ನತಾಶಾ ಸ್ಟ್ಯಾಂಕೋವಿಕ್ ಬಾಹುಗಳಲ್ಲಿ ಬಂಧಿಯಾಗಲಿದ್ದಾರೆ ಹಾರ್ದಿಕ್ ಪಾಂಡ್ಯ!

ಮುಂಬೈ, ಅಕ್ಟೋಬರ್ 26: ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಟ್ರೆಂಡಿಂಗ್ ಕ್ರಿಕೆಟರ್‌ಗಳ ಸಾಲಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವವರು. ಕೆಲವೊಮ್ಮೆ ಭರ್ಜರಿ ಬ್ಯಾಟಿಂಗ್, ಮಾರಕ ಬೌಲಿಂಗ್‌ಗಾಗಿ ಹಾರ್ದಿಕ್ ಮಾಧ್ಯಮಗಳಲ್ಲಿ ಕಾಣಿಸಿಕೊಂಡರೆ, ಕೆಲವೊಮ್ಮೆ ಗಾಸಿಪ್‌ಗಾಗಿ, ವಿವಾದಕ್ಕಾಗಿ ಸುದ್ದಿಯಾಗುತ್ತಿರುತ್ತಾರೆ.
ತೀರಾ ಇತ್ತೀಚಿನ ಸುದ್ದಿಯೆಂದರೆ, ಹಾರ್ದಿಕ್ ಪಾಂಡ್ಯ, ಬಾಲಿವುಡ್ ನಟಿ, ಮೂಲತಃ ಸರ್ಬಿಯಾದ ನತಾಶಾ ಸ್ಟ್ಯಾಂಕೋವಿಕ್ ಅವರ ಬಾಹುಗಳಲ್ಲಿ ಶಾಶ್ವತವಾಗಿ ಬಂಧಿಯಾಗುವುದರಲ್ಲಿದ್ದಾರೆ. ನತಾಶಾ ಅವರನ್ನು ಹಾರ್ದಿಕ್ ಇತ್ತೀಚೆಗೆ ತನ್ನ ಕುಟುಂಬಕ್ಕೆ ಪರಿಚಯಿಸುತ್ತಿರುವುದು ಇಂಥದ್ದೊಂದು ಸಾಧ್ಯತೆಗೆ ಎಡೆಮಾಡಿ ಕೊಟ್ಟಿದೆ.
ನತಾಶಾ ಮತ್ತು ಹಾರ್ದಿಕ್ ಈಚಿನ ನಡೆಯಂತೂ ಇಬ್ಬರೂ ಬ್ಯಾಚುಲರ್ ಲೈಫ್‌ಗೆ ಗುಡ್‌ಬಾಯ್ ಹೇಳುವ ಮುನ್ಸೂಚನೆ ನೀಡುತ್ತಿದೆ.

ಡ್ಯಾನ್ಸ್ ಶೋ ಮೂಲಕ ಫೇಮಸ್
ಇತ್ತೀಚಿನ ವರದಿಗಳ ಪ್ರಕಾರ, ಡ್ಯಾನ್ಸ್ ಟಿವಿ ಶೋ 'ನಾಚ್ ಬಲಿಯೆ' ಸೀಸನ್ 9ರ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡ ನಟಿ ಸ್ಟ್ಯಾಂಕೋವಿಕ್ ಅವರ ಜೊತೆ ಸಂಬಂಧವನ್ನಿರಿಸಿಕೊಂಡಿದ್ದ ಕ್ರಿಕೆಟರ್ ಹಾರ್ದಿಕ್, ತನ್ನ ಸಂಬಂಧವನ್ನು ಮುಂದಿನ ಹಂತಕ್ಕೆ ಅಂದರೆ ಮದುವೆಯತ್ತ ಕೊಂಡೊಯ್ಯುವುದರಲ್ಲಿದ್ದಾರೆ ಎನ್ನಲಾಗಿದೆ.

ದೀಪಾವಳಿ ಪಾರ್ಟಿ
ಹಾರ್ದಿಕ್ ಮತ್ತು ನತಾಶ ನಡುವಿನ ಸಂಬಂಧವನ್ನು ಹಾರ್ದಿಕ್ ಅಣ್ಣ ಕೃನಾಲ್ ಪಾಂಡ್ಯ ಮತ್ತು ಅವರ ಪತ್ನಿ ಸೇರಿದಂತೆ ಅವರ ಕುಟುಂಬಸ್ಥರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಕೃನಾಲ್ ಮತ್ತವರ ಪತ್ನಿ ಪಂಖುರಿ ವ್ಯವಸ್ಥೆ ಮಾಡಿದ್ದ ದೀಪಾವಳಿ ಪಾರ್ಟಿ ಕಾರ್ಯಕ್ರಮ ಮತ್ತು ಹಾರ್ದಿಕ್ ಸೋದರ ಸಂಬಂಧಿ ತಾನ್ಯಾ ಬರ್ತ್‌ಡೇ ಪಾರ್ಟಿಯಲ್ಲೂ ಸ್ಟ್ಯಾಂಕೋವಿಕ್ ಕಾಣಿಸಿಕೊಂಡಿದ್ದರು.

ದಾಂಪತ್ಯ ಜೀವನಕ್ಕೆ ನಾಂದಿ?
ಅಂತೂ ಪರಸ್ಪರ ಹತ್ತಿರವಾಗುತ್ತಿರುವ ಹಾರ್ದಿಕ್-ನತಾಶಾ ನಾಳೆ ದಾಂಪತ್ಯ ಜೀವನಕ್ಕೆ ಕಾಲಿರಿಸುವ ನಿರೀಕ್ಷೆಯ ಹುಟ್ಟಿಸಿದ್ದಾರೆ. ಅಂದ್ಹಾಗೆ ಬೆನ್ನು ನೋವಿಗೆ ತುತ್ತಾಗಿದ್ದ ಹಾರ್ದಿಕ್ ಇತ್ತೀಚಿನ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡಿಲ್ಲ. ಸಂಪೂರ್ಣ ಚೇತರಿಸಿಕೊಳ್ಳದಿರುವುದರಿಂದ ಪಾಂಡ್ಯ ಮುಂಬರಲಿರುವ ಬಾಂಗ್ಲಾ ವಿರುದ್ಧದ ಸರಣಿಯಲ್ಲೂ ಆಡುತ್ತಿಲ್ಲ.

ನತಾಶಾ ವಿಶೇಷ ಮೆಸೇಜ್
ಹಾರ್ದಿಕ್ ಪಾಂಡ್ಯ ಅವರ ಹುಟ್ಟು ಹಬ್ಬದ ದಿನ (ಅಕ್ಟೋಬರ್ 11) ಹಾರ್ದಿಕ್‌ಗೆ ವಿಶೇಷ ಮೆಸೇಜ್ ಕಳುಹಿಸಿದ್ದ ನತಾಶಾ, 'ನನ್ನ ಬೆಸ್ಟ್ ಫ್ರೆಂಡ್, ಪ್ರಬಲ ಮತ್ತು ಚೆಲುವಾದ ಆತ್ಮ. ಈ ವರ್ಷ ನಿನ್ನ ಪಾಲಿಗೆ ರೋಚಕ ಪ್ರಯಾಣವೆನಿಸಲಿ,' ಎಂದು ಶುಭ ಹಾರೈಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications