Hardik Pandya: ಹಾರ್ದಿಕ್ ಪಾಂಡ್ಯ ಪ್ರೇಯಸಿ ಮಹಿಕಾ ಶರ್ಮಾ ಜೊತೆ ವಿಮಾನದಲ್ಲಿ ಚೆನ್ನೈಗೆ ಪ್ರಯಾಣ
Hardik Pandya: ಟಿ20 ವಿಶ್ವಕಪ್‌ನ ಸೂಪರ್ 8 ಹಂತದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಹೀನಾಯ ಸೋಲು ಕಂಡಿದೆ. ಫೆಬ್ರವರಿ 26ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ. ಈ ಹಿನ್ನೆಲೆ ಹಾರ್ದಿಕ್ ಪಾಂಡ್ಯ ತಮ್ಮ ಪ್ರೇಯಸಿ ಮಹಿಕಾ ಶರ್ಮಾ ಜೊತೆ ಚೆನ್ನೈಗೆ ಪ್ರಯಾಣ ಬೆಳೆಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟಿ20 ವಿಶ್ವಕಪ್ ಆರಂಭ ಆದಾಗಿನಿಂದಲೂ ಹಾರ್ದಿಕ್ ಪಾಂಡ್ಯಗೆ ಪ್ರೇಯಸಿ ಮಹಿಕಾ ಶರ್ಮಾ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಅಲ್ಲದೆ, ಬೇರೆ ಬೇರೆ ಕಡೆ ಪಂದ್ಯ ಇದ್ದಾಗ ಇಬ್ಬರು ಜೊತೆಗೆ ಪ್ರಯಾಣ ಬೆಳೆಸಿದ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಣದಲ್ಲಿ ಸಖತ್ ಸದ್ದು ಮಾಡುತ್ತಿವೆ.

ಮಹಿಕಾ ಪರ ನಿಂತ ಹಲವು ನೆಟ್ಟಿಗರು
ಆದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಪರ ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಕೇವಲ 18 ರನ್‌ಗಳನ್ನು ಕಲೆಹಾಕಿ ಪೆವಿಲಿಯನ್‌ಗೆ ತೆರಳಿದರು. ಈ ವೇಳೆ ಮಹಿಕಾ ಶರ್ಮಾ ನಗುತ್ತಾ ಚಪ್ಪಾಳೆ ಹೊಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೂ ಕಾರಣವಾಗಿತ್ತು. ಮಹಿಶಾ ನಡೆಗೆ ಪರ-ವಿರೋಧದ ಚರ್ಚೆಗಳು ಆದ್ವು. ಬಹುತೇಕರು ಹಾರ್ದಿಕ ಪಾಂಡ್ಯ ಅವರಿಗೆ ಧೈರ್ಯ ನೀಡುವ ಕೆಲಸವನ್ನು ಅವರು ಮಾಡಿದ್ದಾರೆ ಅಂತಲೇ ಹೇಳಿದ್ದಾರೆ.
ವಿಮಾನದಲ್ಲಿ ಒಟ್ಟಿಗೆ ಕಾಣಿಸಿಕೊಂಡ ಮಹಿಕಾ, ಹಾರ್ದಿಕ್
ಈ ಎಲ್ಲಾ ಬೆಳವಣಿಗೆಗಳ ನಡುವೆ ಮುಂದಿನ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಪ್ರೇಯಸಿ ಮಹಿಕಾ ಶರ್ಮಾ ಜೊತೆ ಚೆನ್ನೈಗೆ ಪ್ರಯಾಣ ಬೆಳೆಸಿ ಗಮನ ಸೆಳೆದಿದ್ದಾರೆ. ಜಿಂಬಾಬ್ವೆ ವಿರುದ್ಧ ನಡೆಯಲಿರುವ ಮಹತ್ವದ ಪಂದ್ಯಕ್ಕೂ ಮುನ್ನ ಇವರಿಬ್ಬರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್ನೂ ಸೂಪರ್ 8 ಹಂತದಲ್ಲಿ ಪ್ರತಿಯೊಂದು ಪಂದ್ಯವೂ ಮಹತ್ವ ಆಗಿರುವ ಹಿನ್ನೆಲೆ, ಜಿಂಬಾಬ್ವೆ ವಿರುದ್ಧದ ಈ ಪಂದ್ಯ ಭಾರತಕ್ಕೆ ನಿರ್ಣಾಯಕವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications