Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶ್ರೀಲಂಕಾದ ರಾಷ್ಟ್ರಗೀತೆ ಹಾಡಿದ ಹಾರ್ದಿಕ್ ಪಾಂಡ್ಯ: ವೈರಲ್ ವಿಡಿಯೋ

Hardik Pandya singing Sri Lankan National Anthem During T20I: Video

ಕೊಲಂಬೋ: ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಶ್ರೀಲಂಕಾದ ರಾಷ್ಟ್ರ ಗೀತೆ ಹಾಡಿ ಸುದ್ದಿಯಾಗಿದ್ದಾರೆ. ಕೊಲಂಬೋದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಭಾರತ-ಶ್ರೀಲಂಕಾ ಮೊದಲನೇ ಟಿ20ಐ ಪಂದ್ಯದ ವೇಳೆ ಹಾರ್ದಿಕ್ ಲಂಕಾ ರಾಷ್ಟ್ರಗೀತೆ ಹಾಡಿರುವ ವಿಡಿಯೋ ಸೆರೆಯಾಗಿದೆ.

ಅಂತಾರಾಷ್ಟ್ರೀಯ ಪಂದ್ಯಗಳ ವೇಳೆ ಟಾಸ್ ಬಳಿಕ ತಂಡಗಳು ಮೈದಾನಕ್ಕಿಳಿಯುವ ಮುನ್ನ ಇತ್ತಂಡಗಳ ರಾಷ್ಟ್ರಗೀತೆ ಹಾಡಿ ಗೌರವ ಸೂಚಿಸಲಾಗುತ್ತದೆ. ಈ ವೇಳೆ ಶ್ರೀಲಂಕಾದ ರಾಷ್ಟ್ರಗೀತೆ ನಡೆಯುವಾಗ ಹಾರ್ದಿಕ್ ಪಾಂಡ್ಯ ಕೂಡ ಲಂಕಾ ಆಟಗಾರರ ಜೊತೆ ಧ್ವನಿ ಸೇರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.

ದೇಶ ದೇಶಗಳ ಬಗ್ಗೆ ಪ್ರೀತಿ, ಗೌರವ ಇರಬೇಕು ಎಂಬಂತಿರುವ ಪಾಂಡ್ಯ ಅವರ ಈ ನಡೆಯನ್ನು ಕ್ರಿಕೆಟ್ ಪ್ರೇಮಿಗಳು ಮೆಚ್ಚಿಕೊಂಡಿದ್ದಾರೆ. ಪಾಂಡ್ಯ ಅವರನ್ನು ಗೌರವಿಸಬೇಕು ಎಂದು ಹೆಚ್ಚಿನವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ವಿಶೇಷವೆಂದರೆ ಲಂಕಾ ರಾಷ್ಟ್ರ ಗೀತೆ ಚೆನ್ನಾಗಿ ಗೊತ್ತಿರುವ ರೀತಿಯೇ ಹಾರ್ದಿಕ್ ಹಾಡಿದ್ದಾರೆ.

ಅಂದ್ಹಾಗೆ, ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ, ಶಿಖರ್ ಧವನ್ 46 (36), ಸಂಜು ಸ್ಯಾಮ್ಸನ್ 27, ಸೂರ್ಯಕುಮಾರ್ ಯಾದವ್ 50 (34), ಹಾರ್ದಿಕ್ ಪಾಂಡ್ಯ 10, ಇಶಾನ್ ಕಿಶನ್ ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 164 ರನ್ ಗಳಿಸಿತ್ತು.

Story first published: Sunday, July 25, 2021, 22:23 [IST]
Other articles published on Jul 25, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+