ಟೀಮ್ ಇಂಡಿಯಾಕ್ಕೆ ಶೀಘ್ರ ಮರಳಲಿದ್ದಾರೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ!

ನವದೆಹಲಿ, ಡಿಸೆಂಬರ್ 14: ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮರಳಿ ರಾಷ್ಟ್ರೀಯ ತಂಡ ಸೇರಿಕೊಳ್ಳುವುದರಲ್ಲಿದ್ದಾರೆ. ಬೆನ್ನಿನ ಶಸ್ತ್ರ ಚಿಕಿತ್ಸೆಯ ಬಳಿಕ, ಭಾರತ ತಂಡದ ನ್ಯೂಜಿಲೆಂಡ್ ಪ್ರವಾಸ ಸರಣಿಯ ಮಧ್ಯೆ ಪಾಂಡ್ಯ ತಂಡಕ್ಕೆ ಮರಳು ನಿರೀಕ್ಷೆಯಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದ ವೇಳೆ ಹಾರ್ದಿಕ್, ಬೆನ್ನು ನೋವಿಗೆ ತುತ್ತಾಗಿದ್ದರು. ಐಎಎನ್‌ಎಸ್ ಜೊತೆ ಮಾತನಾಡಿದ ಪಾಂಡ್ಯ, ಬೆನ್ನು ನೋವಿನ ಸಮಸ್ಯೆಯನ್ನು ನಿವಾರಿಸಿಕೊಂಡು ಶೀಘ್ರ ತಾನು ಭಾರತ ತಂಡಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯವಾಗಿ ನ್ಯೂಜಿಲೆಂಡ್ ಪ್ರವಾಸ ಸರಣಿಯ ವೇಳೆ ಪಾಂಡ್ಯ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಕಿವೀಸ್ ಸರಣಿಯ ಮೊದಲ ಟಿ20 ಪಂದ್ಯ ಜನವರಿ 24ರಂದು ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆಯಲಿದೆ.

ಶಸ್ತ್ರ ಚಿಕಿತ್ಸೆ ತಪ್ಪಿಸಿಕೊಳ್ಳುವುದರಲ್ಲಿದೆ
'ಬೆನ್ನು ನೋವಿನ ತೊಂದರೆಯನ್ನು ನಿಭಾಯಿಸುತ್ತಿದ್ದೇನೆ. ಶಸ್ತ್ರ ಚಿಕಿತ್ಸೆಯಿಂದ ತಪ್ಪಿಸಿಕೊಳ್ಳಲು ನಾನು ಸಾಧ್ಯವಿರುವುದನ್ನೆಲ್ಲಾ ಪ್ರಯತ್ನಿಸಿದೆ. ಎಲ್ಲವೂ ಯತ್ನಿಸಿದ ಬಳಿಕ ಜಾರಿಕೊಳ್ಳುವ ಕೆಲಸವಾಗದು ಅನ್ನಿಸಿತು. ಶಸ್ತ್ರ ಚಿಕಿತ್ಸೆಯ ಹೊರತಾಗಿ ತಂಡಕ್ಕೆ ನನ್ನ 100 ಶೇ. ಬೆಂಬಲ ನೀಡಲಾಗದು ಎಂಬ ಅರಿವಾಯಿತು. ಹಾಗಾಗಿ ನಾನು ಶಸ್ತ್ರ ಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದೆ,' ಎಂದು ಪಾಂಡ್ಯ ತಿಳಿಸಿದ್ದಾರೆ.

ನ್ಯೂಜಿಲೆಂಡ್ ಸರಣಿಗೆ ವಾಪಸ್?
ಯಾವಾಗ ತಂಡಕ್ಕೆ ವಾಪಸ್ಸಾಗಲಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಪಾಂಡ್ಯ, ಶಸ್ತ್ರ ಚಿಕಿತ್ಸೆಗೆ ಹೋಗುವ ಮುನ್ನ ನ್ಯೂಜಿಲೆಂಡ್ ಸರಣಿ ಮತ್ತು ಟಿ20 ವಿಶ್ವಕಪ್ ತನ್ನ ತಲೆಯಲ್ಲಿದೆ ಎಂದರು. 'ಚಿಕಿತ್ಸೆಯ ಬಳಿಕ ಸುಧಾರಿಸಿಕೊಳ್ಳಲು ನಾನು 4 ತಿಂಗಳು ತೆಗೆದುಕೊಂಡರೂ ನ್ಯೂಜಿಲೆಂಡ್ ಸರಣಿ ಮುಗಿಯುವ ಮುನ್ನ ಅಂದರೆ ಸರಣಿ ಮಧ್ಯದಲ್ಲಿ ತಂಡಕ್ಕೆ ಬರಲಿದ್ದೇನೆ,' ಎಂದು ಪಾಂಡ್ಯ ಹೇಳಿದ್ದಾರೆ.

ಭಾರತಕ್ಕಿರುವ ಮುಂದಿನ ಪಂದ್ಯಗಳು
ಡಿಸೆಂಬರ್ 15ರಂದು ಆರಂಭಗೊಳ್ಳುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ (3 ಟಿ20, 3 ಏಕದಿನ) ಡಿಸೆಂಬರ್ 22ರಂದು ಕೊನೆಗೊಳ್ಳಲಿದೆ. 2020 ವರ್ಷಾರಂಭದಲ್ಲೇ ಅಂದರೆ, ಜನವರಿ 5ರಿಂದ ಭಾರತಕ್ಕೆ ಶ್ರೀಲಂಕಾ ಪ್ರವಾಸ ಸರಣಿ (3 ಟಿ20, 3 ಏಕದಿನ) ನಡೆಯಲಿದೆ. ಅನಂತರ ಜನವರಿ 24ರಿಂದ ನ್ಯೂಜಿಲೆಂಡ್ ಸರಣಿ ಆರಂಭಗೊಳ್ಳಲಿದೆ. ಇದು 5 ಟಿ20, 3 ಏಕದಿನ, 2 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ.

ವಿಶ್ವ ಟಿ20 ಆಡಲೇಬೇಕನ್ನೋ ಯೋಚನೆ
'ನ್ಯೂಜಿಲೆಂಡ್ ಸರಣಿ ವೇಳೆಗೆ ನಾನು ಸಂಪೂರ್ಣ ಗುಣಮುಖವಾದರೆ ಒಂದಿಷ್ಟು ಅಂತಾರಾಷ್ಟ್ರೀಯ ಪಂದ್ಯಗಳು, ಐಪಿಎಲ್ ಪಂದ್ಯಗಳು ಮತ್ತು ವಿಶ್ವ ಟಿ20 ಪಂದ್ಯಗಳನ್ನು ಆಡಬಹುದು ಅನ್ನೋ ಯೋಜನೆ ನನ್ನದು. ಎಲ್ಲದಕ್ಕಿಂತ ಮುಖ್ಯವಾಗಿ ವರ್ಲ್ಡ್ ಟಿ20ಗೆ ತಂಡದಲ್ಲಿರುವ ಆಲೋಚನೆ ಸದ್ಯಕ್ಕೆ ನನ್ನ ತಲೆಯಲ್ಲಿದೆ,' ಎಂದು ಹಾರ್ದಿಕ್ ವಿವರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications