ವಿಶ್ವಕಪ್ ಟೂರ್ನಿಯಿಂದಲೇ ಹೊರಬೀಳುವ ಆತಂಕದಲ್ಲಿ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ!!
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸತತ ಐದು ಗೆಲುವು ಸಾಧಿಸಿದ್ದು ಅಜೇಯ ತಂಡವಾಗಿ ಮುನ್ನುಗ್ಗುತ್ತಿದೆ. ಎಲ್ಲಾ ಆಟಗಾರರು ಕೂಡ ಅದ್ಭುತ ಪ್ರದರ್ಶನ ನೀಡುತ್ತಿದ್ದು ಸಂಘಟಿತ ಪ್ರದರ್ಶನ ಮೂಲಕ ಎದುರಾಳಿಗಳ ವಿರುದ್ಧ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗುತ್ತಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾಗೆ ದೊಡ್ಡ ಹಿನ್ನಡೆಯೊಂದು ಉಂಟಾಗಿದ್ದು ತಂಡದ ಸ್ಟಾರ್ ಆಟಗಾರ ಟೂರ್ನಿಯಿಂದಲೇ ಹೊರಬೀಳುವ ಆತಂಕ ಎದುರಾಗಿದೆ.
ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ವೇಲೆ ಗಾಯಕ್ಕೆ ತುತ್ತಾಗಿದ್ದರು. ಅದಾದ ಬಳಿಕ ಅವರು ಮೈದಾನ ತೊರೆದಿದ್ದು ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಅಲಭ್ಯವಾಗಿದ್ದಾರೆ. ಇದೀಗ ಹಾರ್ದಿಕ್ ಪಾಂಡ್ಯ ಮುಂದಿನ ಎರಡು ಪಂದ್ಯಗಳಿಗೆ ಅಲಭ್ಯವಾಗುವುದು ಖಚಿತವಾಗಿದೆ. ಹೀಗಾಗಿ ಹಾರ್ದಿಕ್ ಸಂಪೂರ್ಣ ವಿಶ್ವಕಪ್ ಟೂರ್ನಿಯಿಣದಲೇ ಹೊರಬೀಳುವ ಆತಂಕಕ್ಕೆ ಎದುರಾಗಿದೆ.

ಹಾರ್ದಿಕ್ ಪಾತ್ರ ನಿರ್ಣಾಯಕ
ಟೀಮ್ ಇಂಡಿಯಾದ ಆಡುವ ಬಳಗದ ಸಂಯೋಜನೆಯಲ್ಲಿ ಹಾರ್ದಿಕ್ ಪಾಂಡ್ಯ ಪಾತ್ರ ಬಹಳ ಮಹತ್ವದ್ದಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಹಾರ್ದಿಕ್ ಸಮಾನವಾದ ಬಲ ನೀಡುವ ಆಟಗಾರ. ವೇಗದ ಬೌಲಿಂಗ್ ನಡೆಸುವ ಕಾರಣ ಇದು ತಂಡದ ಸಂಯೋಜನೆಯಲ್ಲಿ ಬಹಳ ನಿರ್ಣಾಯಕ ಪಾತ್ರ ನಿರ್ವಹಿಸಿದ್ದರು. ಆದರೆ ಗಾಯದಿಂದಾಗಿ ಹಾರ್ದಿಕ್ ಅಲಭ್ಯವಾಗಿರುವ ಕಾರಣ ಅದನ್ನು ಸರಿದೂಗಿಸುವ ಅನಿವಾರ್ಯತೆಯಿದೆ.
ಎರಡು ಬದಲಾವಣೆ ಮಾಡಿಕೊಂಡಿದ್ದ ಭಾರತ
ಇನ್ನು ಕಳೆದ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಎರಡು ಬದಲಾವಣೆ ಮಾಡಿಕೊಳ್ಳಬೇಕಾಯಿತು. ಹಾರ್ದಿಕ್ ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿರುವ ಕಾರಣದಿಂದಾಗಿ ಅವರ ಸ್ಥಾನವನ್ನು ಯಥಾವತ್ತಾಗಿ ತುಂಬಬಲ್ಲ ಮತ್ತೋರ್ವ ಆಟಗಾರ ತಂಡದಲ್ಲಿಲ್ಲ. ಹಾಗಾಗಿ ಬ್ಯಾಟಿಂಗ್‌ನಲ್ಲಿ ಬಲ ನೀಡಲು ಸೂರ್ಯಕುಮಾರ್ ಯಾದವ್‌ಗೆ ಆಡುವ ಬಳಗದಲ್ಲಿ ಅವಕಾಶ ನೀಡಲಾಗಿದ್ದರೆ ಬೌಲಿಂಗ್‌ನಲ್ಲಿ ಶಾರ್ದೂಲ್ ಠಾಕೂರ್ ಬದಲಿಗೆ ಮೊಹಮ್ದ್ ಶಮಿಗೆ ತಂಡದಲ್ಲಿ ಸ್ಥಾನ ದೊರೆತಿತ್ತು.
ಇಂಗ್ಲೆಂಡ್ ಲಂಕಾ ವಿರುದ್ಧದ ಪಂದ್ಯಕ್ಕೂ ಇಲ್ಲ ಹಾರ್ದಿಕ್
ಇದೀಗ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಮುಂದಿನ ಎರಡು ಪಂದ್ಯಗಳಿಗೆ ಅಲಭ್ಯವಾಗುವುದು ಖಚಿತವಾಗಿದೆ. ಮುಂದಿನ ಭಾನುವಾ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಸೆಂಎಸಾಟ ನಡೆಸಲಿದೆ. ಲಕ್ನೋದ ಏಕಾನ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಅದಾದ ಬಳಿಕ ಭಾರತ ತಂಡಕ್ಕೆ ಶ್ರೀಲಂಕಾ ತಂಡ ಎದುರಾಳಿಯಾಗಿರಲಿದ್ದು ನವೆಂಬರ್ 2ರಂದು ನಡೆಯುವ ಈ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದೆ. ಈ ಎರಡು ಪಂದ್ಯಗಳಿಗೂ ಹಾರ್ದಿಕ್ ಅಲಭ್ಯವಾಗಲಿದ್ದಾರೆ.
ಸೂರ್ಯಕುಮಾರ್‌ಗೆ ಮತ್ತೆರಡು ಅವಕಾಶ
ಇನ್ನು ಹಾರ್ದಿಕ್ ಪಾಂಡ್ಯ ಗಾಯಾಳುವಾಗಿರುವ ಕಾರಣ ಸೂರ್ಯಕುಮಾರ್ ಯಾದವ್‌ಗೆ ಮತ್ತೆ ಅವಕಾಶ ದೊರೆತಂತಾಗಿದೆ. ವಿಶ್ವಕಪ್‌ನಲ್ಲಿ ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಬೆಂಚ್ ಹಾದಿದ್ದ ಸೂರ್ಯ ಐದನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡುವ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಆದರೆ ದುರದೃಷ್ಟವಶಾತ್ ರನೌಟ್ ಆದ ಕಾರಣ ಹೆಚ್ಚು ಕಾಲ ಕ್ರೀಸ್‌ನಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೊಮ್ಮೆ ಆಡುವ ಬಳಗದಲ್ಲಿ ಸೂರ್ಯಗೆ ಆಡುವ ಅವಕಾಶ ದೊರೆಯುವುದು ನಿಶ್ಚಿತ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications