Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾದಿಂದ ವಾಪಾಸ್ಸಾದ ಹಾರ್ದಿಕ್ ಪಾಂಡ್ಯ ಏನ್ಮಾಡ್ತಿದಾರೆ? ಇಲ್ಲಿದೆ ಉತ್ತರ

Hardik Pandya Shares Pic with son, Says From National Duty To Father Duty

ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಟೀಮ್ ಇಂಡಿಯಾ ಪರವಾಗಿ ಮಿಂಚಿದ ಆಟಗಾರ ಹಾರ್ದಿಕ್ ಪಾಂಡ್ಯ ರಾಷ್ಟ್ರೀಯ ತಂಡದ ಕರ್ತವ್ಯ ಮುಗಿಸಿ ತವರಿಗೆ ಮರಳಿದ್ದಾರೆ. ಟೆಸ್ಟ್ ತಂಡಕ್ಕೆ ಪಾಂಡ್ಯ ಆಯ್ಕೆಯಾಗದ ಕಾರಣ ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ. ಆದರೆ ಪಾಂಡ್ಯ ತವರಿಗೆ ವಾಪಾಸಾದ ಬಳಿಕವೂ ಮತ್ತೆ ಸುದ್ದಿಯಲ್ಲಿದ್ದಾರೆ.

ಪಾಂಡ್ಯ ಈ ಬಾರಿ ಸುದ್ದಿಯಾಗಿದ್ದು ತಮ್ಮ ಹೊಸ ಜವಾಬ್ಧಾರಿಯ ಕಾರಣದಿಂದಾಗಿ. ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಒಂದು ಫೋಟೋ ಈಗ ಅಭಿಮಾನಿ ವಲಯದಲ್ಲಿ ಸಾಕಷ್ಟು ವೈರಲ್ ಆಗಿದೆ. ಕೆಲ ತಿಂಗಳ ಹಿಂದೆಯಷ್ಟೇ ಜನಿಸಿದ ಪುತ್ರನೊಂದಿಗಿನ ಫೋಟೋವನ್ನು ಪಾಂಡ್ಯ ಹಂಚಿಕೊಂಡಿದ್ದಾರೆ.

"ರಾಷ್ಟ್ರೀಯ ಕರ್ತವ್ಯದಿಂದ ತಂದೆಯ ಕರ್ತವ್ಯಕ್ಕೆ" ಎಂದು ಹಾರ್ದಿಕ್ ಪಾಂಡ್ಯ ಕ್ಯಾಪ್ಶನ್ ಹಾಕಿ ಇನ್ಸ್ಟಾಗ್ರಾಮ್‌ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ತಮ್ಮ ಪುತ್ರ ಅಗಸ್ತ್ಯನನ್ನು ಮಲಗಿಸಿಕೊಂಡು ಹಾಲು ಕುಡಿಸುತ್ತಾ ಇರುವ ಫೋಟೋ ಇದಾಗಿದ್ದು ಸಾಕಷ್ಟು ವೈರಲ್ ಆಗಿದೆ.

ಹಾರ್ದಿಕ್ ಪಾಂಡ್ಯ ನಾಲ್ಕು ತಿಂಗಳ ಬಳಿಕ ತಮ್ಮ ಪುತ್ರನನ್ನು ನೋಡುತ್ತಿದ್ದಾರೆ. ಐಪಿಎಲ್‌ಗಾಗಿ ದುಬೈಗೆ ತೆರಳಿದ್ದ ಹಾರ್ದಿಕ್ ಪಾಂಡ್ಯ ಅದಾದ ಬಳಿಕ ಆಸ್ಟ್ರೇಲಿಯಾಗೆ ಟೀಮ್ ಇಂಡಿಯಾ ಜೊತೆಗೆ ಪ್ರಯಾಣಿಸಿದ್ದರು. ಈಗ ಏಕದಿನ ಸರಣಿ ಹಾಗೂ ಟಿ20 ಸರಣಿಯ ಬಳಿಕ ತವರಿಗೆ ವಾಪಾಸ್ಸಾಗಿದ್ದಾರೆ.

ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾದಲ್ಲಿ ಶ್ರೇಷ್ಠ ಫಾರ್ಮ್‌ನಲ್ಲಿ ಇದ್ದರು. ಏಕದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಳಿಕ ಟಿ20ಯಲ್ಲೂ ಇದೇ ಆಟವನ್ನು ಮುಂದುವರಿಸಿದ್ದರು. ಟಿ20ಯಲ್ಲಿ ನೀಡಿದ ಈ ಪ್ರದರ್ಶನಕ್ಕಾಗಿ ಅವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

Story first published: Monday, December 14, 2020, 11:09 [IST]
Other articles published on Dec 14, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+