IND vs SL 1st T20: ಯಾವ ಭಾರತೀಯ ಕ್ರಿಕೆಟಿಗ ಮಾಡಲಾರದ ಸಾಧನೆ ಮಾಡಿದ ಹಾರ್ದಿಕ್ ಪಾಂಡ್ಯ!
ಜುಲೈ 28 ಭಾನುವಾರ, ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಈ ಸಂದರ್ಭದಲ್ಲಿ 9 ರನ್ ಗಳಿಸುತ್ತಿದ್ದಂತೆ ಟಿ20 ಕ್ರಿಕೆಟ್‌ನಲ್ಲಿ ಪಾಂಡ್ಯ ವಿಶೇಷ ದಾಖಲೆ ಬರೆದರು.
ಅಲ್ಲದೆ, ಇಲ್ಲಿಯವರೆಗೂ ಈ ಸಾಧನೆಯನ್ನು ಬೇರೆ ಯಾವ ಭಾರತೀಯ ಕ್ರಿಕೆಟಿಗನೂ ಮಾಡಲು ಸಾಧ್ಯವಾಗಿಲ್ಲ. ಹಾರ್ದಿಕ್ ಪಾಂಡ್ಯ ಅಂತಾರಾಷ್ಟ್ರೀಯ ಟಿ20ಯಲ್ಲಿ 1500 ರನ್ ಮತ್ತು 50 ವಿಕೆಟ್‌ಗಳನ್ನು ಪೂರೈಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಪಂದ್ಯಕ್ಕೂ ಮುನ್ನ ಹಾರ್ದಿಕ್ ಅಂತಾರಾಷ್ಟ್ರೀಯ ಟಿ20ಯಲ್ಲಿ 1492 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಗಳಿಸಿದ 8 ರನ್‌ಗಳೊಂದಿಗೆ, ಪಾಂಡ್ಯ ಟಿ20 ಅಂತರರಾಷ್ಟ್ರೀಯದಲ್ಲಿ 1500 ರನ್‌ಗಳ ಗಡಿ ದಾಟಿದರು. ಈ ಸಾಧನೆ ಮಾಡಿದ 8ನೇ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಹಾರ್ದಿಕ್‌ಗಿಂತ ಮೊದಲು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಶಿಖರ್ ಧವನ್, ಎಂಎಸ್ ಧೋನಿ ಮತ್ತು ಸುರೇಶ್ ರೈನಾ ಈ ಸಾಧನೆ ಮಾಡಿದ್ದಾರೆ. ವಿಕೆಟ್‌ಗಳ ಬಗ್ಗೆ ನೋಡುವುದರೆ, ಹಾರ್ದಿಕ್ ಚುಟುಕು ಕ್ರಿಕೆಟ್‌ನಲ್ಲಿ 84 ವಿಕೆಟ್‌ಗಳನ್ನು ಪಡೆದಿದ್ದರು.
ಹಾರ್ದಿಕ್ ಟಿ20 ದಾಖಲೆ
ಹಾರ್ದಿಕ್ ಪಾಂಡ್ಯ ಇದುವರೆಗೆ 101 ಟಿ20 ಪಂದ್ಯಗಳನ್ನು ಆಡಿದ್ದು, 140 ಸ್ಟ್ರೈಕ್ ರೇಟ್‌ನಲ್ಲಿ 1501 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಪಾಂಡ್ಯ ಬ್ಯಾಟ್‌ನಿಂದ 4 ಅರ್ಧ ಶತಕಗಳು ಕೂಡ ಬಂದಿದ್ದು, ಉತ್ತಮ ಸ್ಕೋರ್ 71 ರನ್. ಈ ಮಾದರಿಯಲ್ಲಿ ಹಾರ್ದಿಕ್ ಪಾಂಡ್ಯ ಹೆಸರಿನಲ್ಲಿ 78 ಸಿಕ್ಸರ್‌ಗಳಿವೆ. ಬೌಲಿಂಗ್‌ನಲ್ಲಿಯೂ ಹಾರ್ದಿಕ್ 84 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ಶ್ರೀಲಂಕಾ ವಿರುದ್ಧ ಭಾರತ ಬ್ಯಾಟಿಂಹ್ ಪ್ರದರ್ಶನ
ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ (40 ರನ್) ಮತ್ತು ಶುಭಮನ್ ಗಿಲ್ (34 ರನ್) ಅವರ ಅದ್ಭುತ ಆರಂಭಿಕ ಜೊತೆಯಾಟದ ನಂತರ, ರಿಷಬ್ ಪಂತ್ (49 ರನ್) ಮತ್ತು ಸೂರ್ಯಕುಮಾರ್ ಯಾದವ್ (58 ರನ್) ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು.
ಹೀಗಾಗಿ ಭಾರತ 213 ರನ್‌ಗಳನ್ನು ಕಲೆ ಹಾಕಿತ್ತು.
ಸೂರ್ಯ ಅವರ ಅರ್ಧಶತಕದ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. ಪಂತ್ 6 ಬೌಂಡರಿ ಹಾಗೂ 1 ಸಿಕ್ಸರ್ ಹೊಡೆದರು. ಹಾರ್ದಿಕ್ ಪಾಂಡ್ಯ (9 ರನ್), ರಿಯಾನ್ ಪರಾಗ್ (7 ರನ್) ಮತ್ತು ರಿಂಕು ಸಿಂಗ್ (1 ರನ್) ಅವರು ಹೇಳಿ ಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಕೊನೆಯಲ್ಲಿ ಅಕ್ಷರ್ ಪಟೇಲ್ (10 ರನ್) ಮತ್ತು ಅರ್ಷದೀಪ್ ಸಿಂಗ್ (1 ರನ್) ಅಜೇಯರಾಗಿ ಉಳಿದರು.
ಶ್ರೀಲಂಕಾ ಪರ ಮತಿಶಾ ಪತಿರಾನ 4 ಓವರ್‌ಗಳಲ್ಲಿ 40 ರನ್ ನೀಡಿ 4 ವಿಕೆಟ್ ಪಡೆದರು. ದಿಲ್ಶಾನ್ ಮಧುಶಂಕ, ಅಸಿತ ಫೆರ್ನಾಂಡೋ ಮತ್ತು ವನಿಂದು ಹಸರಂಗ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications