Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯಾ ಕಪ್‌ ಬಹುಮಾನ ಮೊತ್ತಕ್ಕಿಂತ 7 ಪಟ್ಟು ದುಬಾರಿ ಹಾರ್ದಿಕ್ ಪಾಂಡ್ಯ ವಾಚ್

ಮಂಗಳವಾರದಿಂದ ಯುಇಎನಲ್ಲಿ ಏಷ್ಯಾ ಕಪ್‌ ಟಿ20 ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಗೆ ಟೀಮ್ ಇಂಡಿಯಾ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಟೀಮ್ ಇಂಡಿಯಾದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ತಂಡದಲ್ಲಿ ಹೆಸರಾಂತ ಆಟಗಾರರು ಇದ್ದು, ಚಾಂಪಿಯನ್‌ ಪಟ್ಟವನ್ನು ಅಲಂಕರಿಸುವ ಭರವಸೆಯನ್ನು ಚಿಗುರಿಸಿದ್ದಾರೆ. ಸ್ಟಾರ್ ಆಲ್‌ರೌಂಡರ್ ಹಾರ್ದಿಕ್‌ ಪಾಂಡ್ಯ ಸಹ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರ.

ಹಾರ್ದಿಕ್ ಪಾಂಡ್ಯ ಟೂರ್ನಿಗೂ ಮುನ್ನ ಎಲ್ಲರ ಚಿತ್ತ ಕದ್ದಿದ್ದರು. ಇವರು ತಲೆ ಕೂದಿಲಿಗೆ ಬಣ್ಣ ಹಚ್ಚಿಕೊಂಡು ಸಖತ್ ವೈರಲ್ ಆಗಿದ್ದಾರೆ. ಈಗ ಮತ್ತೊಮ್ಮೆ ಹಾರ್ದಿಕ್ ಪಾಂಡ್ಯ ಸುದ್ದಿಯಲ್ಲಿದ್ದಾರೆ. ಈ ಬಾರಿ ಪಾಂಡ್ಯ ತಮ್ಮ ಆಟದಿಂದ ಅಲ್ಲ. ಬದಲಿಗೆ ಅವರು ಕಟ್ಟಿಕೊಂಡಿರುವ ವಾಚ್‌ನಿಂದ ಹೆಚ್ಚು ಚರ್ಚೆಗೆ ಒಳಪಟ್ಟಿದ್ದಾರೆ.

Hardik Pandya s 18 Cr Watch At Asia Cup Practice 7 Times More Than Prize Money

ಹಾರ್ದಿಕ್ ತಮ್ಮ ಐಷಾರಾಮಿ ಜೀವನಶೈಲಿಗೂ ಹೆಸರುವಾಸಿಯಾಗಿದ್ದಾರೆ. ಅಭ್ಯಾಸದ ಸಮಯದಲ್ಲಿ, ಹಾರ್ದಿಕ್ ಪಾಂಡ್ಯ ಕೈಯಲ್ಲಿ ಒಂದು ಗಡಿಯಾರ ಕಾಣಿಸಿಕೊಂಡಿತು, ಅದರ ಬೆಲೆ ಏಷ್ಯಾ ಕಪ್‌ನ ಬಹುಮಾನದ ಹಣಕ್ಕಿಂತ ಏಳು ಪಟ್ಟು ಹೆಚ್ಚು. ಇವರು ದುಬಾರಿ ಸಾಮಗ್ರಿಗಳನ್ನು ಬಳಸುತ್ತಾರೆ. ಅಭ್ಯಾಸ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಕೈಯಲ್ಲಿನ ವಾಚ್‌ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇವರು ರಿಚರ್ಡ್ ಮಿಲ್ಲೆ RM27-04 ಧರಿಸಿದ್ದರು. ಈ ಗಡಿಯಾರ ಎಲ್ಲರ ಚಿತ್ತವನ್ನು ಕದ್ದಿದೆ.

ಹಾರ್ದಿಕ್ ಪಾಂಡ್ಯ ವಾಚ್‌ ಬೆಲೆ ಎಷ್ಟು?

ರಿಚರ್ಡ್ ಮಿಲ್ಲೆ ಸ್ಪೇಷಲ್‌ ಎಡಿಷನ್‌ ವಾಚ್‌ ಶ್ರೇಷ್ಠ ಟೆನಿಸ್ ಆಟಗಾರ ರಾಫೆಲ್ ನಡಾಲ್‌ಗಾಗಿ ತಯಾರಿಸಲಾಗಿತ್ತು. ಹೀಗಾಗಿಯೇ ಈ ವಾಚ್‌ನ್ನು ರಾಫೆಲ್‌ ನಡಾಲ್‌ ಎಡಿಷನ್‌ ವಾಚ್‌ ಎಂದೇ ಕರೆಯುತ್ತಾರೆ. ಈ ಗಡಿಯಾರದ ಬೆಲೆ ಸುಮಾರು 18 ಕೋಟಿ ರೂ. ಆಗಿದೆ ಎಂದು ಅಂದಾಜಿಸಲಾಗಿದೆ.

ಯುಎಇನಲ್ಲಿ ನಡೆಯಲಿರುವ ಏಷ್ಯಾ ಕಪ್‌ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ತಂಡಕ್ಕೆ 2.6 ಕೋಟಿ ರೂ. ಬಹುಮಾನ ಮೊತ್ತವನ್ನು ನೀಡಲಾಗುತ್ತದೆ. ಈ ಮೊತ್ತ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ ತಂಡಕ್ಕೆ ನೀಡಲಾಗುತ್ತದೆ. ಹಾರ್ದಿಕ್ ಪಾಂಡ್ಯ ಏಷ್ಯಾ ಕಪ್‌ ಟಿ20 ಟೂರ್ನಿಯ ಬಹುಮಾನ ಮೊತ್ತಕ್ಕಿಂತ ಏಳು ಪಟ್ಟು ಹೆಚ್ಚಿನ ದುಬಾರಿ ಬೆಲೆಯ ವಾಚ್ ಕಟ್ಟಿಕೊಂಡು ಅಭ್ಯಾಸ ಆರಂಭಿಸಿದ್ದಾರೆ. ಹಾರ್ದಿಕ್‌ ಕಟ್ಟಿಕೊಂಡಿರುವ ವಾಚ್‌ ಅವರ ಐಶಾರಾಮಿ ಜೀವನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ವಾಚ್‌ ಸದ್ಯ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಭಾರತ ಈ ಬಾರಿಯ ಏಷ್ಯಾ ಕಪ್‌ ಟಿ20 ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುತ್ತಿದೆ. ಇನ್ನು ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು, 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಲೀಗ್‌ ಹಂತದಲ್ಲಿ ತಲಾ ಮೂರು ಪಂದ್ಯಗಳು ಪ್ರತಿ ತಂಡಕ್ಕೂ ಸಿಗಲಿದ್ದು, ಗುಂಪು ಹಂತದಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಸೂಪರ್‌ 4 ಹಂತಕ್ಕೆ ಅರ್ಹತೆ ಪಡೆಯಲಿವೆ. ಸೂಪರ್‌ 4 ನಲ್ಲಿ ಅಗ್ರ ಎರಡು ಸ್ಥಾನ ಪಡೆದಿರುವ ತಂಡಗಳು ಫೈನಲ್‌ಗೆ ಎಂಟ್ರಿ ಪಡೆಯಲಿವೆ.

Story first published: Tuesday, September 9, 2025, 13:01 [IST]
Other articles published on Sep 9, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+