ಐಪಿಎಲ್: ಹಾರ್ದಿಕ್ ಪಾಂಡ್ಯ ಮೇಲೆ ಆರ್ ಸಿಬಿ ಕಣ್ಣು

Posted By:

ನವದೆಹಲಿ, ಅಕ್ಟೋಬರ್ 28: ಟೀಂ ಇಂಡಿಯಾದ ಪ್ರಮುಖ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅತ್ಯಧಿಕ ಮೊತ್ತಕ್ಕೆ ಬಿಕರಿಯಾಗುವ ಸುದ್ದಿ ಬಂದಿದೆ. ಸದ್ಯ ಮುಂಬೈ ಇಂಡಿಯನ್ಸ್‌ ಪರ ಆಡುತ್ತಿರುವ ಹಾರ್ದಿಕ್ ಅವರು ಮುಂದಿನ ಹರಾಜಿಗೆ ಲಭ್ಯವಾಗಲಿದ್ದಾರೆ.

‌ಐಪಿಎಲ್ 2018ರ ಹರಾಜಿಗೆ ಎಂಎಸ್ ಧೋನಿ, ಸುರೇಶ್ ರೈನಾ, ಬೆನ್ ಸ್ಟೋಕ್ಸ್, ಸ್ಟೀವ್ ಸ್ಮಿತ್ ಮುಂತಾದ ಸ್ಟಾರ್ ಆಟಗಾರರು ಸಿದ್ಧವಾಗಬೇಕಿದೆ. ಇವೆಲ್ಲರನ್ನು ಹಿಂದಿಕ್ಕಿ ಹಾರ್ದಿಕ್ ಪಾಂಡ್ಯ ಅವರು ಹೆಚ್ಚು ಮೊತ್ತಕ್ಕೆ ಮಾರಾಟವಾಗುವ ಸಾಧ್ಯತೆಯಿದೆ ಎಂದು ಕ್ರಿಕೆಟ್ ಪಂಡಿತರು ಲೆಕ್ಕ ಹಾಕಿದ್ದಾರೆ.

Hardik Pandya willing to go under the hammer in IPL 2018, Mumbai Indians eager to retain him

ಟೀಂ ಇಂಡಿಯಾ ಹಾಗೂ ಆರ್‌ಸಿಬಿ ತಂಡದ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಅವರು ಹಾರ್ದಿಕ್‌‌ ಪಾಂಡ್ಯ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದಾರೆ.ಆರ್‌ಸಿಬಿ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಆಲ್ ರೌಂಡರ್ ಗಳ ಕೊರತೆ ಇದೆ. ಹೀಗಾಗಿ ಪಾಂಡ್ಯ ಅವರನ್ನು ಹೇಗಾದ್ರೂ ತಂಡಕ್ಕೆ ಸೇರಿಸಿಕೊಳ್ಳಲು ಕೊಹ್ಲಿ ಬಯಸಿದ್ದಾರೆ.

ಈ ಹಿಂದೆ ಯುವರಾಜ್‌ ಸಿಂಗ್‌ 16ಕೋಟಿಗೆ ಬಿಕರಿಯಾಗಿದ್ದರು. ಬೆನ್ ಸ್ಟೋಕ್ಸ್ 14 ಕೋಟಿ ರುಗೆ ಸೇಲ್ ಆಗಿದ್ದರು. ಮುಂಬೈ ಪರ ಆಡದೆ ಹರಾಜಿಗೆ ಲಭ್ಯವಾಗಲು ಸಿದ್ಧ ಎಂದು ಪಾಂಡ್ಯ ಹೇಳಿದ್ದಾರೆ. 2015ರಲ್ಲಿ 10 ಲಕ್ಷ ರು ಮೂಲ ಬೆಲೆಗೆ ಮುಂಬೈ ತಂಡದ ಪಾಲಾಗಿದ್ದರು. ಹಿರಿಯ ಸೋದರ ಕೃನಾಲ್ 2 ಕೋಟಿ ರು ಗೆ ಮುಂಬೈ ತಂಡವನ್ನು ಸೇರಿದರು. ನಂತರ ಹಾರ್ದಿಕ್ ಬೆಲೆ 20 ಲಕ್ಷ ರುಗೇರಿತ್ತು.

ಏಪ್ರಿಲ್ 4ರಿಂದ ಹನ್ನೊಂದನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಒಟ್ಟು 57 ದಿನಗಳ ಕಾಲ ನಡೆಯಲಿರುವ ಐಪಿಎಲ್ ಟೂರ್ನಿ ಮೇ 31 ರಂದು ಫೈನಲ್ ಪಂದ್ಯದೊಂದಿಗೆ ಅಂತ್ಯಗೊಳ್ಳಲಿದೆ.

ಆದರೆ, ಇದೆಲ್ಲವೂ ಬಿಸಿಸಿಐನ ಹೊಸ ನಿಯಮಗಳ ಮೇಲೆ ನಿಂತಿದೆ. ಆಟಗಾರರನ್ನು ಉಳಿಸಿಕೊಳ್ಳುವ ಬಗ್ಗೆ ಇನ್ನೂ ವಿವರಣೆ ಸಿಕ್ಕಿಲ್ಲ.

Story first published: Sunday, October 29, 2017, 13:09 [IST]
Other articles published on Oct 29, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ