ಟೀಮ್ ಇಂಡಿಯಾದ ಸ್ಟೈಲಿಷ್ ಆಲ್‌ರೌಂಡರ್‌ಗಳಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ಹೆಸರು. ಇವರು ಇತ್ತಿಚಿಗೆ ಏಷ್ಯಾ ಕಪ್‌ಗೂ ಮುನ್ನ ತಮ್ಮ ಕುದಲಿನ ಕಲರ್ ಚೇಂಜ್ ಮಾಡಿಕೊಂಡು ಸುದ್ದಿಯಲ್ಲಿದ್ದರು. ಈಗ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ತಮ್ಮ ಆಟದಿಂದ ಸುದ್ದಿಯಲ್ಲಿಲ್ಲ. ಬದಲಿಗೆ ಈಗ ಹಾರ್ದಿಕ್ ಪಾಂಡ್ಯ ಅವರ ಹೊಸ ಸಂಬಂಧ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಆ ಯುವತಿ ಯಾರು? ಏನು ಮಾಡ್ತಿದ್ದಾರೆ ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಜೀವನ ಅಷ್ಟೊಂದು ಹೇಳಿಕೊಳ್ಳುವಂತೆ ಇಲ್ಲ. ಇವರ ಪತ್ನಿ ನತಾಶಾ ಸ್ಟಾಂಕೋವಿಕ್ ಅವರೊಂದಿಗೆ ಬೇರ್ಪಟ್ಟ ನಂತರ ಗಾಯಕಿ ಜಾಸ್ಮಿನ್ ವಾಲಿಯಾ ಅವರೊಂದಿಗೆ ಸಬಂಧ ಹೊಂದಿದ್ದಾಗಿ ಸುದ್ದಿಗಳು ಇದ್ದವು. ಈಗ ಇವರ ಹೆಸರು ಬೇರೆ ಯುವತಿಯೊಂದಿಗೆ ತಳಕು ಹಾಕಿಕೊಂಡಿದೆ. ಹಾರ್ದಿಕ್ ಅವರು ಮಾಡೆಲ್ ಮತ್ತು ನಟಿ ಮಹಿಕಾ ಶರ್ಮಾ ಅವರೊಂದಿಗೆ ಸಂಬಂಧ ಹೊಂದಿದ್ದಾಗಿ ಚರ್ಚೆಗಳು ಆರಂಭವಾಗಿವೆ.

ದೆಹಲಿಯ ಮಹಿಕಾ ಶರ್ಮಾ ಚಿಕ್ಕ ವಯಸ್ಸಿನಲ್ಲಿ ಹೆಸರು ಮಾಡಿದ ಪ್ರತಿಭೆ. ಇವರು ನೌಕಾಪಡೆಯ ಶಾಲೆಯಿಂದ ಆರಂಭಿಕ ಅಧ್ಯಯನ ಮಾಡಿದ್ದಾರೆ. ಇವರು ಅರ್ಥಶಾಸ್ತ್ರ ಮತ್ತು ಹಣಕಾಸು ವಿಷಯದಲ್ಲಿ ಪದವಿ ಪಡೆದಿದ್ದಾರೆ. ಇವರು ಅಭ್ಯಾಸದಲ್ಲಿ ಯಾವಾಗಲೂ ಮುಂದೆ. ಇವರು ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್, ಶಿಕ್ಷಣ ಮತ್ತು ತೈಲ-ಅನಿಲ ತಂತ್ರದಂತಹ ಕ್ಷೇತ್ರಗಳಲ್ಲಿ ಇಂಟರ್ನ್‌ಶಿಪ್‌ಗಳನ್ನು ಸಹ ಮಾಡಿದ್ದಾರೆ.
ವ್ಯಾಸಂಗ ಮುಗಿಸಿದ ಬಳಿಕ ಮಹಿಕಾ ಶರ್ಮಾ ಮಾಡೆಲಿಂಗ್ ಹಾಗೂ ನಟನೆಯಲ್ಲಿ ತೊಡಗಿಸಿಕೊಂಡರು. ಇವರು ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ನಿರ್ಮಾಪಕ ಒರ್ಲ್ಯಾಂಡೊ ವಾನ್ ಐನ್‌ಸೀಡೆಲ್ ಅವರ "ಇಂಟು ದಿ ಡಸ್ಕ್" ನಲ್ಲಿಯೂ ಕೆಲಸ ಮಾಡಿದ್ದಾರೆ. ಇವರು ಹೆಸರಾಂತ ಮೊಬೈಲ್ ಕಂಪನಿಗಳ ಆಡ್‌ನಲ್ಲಿಯೂ ಕೆಲಸ ಮಾಡಿದ್ದಾರೆ. ಇವರು ಖ್ಯಾತ ವಿನ್ಯಾಸಕರೊಂದಿಗೆ ಕೆಲಸ ಮಾಡಿದ್ದು, ಇವರು 2024ರಲ್ಲಿ ವರ್ಷದ ಮಾಡೆಲ್ ಪ್ರಶಸ್ತಿ ಪಡೆದಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಪೋಸ್ಟ್ ವೈರಲ್ ಆದಾಗ ಇವರ ಬಗ್ಗೆ ಅಭಿಮಾನಿಗಳು ಹುಡುಕಲು ಆರಂಭಿಸಿದರು. ಮಹಿಕಾ ಕ್ಲಿಕಿಸಿಕೊಂಡ ಸೆಲ್ಫಿಯ ಹಿನ್ನೆಲೆಯಲ್ಲಿ ಹಾರ್ದಿಕ್ ಅವರನ್ನು ಕಂಡರು. ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ಇತ್ತೀಚಿಗೆ ಮಹಿಕಾ ಹಾರ್ದಿಕ್ ಪಾಂಡ್ಯ ಅವರ ಜೆರ್ಸಿಯನ್ನು ಪ್ರದರ್ಶಿಸಿದ್ದರು. ಇನ್ನು ಇಬ್ಬರೂ ಸ್ಟಾರ್‌ಗಳು ತಮ್ಮ ಸಂಬಂಧದ ಬಗ್ಗೆ ಮಾತನಾಡಿಲ್ಲ.
ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸರ್ಬಿಯಾದ ನತಾಶಾ ಸ್ಟಾಂಕೋವಿಕ್ ಅವರನ್ನು 2020ರಲ್ಲಿ ವಿವಾಹವಾದರು. ಇವರಿಗೆ 2023ರಲ್ಲಿ ಗಂಡು ಮಗು ಸಹ ಜನಿಸಿತು. ಈ ಮಗುವಿಗೆ ದಂಪತಿ ಅಗಸ್ತ್ಯ ಎಂದು ನಾಮಕರಣ ಮಾಡಿದ್ದಾರೆ. ಆದರೆ ಈ ತಾರಾ ಜೋಡಿಯ ಸಂಬಂಧ 2024ರಲ್ಲಿ ಕೊನೆಗೊಂಡಿದೆ. ಇವರೊಂದಿಗೆ ವಿಚ್ಛೆದನ ಪಡೆದ ಬಳಿಕ ಹಾರ್ದಿಕ್ ಜಾಸ್ಮಿನ್ ವಾಲಿಯಾ ಅವರೊಂದಿಗೆ ಸಂಬಂಧ ಹೊಂದಿದ್ದರು. ಆದರೆ ಈ ಸಂಬಂಧ ಸಹ ಬ್ರೇಕ್ ಆಗಿದೆ.