Hardik Pandya: ವಿರಾಟ್ ದಾಖಲೆ ಅಳಿಸಿದ ಹಾರ್ದಿಕ್ ಪಾಂಡ್ಯ
ಭಾರತ ಹಾಗೂ ಪಾಕಿಸ್ತಾನ ನಡುವಣ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ ಮುಗಿದಿದೆ. ಸೂರ್ಯ ಪಡೆ ಅಮೋಘ ಪ್ರದರ್ಶನ ನೀಡಿ 7 ವಿಕೆಟ್ ಜಯ ಸಾಧಿಸಿದೆ. ಈ ಪಂದ್ಯ ಮುಗಿದ ಮೇಲೆ ಪಾಕ್, ಭಾರತ ಕ್ರೀಡಾ ಸ್ಪೂರ್ತಿ ನೆನಪು ಹಾರಿದೆ ಎಂಬ ಕಿಡಿಯನ್ನು ಹಚ್ಚಿದೆ. ಈ ವಿವಾದ ಮಧ್ಯೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆದರೆ ವಿವಾದದ ನಡುವೆ ಇವು ಅಷ್ಟಾಗಿ ಸದ್ದು ಮಾಡುತ್ತಿಲ್ಲ.
ದುಬೈ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಘಟಿತ ಪ್ರದರ್ಶನ ನೀಡಿ ಜಯ ಸಾಧಿಸಿತು. ಈ ವೇಳೆ ಟೀಮ್ ಇಂಡಿಯಾದ ಪರ ಸೂರ್ಯಕುಮಾರ್ ಯಾದವ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಸ್ಥಿರ ಪ್ರದರ್ಶನ ನೀಡಿ ಗೆಲುವಿನಲ್ಲಿ ಮಿಂಚಿದ್ದಾರೆ. ಅಲ್ಲದೆ ಸ್ಪಿನ್ ಬೌಲರ್ ಕುಲ್‌ದೀಪ್ ಯಾದವ್ ಅವರು ತಮ್ಮ ಪಿರ್ಕಿ ಮೂಲಕ ಎದುರಾಳಿಗಳನ್ನು ಕಾಡಿ ಮೂರು ವಿಕೆಟ್ ಪಡೆದರು. ಇನ್ನು ಇದೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸಹ ಮತ್ತೊಂದು ದಾಖಲೆ ಬರೆದಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಎರಡು ಕ್ಯಾಚ್‌ಗಳನ್ನು ಪಡೆದು ಬೀಗಿದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆ ಬರೆದರು. ಈ ಮೂಲಕ ಹಾರ್ದಿಕ್, ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮೀರಿ ನಿಂತರು. ಹಾರ್ದಿಕ್ ಸದ್ಯ ಟಿ20 ಕ್ರಿಕೆಟ್‌ನಲ್ಲಿ 56 ಕ್ಯಾಚ್‌ಗಳನ್ನು ಪಡೆದಿದ್ದರೆ, ವಿರಾಟ್ ಕೊಹ್ಲಿ 54 ಕ್ಯಾಚ್ ಪಡೆದಿದ್ದಾರೆ.
ರೋಹಿತ್ ಶರ್ಮಾ ಹೆಸರಿನಲ್ಲಿದೆ ದಾಖಲೆ
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಟಿ 20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಪರ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ದಾಖಲೆ ಹೊಂದಿದ್ದಾರೆ. ಇವರು ಆಡಿದ 159 ಪಂದ್ಯಗಳಲ್ಲಿ 65 ಕ್ಯಾಚ್ ಪಡೆದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಎರಡನೇ ಸ್ಥಾನದಲ್ಲಿದ್ದಾರೆ. ಇವರು 98 ಪಂದ್ಯಗಳಲ್ಲಿ 57 ಕ್ಯಾಚ್ ಪಡೆದಿದ್ದಾರೆ. ಈಗ ಟೀಮ್ ಇಂಡಿಯಾ ಪರ ಅತಿ ಹೆಚ್ಚು ಕ್ಯಾಚ್ ಪಡೆದ ದಾಖಲೆಯ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯಗೆ ಮೂರನೇ ಸ್ಥಾನ. ಈ ಏಷ್ಯಾ ಕಪ್‌ನಲ್ಲಿ ಇನ್ನು ಎಷ್ಟು ಕ್ಯಾಚ್‌ಗಳನ್ನು ಪಡೆಯುತ್ತಾರೆ ಎಂಬುದೇ ಕುತೂಹಲ ಹೆಚ್ಚಿಸಿದೆ.
ಟೀಮ್ ಇಂಡಿಯಾ ಪ್ರಸಕ್ತ ಏಷ್ಯಾಕಪ್‌ನಲ್ಲಿ ಏಕೈಕ ನುರಿತ ಬೌಲರ್‌ನೊಂದಿಗೆ ಕಣಕ್ಕೆ ಇಳಿದಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಎರಡನೇ ವೇಗದ ಬೌಲರ್ ಸ್ಥಾನವನ್ನು ತುಂಬುತ್ತಿದ್ದಾರೆ. ಇವರು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರನ್‌ಗಳನ್ನು ನೀಡಿ ಕೈ ಸುಟ್ಟುಕೊಂಡರು. ಆದರೆ ಫೀಲ್ಡಿಂಗ್‌ನಲ್ಲಿ ಮಾತ್ರ ಮನಮೋಹಕ ಪ್ರದರ್ಶನ ನೀಡಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಭಾರತ ಲೀಗ್ ಹಂತದ ಕೊನೆಯ ಪಂದ್ಯವನ್ನು ಶುಕ್ರವಾರ ಸೆಪ್ಟಂಬರ್ 19 ರಂದು ಓಮನ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಸೂಪರ್ ಫೋರ್ ಹಂತಕ್ಕೆ ಅಜೇಯವಾಗಿ ಮುನ್ನುಗ್ಗುವ ಕನಸನ್ನು ಕಾಣುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications