Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Hardik Pandya: ಮುಂಬೈ ಕ್ಯಾಂಪ್‌ನಲ್ಲಿ ಹೊಸ ಜೋಶ್‌ ತಂದಿರುವ ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ ಇತ್ತೀಚಿನ ದಿನಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಚಾಂಪಿಯನ್ಸ್‌ ಟ್ರೋಫಿಯಲ್ಲಿ ಕಂಡುಕೊಂಡಿದ್ದ ಫಾರ್ಮ್‌ನ್ನು ಹಾರ್ದಿಕ್ ಪಾಂಡ್ಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಹಾರ್ದಿಕ್ ಮುಂದುವರೆಸಿದರು. ಮುಂಬೈ ಇಂಡಿಯನ್ಸ್‌ ತಂಡದ ಪರ ನಾಯಕರಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಹಾರ್ದಿಕ್‌ ಸ್ಥಿರ ಪ್ರದರ್ಶನವನ್ನು ನೀಡಿ ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ಇದು ನಿಜಕ್ಕೂ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌. ಹಾರ್ದಿಕ್ ಪಾಂಡ್ಯ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ತಮ್ಮ ಸ್ಥಿರ ಪ್ರದರ್ಶನ ಮುಂದುವರೆಸಿದರು.

ಹಾರ್ದಿಕ್ ಪಾಂಡ್ಯ ಅವರ ಅಪ್‌ಡೇಟ್‌ ಬೌಲಿಂಗ್ ವರ್ಷನ್‌ ಅನ್ನು ಈ ಬಾರಿಯ ಐಪಿಎಲ್‌ನಲ್ಲಿ ಕಾಣುತ್ತಿದ್ದು, ಬ್ಯಾಟರ್‌ಗಳಿಗೆ ಬಹುವಾಗಿ ಕಾಡಿದ್ದಾರೆ. ತಮ್ಮ ಬೌಲಿಂಗ್‌ನಲ್ಲಿ ವೇರಿಯೇಷನ್‌ ತಂದಿರುವ ಹಾರ್ದಿಕ್‌, ಲೈನ್‌ ಹಾಗೂ ಲೆಂತ್ ಮೇಲೆ ಉತ್ತಮ ಕಂಟ್ರೋಲ್ ಇಟ್ಟುಕೊಂಡಿದ್ದಾರೆ. ಇದುವೇ ಹಾರ್ದಿಕ್ ಈ ಲೀಗ್‌ನಲ್ಲಿ ವಿಭಿನ್ನವಾಗಿ ಕಾಣುವಂತೆ ಮಾಡಿದೆ. ಹಾರ್ದಿಕ್ ನಾಯಕತ್ವವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ನೆರವಾಗುತ್ತಿದ್ದಾರೆ.

Hardik Pandya Shines with All-Round Show as Mumbai Indians Triumph Over Sunrisers Hyderabad

ಸನ್‌ರೈಸರ್ಸ್‌ ಹೈದರಾಬಾದ್ ತಂಡ ಬ್ಯಾಟಿಂಗ್ ಮಾಡುವಾಗ ಹಾರ್ದಿಕ್ ಬೌಲಿಂಗ್‌ನಲ್ಲಿ ತಂಡಕ್ಕೆ ಆಧಾರವಾದ್ರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದ ಅಭಿಷೇಕ್ ಶರ್ಮಾ, ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದರು. ಇವರ ಆಟಕ್ಕೆ ಹಾರ್ದಿಕ್ ಬ್ರೇಕ್ ಹಾಕಿದರು. ಈ ಮೂಲಕ ತಂಡ ಮೊದಲ ವಿಕೆಟ್‌ ಪಡೆಯುವಲ್ಲಿ ತಮ್ಮ ಕಾಣಿಕೆ ನೀಡಿದರು. ಹಾರ್ದಿಕ್ ಎಸೆದ ಮಿಡ್ಲ್ ಆಂಡ್‌ ಲೆಗ್‌ ಡಿಲಿವರಿಯನ್ನು ತಪ್ಪಾಗಿ ಅರ್ಥಹಿಸಿಕೊಂಡ ಅಭಿಷೇಕ್‌ ಬಿಗ್‌ ಹಿಟ್ ಬಾರಿಸಲು ಹೋಗಿ ಬೌಂಡರಿ ಲೈನ್‌ನಲ್ಲಿ ರಾಜ್ ಬಾವಾ ಹಿಡಿದ ಕ್ಯಾಚ್‌ಗೆ ಬಲಿಯಾದರು.

ಈ ಮೂಲಕ ಹಾರ್ದಿಕ್ ಪಾಂಡ್ಯ ಪ್ರಸಕ್ತ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾರ್ದಿಕ್ ಆಡಿದ ಆರು ಪಂದ್ಯಗಳಲ್ಲಿ 11 ವಿಕೆಟ್‌ ಕಬಳಿಸಿ ಅಬ್ಬರಿಸಿದ್ದಾರೆ.

Hardik Pandya Shines with All-Round Show as Mumbai Indians Triumph Over Sunrisers Hyderabad

ಬ್ಯಾಟಿಂಗ್‌ನಲ್ಲೂ ಹಾರ್ದಿಕ್ ಕಮಾಲ್‌

ಇನ್ನು ಬ್ಯಾಟಿಂಗ್‌ನಲ್ಲಿ ವಿಲ್‌ ಜಾಕ್ಸ್ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ಹಾರ್ದಿಕ್ ಪಾಂಡ್ಯ ಆರ್ಭಟಿಸಿದರು. ಮೊದಲು ಬೌಲಿಂಗ್‌ನಲ್ಲಿ ಮ್ಯಾಜಿಕ್ ಮಾಡಿದ್ದ ಕ್ಯಾಪ್ಟನ್‌ ಬಳಿಕ ಬ್ಯಾಟಿಂಗ್‌ನಲ್ಲೂ ಮಿಂಚಿದರು. ಇವರು ಕ್ರೀಸ್‌ಗೆ ಬಂದಾಗ ಮುಂಬೈ ಗೆಲುವಿಗೆ 33 ಎಸೆತಗಳಲ್ಲಿ 35 ರನ್‌ ಅವಶ್ಯಕತೆ ಇತ್ತು. ಹಾರ್ದಿಕ್ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೆ, ಡ್ರೆಸ್ಸಿಂಗ್ ರೂಮ್‌ನಿಂದಲೇ ಸೆಟ್ಲ್‌ ಆಗಿ ಬಂದಂತೆ ಬ್ಯಾಟ್ ಮಾಡಿದರು. ತಾವು ಎದುರಿಸಿದ ಎರಡನೇ ಎಸೆತದಲ್ಲಿ ಪ್ಯಾಟ್‌ ಕಮಿನ್ಸ್‌ಗೆ ಬೌಂಡರಿ ಬಾರಿಸಿದರು.

ಆ ನಂತರ ಹಾರ್ದಿಕ್ ಹರ್ಷಲ್‌ ಎಸೆತದಲ್ಲಿ ಬಿಗ್ ಸಿಕ್ಸರ್ ಬಾರಿಸಿದರು. ಇವರು ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದ್ದರೇ ಇನ್ನೂ ಪಂದ್ಯ ಬೇಗನೆ ಮುಗಿಯುತ್ತಿತ್ತು. ಆದರೆ ಬಿಗ್ ಹಿಟ್ ಬಾರಿಸಲು ಹೋಗಿ ಔಟ್ ಆದರು. ಹಾರ್ದಿಕ್ 9 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 21 ರನ್‌ ಬಾರಿಸಿ ಮಿಂಚಿದರು. ಇವರ ಫಾರ್ಮ್‌ ಮುಂಬೈ ಇಂಡಿಯನ್ಸ್‌ಗೆ ಅವಶ್ಯಕವಾಗಿದ್ದು, ಪ್ಲೇ ಆಫ್‌ ರೇಸ್‌ನಲ್ಲಿ ಮುಂಬೈ ಜೀವಂತವಾಗಿರಬೇಕಾದಲ್ಲಿ ಇಂತಹ ಪ್ರದರ್ಶನ ನೀಡಬೇಕು.

Story first published: Friday, April 18, 2025, 6:10 [IST]
Other articles published on Apr 18, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+