20 ಏಷ್ಯಾ ಕಪ್ ಪಂದ್ಯಾವಳಿಯ ಇತಿಹಾಸದಲ್ಲಿ 10 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಮತ್ತು 100 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಹಿರಿಮೆ ತನ್ನದಾಗಿಸಿಕೊಳ್ಳಲಿದ್ದಾರೆ.

Hardik Pandya set to make history at Asia Cup T20 on the verge of a new record

ಸೆ.9 ರಿಂದ ಏಷ್ಯಾ ಕಪ್

ಹಾರ್ದಿಕ್‌ ಪಾಂಡ್ಯ ಈ ಸಾಧನೆಯನ್ನು ಯಾವ ತಂಡದ ವಿರುದ್ಧ ಮಾಡತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಸೆಪ್ಟಂಬರ್ 9 ರಂದು ಯುಎಇನಲ್ಲಿ ಏಷ್ಯಾ ಕಪ್‌ ಟಿ20 ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆ.10 ರಂದು ತನ್ನ ಅಭಿಯಾನವನ್ನು ಆರಂಭಿಸಲಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್‌ ಪಂದ್ಯ ಸೆಪ್ಟಂಬರ್‌ 14 ರಂದು ನಡೆಯಲಿದೆ. ಲೀಗ್‌ ಹಂತದಲ್ಲಿ ಪ್ರತಿ ತಂಡ ಮೂರು ಪಂದ್ಯಗಳನ್ನು ಆಡಲಿದೆ. ಈ ಹಂತದಲ್ಲಿ ಗುಂಪು ಹಂತದಲ್ಲಿ ಅಗ್ರ 2 ಸ್ಥಾನ ಪಡೆದ ತಂಡಗಳು ಸೂಪರ್ 4 ಹಂತಕ್ಕೆ ಪ್ರವೇಶಿಸಲಿವೆ. ಈ ಹಂತದಲ್ಲೂ ತಂಡಗಳು ಮೂರು ಪಂದ್ಯಗಳನ್ನು ಆಡಲಿವೆ. ಇದಾದ ಬಳಿಕ ಸೆಪ್ಟಂಬರ್ 29 ರಂದು ಫೈನಲ್‌ ಪಂದ್ಯ ನಡೆಯಲಿದೆ. ಈ ಬಾರಿ ಏಷ್ಯಾ ಕಪ್‌ ಚಾಂಪಿಯನ್ ಪಟ್ಟವನ್ನು ಯಾರು ಅಲಂಕರಿಸುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.

Story first published: Thursday, September 4, 2025, 11:15 [IST]
Other articles published on Sep 4, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+