'ದೇವರ ಆಶೀರ್ವಾದ': ಗಂಡು ಮಗುವಿನ ಫೋಟೋ ಶೇರ್ ಮಾಡಿದ ಹಾರ್ದಿಕ್

ಮುಂಬೈ, ಆಗಸ್ಟ್ 1: ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಬಾಲಿವುಡ್ ನಟಿ ನತಾಶಾ ಸ್ಟ್ಯಾಂಕೋವಿಕ್ ಜೋಡಿಗೆ ಗಂಡು ಮಗು ಜನಿಸಿತ್ತು. ಮಗುವಿನ ಚಿತ್ರವನ್ನು ಹಾರ್ದಿಕ್ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅಪ್ಪನಾದ ಖುಷಿಯನ್ನು ಪಾಂಡ್ಯ, ಸಾಮಾಜಿಕ ಜಾಲತಾಣದಲ್ಲಿ ತೋರಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹಾರ್ದಿಕ್, ಜುಲೈ 30ರಂದು ತನಗೆ ಮಗು ಜನಿಸಿದ ಖುಷಿ ಹಂಚಿಕೊಂಡಿದ್ದರು. ಆದರೆ ಆಗ ಮಗುವಿನ ಪುಟಾಣಿ ಕೈಗಳ ಚಿತ್ರನ್ನಷ್ಟೇ ಹಂಚಿಕೊಂಡಿದ್ದರು. ಈಗ ಪಾಂಡ್ಯ ಜೂನಿಯರ್ ಹಾರ್ದಿಕ್ ಪೂರ್ತಿ ಚಿತ್ರವನ್ನು ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.
ಆಸ್ಪತ್ರೆಯಲ್ಲಿ ಪುಟಾಣಿ ಪುತ್ರನನ್ನು ಕೈಯಲ್ಲಿ ಹಿಡಿದಿರುವ ಚಿತ್ರವನ್ನು ಟ್ವಿಟರ್‌ನಲ್ಲಿ (ಶನಿವಾರ) ಹಾಕಿಕೊಂಡಿರುವ ಪಾಂಡ್ಯ, 'ದೇವರ ಆಶೀರ್ವಾದವಿದು' ಎಂದು ಬರೆದುಕೊಂಡಿದ್ದಾರೆ. ಅಪ್ಪ-ಅಮ್ಮ ಅನ್ನಿಸಿಕೊಳ್ಳುತ್ತಿರುವ ಹಾರ್ದಿಕ್-ನತಾಶಾಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ.
ಐಪಿಎಲ್‌ನಲ್ಲಿ ಮುಂಬೈ ಇಂಡಿಯಾದ ಪ್ರಮುಖ ಆಲ್ ರೌಂಡರ್ ಆಗಿರುವ ಹಾರ್ದಿಕ್, ಭಾರತ ಪರ 11 ಟೆಸ್ಟ್ ಪಂದ್ಯಗಳಲ್ಲಿ 532 ರನ್, 17 ವಿಕೆಟ್, 54 ಏಕದಿನ ಪಂದ್ಯಗಳಲ್ಲಿ 957 ರನ್, 54 ವಿಕೆಟ್, 40 ಟಿ20ಐ ಪಂದ್ಯಗಳಲ್ಲಿ 310 ರನ್, 38 ವಿಕೆಟ್ ದಾಖಲೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications