ಭಾನುವಾರ, ಅಕ್ಟೋಬರ್ 22ರಂದು ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ತಂಡ ಭಾರೀ ಹಿನ್ನಡೆ ಅನುಭವಿಸಿದೆ.
ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ನ್ಯೂಜಿಲೆಂಡ್ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಹಾರ್ದಿಕ್ ಹಿಮಾಚಲ ಪ್ರದೇಶದಲ್ಲಿ ನಡೆಯುವ ಮುಂದಿನ ಪಂದ್ಯಕ್ಕೆ ತಂಡದೊಂದಿಗೆ ಪ್ರಯಾಣಿಸುವುದಿಲ್ಲ.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಉಂಟಾದ ಪಾದದ ಗಾಯ ಚಿಕಿತ್ಸೆಗಾಗಿ ಹಾರ್ದಿಕ್ ಪಾಂಡ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಗೆ ವಾಪಸ್ಸಾಗಲಿದ್ದಾರೆ.

ಗುರುವಾರ ಪುಣೆಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದ ಸಮಯದಲ್ಲಿ ತಮ್ಮದೇ ಬೌಲಿಂಗ್‌ನಲ್ಲಿ ಫೀಲ್ಡಿಂಗ್ ಮಾಡುವಾಗ, ಹಾರ್ದಿಕ್ ಪಾಂಡ್ಯ ತನ್ನ ಬಲಗಾಲಿನಿಂದ ಚೆಂಡನ್ನು ನಿಲ್ಲಿಸಲು ಪ್ರಯತ್ನಿಸಿದರು. ಆದರೆ, ಪಾದ ತಿರುವಿಕೊಂಡು ಬಿದ್ದನು. ಹೀಗಾಗಿ ಸ್ಕ್ಯಾನ್‌ಗಾಗಿ ಮೈದಾನದಿಂದ ಹೊರನಡೆಯಬೇಕಾಯಿತು ಮತ್ತು ಪಂದ್ಯದ ಉಳಿದ ಭಾಗವನ್ನು ತಪ್ಪಿಸಿಕೊಂಡರು.
ಪಂದ್ಯದ ನಂತರ ಅಭಿಮಾನಿಗಳು ಮತ್ತು ಸುದ್ದಿಗಾರರಿಗೆ ಮಾಹಿತಿ ನೀಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಅವರ ಪಾದದ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ ಎಂದು ಹೇಳಿದ್ದಾರೆ.
ಸುಮಾರು 12 ಗಂಟೆಗಳ ನಂತರ, ಎನ್‌ಸಿಎನಲ್ಲಿ ಚಿಕಿತ್ಸೆ ಪಡೆಯಲು ಹಾರ್ದಿಕ್ ಪಾಂಡ್ಯ ಶುಕ್ರವಾರ ಬೆಂಗಳೂರಿಗೆ ಹಾರಲಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಅಲ್ಲಿಗೆ ಇಂಗ್ಲೆಂಡ್‌ನ ತಜ್ಞ ವೈದ್ಯರಿಂದ ಹಾರ್ದಿಕ್ ಪಾಂಡ್ಯ ಅವರಿಗೆ ಚಿಕಿತ್ಸೆ ನೀಡಲಾಗುವುದು. ಎನ್‌ಸಿಎಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದೆ.
"ಹಾರ್ದಿಕ್ ಪಾಂಡ್ಯ ಬೆಂಗಳೂರಿಗೆ ಹೋಗುತ್ತಾರೆ, ಅಲ್ಲಿ ಅವರನ್ನು ಎನ್‌ಸಿಎಗೆ ವರದಿ ಮಾಡಲು ಕೇಳಲಾಗಿದೆ. ವೈದ್ಯಕೀಯ ತಂಡವು ಅವರ ಪಾದದ ಸ್ಕ್ಯಾನ್ ವರದಿಯನ್ನು ಮೌಲ್ಯಮಾಪನ ಮಾಡಿದೆ ಮತ್ತು ಅವರು ಚುಚ್ಚುಮದ್ದು ತೆಗೆದುಕೊಳ್ಳುವ ಮೂಲಕ ಉತ್ತಮವಾಗಲಿದ್ದಾರೆಂದು ತೋರುತ್ತಿದೆ".
"ಬಿಸಿಸಿಐ ಇಂಗ್ಲೆಂಡ್‌ನಲ್ಲಿರುವ ತಜ್ಞ ವೈದ್ಯರನ್ನು ಸಂಪರ್ಕಿಸಿದೆ ಮತ್ತು ಅವರೂ ಇದೇ ಅಭಿಪ್ರಾಯವನ್ನು ಹೊಂದಿದ್ದರು. ಅವರು ಮುಂದಿನ ಪಂದ್ಯವನ್ನು ಬಹುತೇಕ ಕಳೆದುಕೊಳ್ಳಲಿದ್ದಾರೆ," ಎಂದು ಬಿಸಿಸಿಐ ಅನಾಮಧೇಯ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿದ್ದಾರೆ.
ಈ ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಭಾರತದ ಪ್ರಮುಖ ಆಟಗಾರರಲ್ಲಿ ಒಬ್ಬರು. ಗುಣಮಟ್ಟದಲ್ಲಿ ಯಾವುದೇ ಪೇಸ್-ಬೌಲಿಂಗ್ ಆಲ್‌ರೌಂಡರ್ ಅವರ ಹತ್ತಿರ ಬರುವುದಿಲ್ಲ. ಅವರ ಆಲ್‌ರೌಂಡ್ ಕೌಶಲ್ಯಗಳು ಭಾರತದ ಆಡುವ 11ರ ಬಳಗದಲ್ಲಿ ಹೆಚ್ಚು ಅಗತ್ಯವಿರುವ ಸಮತೋಲನವನ್ನು ಒದಗಿಸಲು ಸಹಾಯ ಮಾಡುತ್ತವೆ.

ಹಾರ್ದಿಕ್ ಪಾಂಡ್ಯ ಗಾಯಗೊಂಡರೆ, ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಭಾರತದ ಪ್ರಶಸ್ತಿ ಗೆಲ್ಲುವ ಅವಕಾಶಕ್ಕೆ ದೊಡ್ಡ ಹೊಡೆತ ಬೀಳಲಿದೆ. ಹಾರ್ದಿಕ್ ಪಾಂಡ್ಯ ಆಡದಿದ್ದಲ್ಲಿ, ಭಾರತ ತಂಡ ಇಶಾನ್ ಕಿಶನ್ ಅಥವಾ ಸೂರ್ಯಕುಮಾರ್ ಯಾದವ್ ಅವರನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಳ್ಳಲಿದೆ.
ಅಂದರೆ, ವೇಗದ ಬೌಲಿಂಗ್ ವಿಭಾಗವನ್ನು ಬಲಪಡಿಸಲು ಶಾರ್ದೂಲ್ ಠಾಕೂರ್ ಬದಲಿಗೆ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಿಕೊಳ್ಳಬಹುದು.
ಆದಾಗ್ಯೂ, ರವಿಚಂದ್ರನ್ ಅಶ್ವಿನ್ ಅವರ ಪಾತ್ರವು ನಿರ್ಣಾಯಕವಾಗಿದೆ. ಭಾರತವು ಮೂರು ಸ್ಪಿನ್ನರ್‌ಗಳನ್ನು ಮತ್ತು ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ರೂಪದಲ್ಲಿ ಕೇವಲ 2 ವೇಗಿಗಳನ್ನು ಆಡಿಸಬೇಕಾಗುತ್ತದೆ.
ಭಾರತಕ್ಕೆ ಯಾವುದೇ ಸಂದರ್ಭದಲ್ಲಿ ಒಬ್ಬ ಬೌಲರ್ ಕೊರತೆಯಾಗಲಿದೆ. ಅದಕ್ಕಾಗಿಯೇ ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ಅತ್ಯಂತ ಮಹತ್ವದ್ದಾಗಿದೆ ಮತ್ತು ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯಕ್ಕೆ ಅವರನ್ನು ಫಿಟ್ ಮಾಡಲು ಬಿಸಿಸಿಐ ಯಾವುದೇ ಸಮಯವನ್ನು ವ್ಯರ್ಥ ಮಾಡುತ್ತಿಲ್ಲ.
ಅದೃಷ್ಟವಶಾತ್, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಭಾರತದ ಪಂದ್ಯವು ಏಳು ದಿನಗಳ ವಿರಾಮವನ್ನು ಹೊಂದಿದೆ ಮತ್ತು ಅದು ಹಾರ್ದಿಕ್ ಪಾಂಡ್ಯಗೆ ಚೇತರಿಸಿಕೊಳ್ಳಲು ಸಾಕಷ್ಟು ಸಮಯವನ್ನು ನೀಡಲಿದೆ.